ಇಂಡೋನೇಷ್ಯಾದಲ್ಲಿ(indonesia) ಭಾರೀ ಅಗ್ನಿ ದುರಂತ(Fire Accident) ಸಂಭವಿಸಿದ್ದು, ಇಪ್ಪತ್ತು ಜನರು ದಾರುಣವಾಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇಂದು ಮಧ್ಯಾಹ್ನ ಜರ್ಕಾತ್‌ನಲ್ಲಿನ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡುನೋಡುತ್ತಿದ್ದಂತೆ ಸಂಪೂರ್ಣ ಕಟ್ಟಡ ಬೆಂಕಿ ಆವರಿಸಿದೆ.

ಕ್ಷಣಾರ್ಧದಲ್ಲಿ ಮೊದಲ ಮಹಡಿಯಿಂದ ಬೆಂಕಿ ಕಟ್ಟಡದಾದ್ಯಂತ ಆವರಿಸಿದ್ದು, ದಟ್ಟವಾದ ಕಪ್ಪು ಹೊಗೆ ತುಂಬಿಕೊಂಡಿತ್ತು. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಬೆಂಕಿ ಅಪಘಾತದಲ್ಲಿ ಇಪ್ಪತ್ತು ಜನರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನು ಘಟನೆಯಲ್ಲಿ ಓರ್ವ ಗರ್ಭಿಣಿ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ಸದ್ಯ ರಕ್ಷಣಾ ಕಾರ್ಯಚರಣೆ ಮುಂದುವರೆದಿದ್ದು, ಟೆರ್ರಾ ಡ್ರೋನ್ ಇಂಡೋನೇಷ್ಯಾ ಕಟ್ಟಡ ಬಳಿ ಜನರ ಗೋಳಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.










