• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದೇಶಾದ್ಯಂತ ಟ್ರಕ್‌, ಬಸ್‌ ಚಾಲಕರು ಪ್ರತಿಭಟನೆ: ಪೆಟ್ರೋಲ್‌, ಡೀಸೆಲ್ ಪೂರೈಕೆ ವ್ಯತ್ಯಯವಾಗುವ ಭೀತಿ

Any Mind by Any Mind
January 3, 2024
in Top Story, ದೇಶ
0
ದೇಶಾದ್ಯಂತ ಟ್ರಕ್‌, ಬಸ್‌ ಚಾಲಕರು ಪ್ರತಿಭಟನೆ: ಪೆಟ್ರೋಲ್‌, ಡೀಸೆಲ್ ಪೂರೈಕೆ ವ್ಯತ್ಯಯವಾಗುವ ಭೀತಿ
Share on WhatsAppShare on FacebookShare on Telegram

ನವದೆಹಲಿ: ಹಿಟ್‌ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೂತನ ಕಾನೂನು ಮಾರ್ಪಡಿಸಿರುವುದನ್ನು ವಿರೋಧಿಸಿ ದೇಶಾದ್ಯಂತ ಟ್ರಕ್‌, ಬಸ್‌ ಚಾಲಕರು ಪ್ರತಿಭಟನೆ ಮುಂದುವರೆದಿದೆ. ಪರಿಣಾಮ, ಮುಂದಿನ ದಿನಗಳಲ್ಲಿ ಪೆಟ್ರೋಲ್‌, ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯವಾಗುವ ಭೀತಿಯಿಂದ ಮಹಾರಾಷ್ಟ್ರ, ಛತ್ತೀಸ್‌ಗಢ, ಮಧ್ಯಪ್ರದೇಶ ಒಳಗೊಂಡಂತೆ ಹಲವು ರಾಜ್ಯಗಳ ಪೆಟ್ರೋಲ್‌ ಬಂಕ್‌ ಮುಂದೆ ವಾಹನ ಸವಾರರು ಸರದಿಗಟ್ಟಲೆ ಸಾಲು ನಿಂತು ಇಂಧನ ಖರೀದಿಸುತ್ತಿದ್ದಾರೆ.

ADVERTISEMENT


ಈ ಮೊದಲು ಗುದ್ದೋಡು ಪ್ರಕರಣಕ್ಕೆ ಚಾಲಕರಿಗೆ 2 ವರ್ಷಗಳವರೆಗೆ ಮಾತ್ರ ಜೈಲು ಶಿಕ್ಷೆ ವಿಧಿಸಲು ಐಪಿಸಿ ಸೆಕ್ಷನ್ ಕಾನೂನಿನಲ್ಲಿ ಅವಕಾಶವಿತ್ತು. ಬ್ರಿಟಿಷರ ಕಾಲದಿಂದ ಜಾರಿಯಲ್ಲಿದ್ದ ಐಪಿಸಿ ಸೆಕ್ಷನ್‌ನ ಅಪರಾಧ ಸಂಹಿತೆ ಕಾನೂನನ್ನು ಈಗ ಮಾರ್ಪಡಿಸಲಾಗಿದ್ದು, ನೂತನ ಕಾನೂನಿನ ಅನ್ವಯ ಗುದ್ದೋಡು ಪ್ರಕರಣದಲ್ಲಿ ಚಾಲಕರಿಗೆ ಗರಿಷ್ಠ 10 ವರ್ಷಗಳವರೆಗೂ ಶಿಕ್ಷೆ ಹಾಗೂ 7 ಲಕ್ಷ ರೂ.ಗಳವರೆಗೂ ದಂಡ ವಿಧಿಸಲಾಗುತ್ತದೆ. ನೂತನ ಕಾನೂನಿಗೆ ವಿರೋಧ ವ್ಯಕ್ತಪಡಿಸಿ ದೇಶಾದ್ಯಂತ ಟ್ರಕ್‌ ಚಾಲಕರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಪ್ರತಿಭಟನೆಯಿಂದಾಗಿ ಮುಂಬೈ ಅಹಮದಾಬಾದ್‌ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ತಡೆಯುಂಟಾಗಿದೆ. ಥಾಣೆ, ಸೋಲಾಪುರ, ಕೊಲ್ಹಾಪುರ, ನಾಗ್ಪುರ ಹಾಗೂ ಗುಂಡಿಯಾ ಜಿಲ್ಲೆಗಳಲ್ಲಿ ಟ್ರಕ್‌ ಚಾಲಕರು ಸ್ಥಳೀಯ ಹೆದ್ದಾರಿಗಳ ರಸ್ತೆಗಳನ್ನು ತಡೆದಿದ್ದಾರೆ.


ಛತ್ತೀಸ್‌ಗಢದಲ್ಲಿ 12 ಸಾವಿರಕ್ಕೂ ಖಾಸಗಿ ವಾಣಿಜ್ಯ ಸೇವೆಯ ಬಸ್‌ ಚಾಲಕರು ಕೆಲಸವನ್ನು ಸೋಮವಾರದಿಂದ ಸ್ಥಗಿತಗೊಳಿಸಿ ನೂತನ ಕಾನೂನನ್ನು ರದ್ದುಗೊಳಿಸಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲೂ ಪ್ರತಿಭಟನೆ ಜೋರಾಗಿದ್ದು, ಹೊಸ ಕಾನೂನನ್ನು ಹಿಂಪಡೆಯಬೇಕೆಂದು ಇಂದು ಬೆಳಗಿನಿಂದಲೇ ಹಲವು ಜಿಲ್ಲೆಗಳಲ್ಲಿ ಟ್ರಕ್‌, ಬಸ್‌ ಚಾಲಕರ ಪ್ರತಿಭಟನೆ ಜೋರಾಗಿದ್ದು, ಹಲವು ಕಡೆ ಪೊಲೀಸ್‌ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಪಂಜಾಬ್‌ನಲ್ಲಿ ಲೂಧಿಯಾನ-ಫಿರೋಜ್‌ಪುರ ರಸ್ತೆಯಲ್ಲಿ ಟ್ರಕ್ ಚಾಲಕರು ಪ್ರತಿಭಟನೆ ನಡೆಸಿ ಸಂಚಾರಕ್ಕೆ ಅಡ್ಡಿಪಡಿಸಿದರು. ಟ್ರಕ್ ಚಾಲಕರು ಅಂಬಾಲಾ ಜಿಲ್ಲೆ ಬಳಿಯ ಶಂಭು ಗಡಿಯಲ್ಲಿ ಸಾರ್ವಜನಿಕರ ವಾಹನ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಮಧ್ಯಪ್ರದೇಶದಲ್ಲಿ ಭೋಪಾಲ್‌ನಲ್ಲಿ ಚಾಲಕರು ಪ್ರತಿಭಟನೆ ನಡೆಸಿ ಸರ್ಕಾರಿ ಬಸ್‌ಗಳು ಮತ್ತು ಸಾರ್ವಜನಿಕರ ವಾಹನಗಳನ್ನು ತಡೆದರು. ಚಾಲಕರ ಪ್ರತಿಭಟನೆಯಿಂದಾಗಿ ರಾಜ್ಯದ ಕೆಲವೆಡೆ ರಸ್ತೆ ತಡೆ ನಡೆದಿರುವುದು ಕಂಡುಬಂದಿದೆ. ವಿವಿಧ ನಗರಗಳಲ್ಲಿ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗುವ ಭೀತಿಯಿಂದಾಗಿ ಪೆಟ್ರೋಲ್ ಬಂಕ್‌ಗಳಲ್ಲಿ ಉದ್ದನೆಯ ಸರತಿ ಸಾಲುಗಳು ಕಂಡುಬಂದವು.

Previous Post

ಬಿಜೆಪಿಯನ್ನು ಶಾಶ್ವತವಾಗಿ ವಿಪಕ್ಷ ಸ್ಥಾನದಲ್ಲಿ ಕೂರಿಸಬೇಕೆಂಬುದು ನನ್ನ ಗುರಿ: ಸಿದ್ದರಾಮಯ್ಯ

Next Post

ರಾಜಕೀಯ ಪಕ್ಷಗಳಿಂದ ಮತದಾರರಿಗೆ ಉಚಿತ ಉಡುಗೊರೆ: ಅರ್ಜಿ ವಿಚಾರಣೆ ಮುಂದೂಡಿಕೆ

Related Posts

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?
Top Story

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

by ಪ್ರತಿಧ್ವನಿ
May 27, 2026
0

ಬೆಂಗಳೂರು : ಕಾಂಗ್ರೆಸ್ ನಾಯಕತ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ನಡುವಿನ ದೀರ್ಘಕಾಲದ ಶೀತಲ ಸಮರ ಪರಿಹರಿಸುವಲ್ಲಿ ಯಶಸ್ವಿಯಾದಂತೆ ಕಂಡು ಬರುತ್ತಿದೆ. ಈ ಮೂಲಕ ಸಿದ್ದರಾಮಯ್ಯ ವಿದಾಯಕ್ಕೆ...

Read moreDetails
BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

May 26, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

May 26, 2026
ಸಿಬಿಎಸ್‌ಇ ಡಿಜಿಟಲ್ ಮೌಲ್ಯಮಾಪನದಲ್ಲಿ ಭಾರಿ ಗೊಂದಲ; “ಇದು ನನ್ನ ಉತ್ತರ ಪತ್ರಿಕೆಯೇ ಅಲ್ಲ” ಎಂದು ವಿದ್ಯಾರ್ಥಿಗಳ ಆಕ್ರೋಶ

ಸಿಬಿಎಸ್‌ಇ ಡಿಜಿಟಲ್ ಮೌಲ್ಯಮಾಪನದಲ್ಲಿ ಭಾರಿ ಗೊಂದಲ; “ಇದು ನನ್ನ ಉತ್ತರ ಪತ್ರಿಕೆಯೇ ಅಲ್ಲ” ಎಂದು ವಿದ್ಯಾರ್ಥಿಗಳ ಆಕ್ರೋಶ

May 26, 2026
ಅರಣ್ಯ ಒತ್ತುವರಿಗೆ ಖಡಕ್ ಎಚ್ಚರಿಕೆ; 2015 ಬಳಿಕದ ಅತಿಕ್ರಮಣ ತೆರವಿಗೆ ಖಂಡ್ರೆ ಆದೇಶ

ಅರಣ್ಯ ಒತ್ತುವರಿಗೆ ಖಡಕ್ ಎಚ್ಚರಿಕೆ; 2015 ಬಳಿಕದ ಅತಿಕ್ರಮಣ ತೆರವಿಗೆ ಖಂಡ್ರೆ ಆದೇಶ

May 26, 2026
Next Post
ಲೇಬರ್ ಕೋರ್ಟ್‌ ನೇಮಕಾತಿ : ಕೇಂದ್ರಕ್ಕೆ ಹೈಕೋರ್ಟ್ ತರಾಟೆ

ರಾಜಕೀಯ ಪಕ್ಷಗಳಿಂದ ಮತದಾರರಿಗೆ ಉಚಿತ ಉಡುಗೊರೆ: ಅರ್ಜಿ ವಿಚಾರಣೆ ಮುಂದೂಡಿಕೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada