ಬಸ್ಸಿನಲ್ಲಿ (Bus) ಕುಳಿತು ತಮ್ಮ ತಮ್ಮ ಊರಿನ ಕಡೆಗೆ ಪ್ರಯಾಣ ಬೆಳೆಸುತ್ತಿದ್ದ ಸಾರ್ವಜನಿಕರು (citizens) ಒಂದು ಕ್ಷಣ ಬೆಚ್ಚಿಬಿದ್ದ ಘಟನೆ ಖಾಸಾಗಿ ಬಸ್ ಒಂದರಲ್ಲಿ ನಡೆದಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ (lady) ಬ್ಯಾಗ್ ನಲ್ಲಿದ್ದ ವಸ್ತುವೊಂದು ಇದ್ದಕ್ಕಿದ್ದ ಹಾಗೆ ಸ್ಫೋಟಗೊಂಡಿದ್ದು (Blast) ಕೂದಲೆಳೆ ಅಂತರದಲ್ಲಿ ಬಾರಿ ದುರಂತ ಸಂಭವಿಸಿದೆ.

ತುಮಕೂರಿನಿಂದ ಕುಣಿಗಲ್ (Tumkur to kunigal) ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್‌ನಲ್ಲಿ ಈ ರೀತಿ ನಿಗೂಢ ಸ್ಫೋಟವೊಂದು ಸಂಭವಿಸಿರೋದು. ಈ ಸ್ಫೋಟದಿಂದ 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ (10 passengers) ಗಾಯಗಳಾಗಿದೆ. ಈ ಘಟನೆ ಗೂಳೂರು ಸಮೀಪ ಗಣಪತಿ ಅನ್ನೋ ಬೋರ್ಡ್ ಹೊಂದಿದ್ದ ಖಾಸಗಿ ಬಸ್‌ನಲ್ಲಿ ನಡೆದಿದೆ. ಎಲ್ಲಾ ಗಾಯಗೊಂಡ ಪ್ರಯಾಣಿಕರನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.

ಮಹಿಳೆ ಒಬ್ಬರು ತನ್ನೊಂದಿಗೆ ಟಾಯ್ಲೆಟ್(Toilet) ತೊಳೆಯಲು ಬಳಸುವ ಆ್ಯಸಿಡ್ (Acid) ಬಾಟಲ್ ತೆಗೆದುಕೊಂಡು ಪ್ರಯಾಣ ಮಾಡುತ್ತಿದ್ದರು. ಇದೇ ಬಾಟಲ್ ದಿಢೀರ್ ಅಂತ ಸ್ಫೋಟಗೊಂಡಿದೆ. ಆ್ಯಸಿಡ್ ಬಾಟಲ್ (acid bottle) ಸ್ಫೋಟಗೊಂಡ ಸದ್ದಿಗೆ ಒಂದು ಕ್ಷಣ ಬಸ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ. ಆ್ಯಸಿಡ್ ಒತ್ತಡ ಹೆಚ್ಚಾಗಿ ಬಾಟಲ್ ಸ್ಫೋಟಗೊಂಡ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಯಾರಿಗೂ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಭೇಟಿ ನೀಡಿದ್ದ ತುಮಕೂರು ಗ್ರಾಮಾಂತರ ಪೊಲೀಸ್ರು ಪರಿಶೀಲನೆ ನಡೆಸಿ ಕೇಸ್ ದಾಖಲಿಸಿದ್ದಾರೆ.