TRP ಹಗರಣ ಪ್ರಕರಣದಲ್ಲಿ Republic TV ಯ ಸಿಇಒ ಹಾಗೂ ಸಿಒಒ ಅವರು ಮುಂಬೈ ಪೊಲೀಸರು ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಶನಿವಾರ ಇವರಿಬ್ಬರಿಗೂ ಸಮನ್ಸ್ ನೀಡಿದ್ದ ಮುಂಬೈನ ಕ್ರೈಂ ಬ್ಯಾಂಚ್, ಭಾನುವಾರದಂದು ಕಡ್ಡಾಯವಾಗಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು.
CEO ಖಾನ್ಚಂದಾನಿಯನ್ನು ಒಟ್ಟು 9 ತಾನುಗಳ ಕಾಲ ಹಾಗೂ COO ಹರ್ಷ್ ಭಂಡಾರಿಯನ್ನು 5 ತಾಸುಗಲ ಕಾಲ ವಿಚಾರಣೆ ನಡೆಸಲಾಗಿದೆ. ರಿಪಬ್ಲಿಕ್ ಟಿವಿಯ ಪ್ರಸಾರಣಾ ಮುಖ್ಯಸ್ಥ ಘನಶ್ಯಾಮ ಸಿಂಗ್ ಅವರ ಹೇಳಿಕೆಯನ್ನು ಕೂಡಾ ದಾಖಲಿಸಲಾಗಿದೆ.
ಈ ಹಗರಣದ ವಿಚಾರದಲ್ಲಿ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದ್ದು, ವಿಚಾರಣೆ ಪ್ರಗತಿ ಕಾಣುತ್ತಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಟಿಆರ್ಪಿಯನ್ನು ಅಳೆಯುವ ಸಂಸ್ಥೆ BARCಯು ಟಿಆರ್ಪಿ ತಿರುಚಲಾಗುತ್ತಿದೆ ಎನ್ನುವ ಕುರಿತು ದೂರು ದಾಖಲಿಸಿದ ನಂತರ ಪೊಲೀಸರು ವಿಚಾರಣೆಯನ್ನು ಆರಂಭಿಸಿದ್ದರು.