ವಿಜಯದಶಮಿ ಪ್ರಯುಕ್ತ ರಾಷ್ಟ್ರ ರಾಜಕಾರಣ ಪ್ರವೇಶ ಮಾಡುವುದಾಗಿ ಘೋಷಿಸಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೂತನ ರಾಷ್ಟ್ರೀಯ ಪಕ್ಷವನ್ನ ಬುಧವಾರ ಘೋಷಿಸಲಿದ್ದಾರೆ.
ಇನ್ನು ತಮ್ಮ ನಾಯಕರು ಮುಂದಿನ ಹಾದಿ ಸುಗುಮವಾಗಿರಲಿ ಎಂದು ಶೂಭ ಹಾರೈಸಿರುವ ನಾಯಕರು ಸಹಿ ಹಂಚಿ ಸಂಭ್ರಮಿಸಿದ್ದಾರೆ. ಆದರೆ,ವಾರಂಗಲ್ನಲ್ಲಿ TRS ಪಕ್ಷದ ನಾಯಕರೊಬ್ಬರು ಮಧ್ಯ ಹಾಗೂ ಕೋಳಿಯನ್ನು ಸಂಭ್ರಮಿಸಿದ್ದಾರೆ.
ಮಧ್ಯದ ಬಾಟಲಿ ಹಾಗೂ ಕೋಳಿಯನ್ನು ಹಂಚಿ ಸಂಭ್ರಮಿಸಿರುವ ನಾಯಕನ ಹೆಸರು ರಾಜನಾಲ ಶ್ರೀಹರಿ ಎಂದು ತಿಳಿದು ಬಂದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಈ ರೀತಿಯೂ ಸಂಭ್ರಮಿಸಬಹುದಾ ಎಂದು ಜನರು ಪ್ರಶ್ನಿಸುತ್ತಿದ್ದಾರೆ.