ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಅಗಲಿಕೆಗೆ ವಿಧಾಸಭೆಯ ಕಲಾಪದಲ್ಲಿ ಸಂತಾಪ ಸೂಚಿಸಲಾಗಿದೆ. ಈ ಬಗ್ಗೆ ಮೊದಲಿಗೆ ಮಾತನಾಡಿದ ಸ್ಪೀಕರ್ ಯು.ಟಿ ಖಾದರ್ ಎಸ್.ಎಂ.ಕೃಷ್ಣ ಅವರ ಕೊಡುಗೆಗಳನ್ನು ನೆನೆದು ಸ್ಮರಿಸಿದ್ದಾರೆ.
ಈ ನಂತರ ಎಸ್.ಎಂ ಕೃಷ್ಣ ಅವರ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ರು. ಎಸ್ ಎಂ ಕೃಷ್ಣ ಅವರ ಓರ್ವ ಧೀಮಂತ ರಾಜಕಾರಣಿ, ಮುತ್ಸದ್ದಿ ರಾಜಕಾರಣಿ. ನಮ್ಮೆಲ್ಲರಿಗೂ ಮಾದರಿ ರಾಜಕಾರಣಿ ಎಂದು ಹೇಳಿದ್ದಾರೆ. ರಾಜ್ಯಕ್ಕೆ ಮತ್ತು ಪ್ರಮುಖವಾಗಿ ಬೆಂಗಳೂರಿಗೆ ಕೃಷ್ಣ ಅವರ ಕೊಡುಗೆ ಗಮನಾರ್ಹ ಎಂದು ಹೇಳಿದ್ದಾರೆ. ಬೆಂಗಳೂರಿಗೆ ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎಂಬ ಹೆಸರು ಬಂದಿದ್ದೇ ಕೃಷ್ಣ ಅವರ ಕಾಲದಲ್ಲಿ ಎಂದು ಸ್ಮರಿಸಿದ್ದಾರೆ.
ಇನ್ನು ತಾವು ಜೆಡಿಎಸ್ ನಿಂದ ಹೊರಬಂದು ಕಾಂಗ್ರೆಸ್ ಸೇರುವ ವೇಳೆ ಮುಂಬೈ ನಲ್ಲಿ ಕೃಷ್ಬ ಅವರನ್ನು ಭೇಟಿಯಾಗಿದ್ದೆ. ಅವರು ನಮ್ಮನ್ನು ಕಾಂಗ್ರೆಸ್ ಗೆ ಸೇರಲು ಉತ್ತೇಜಿಸಿದ್ದರು ಎಂದು ಹೇಳಿದ್ದಾರೆ.
ಇನ್ನು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕೂಡ ಈ ಬಗ್ಗೆ ಸದನದಲ್ಲಿ ಮಾತನಾಡಿದ್ದು, ಕೃಷ್ಣ ಅವರು ಡಿಗ್ನಿಫೈಡ್ ರಾಜಕಾರಣಿ. ರಾಗ ದ್ವೇಷಗಳಿರದ ರಾಜಕಾರಣ ಮಾಡಿದ ಉತ್ತಮ ವ್ಯಕ್ತಿ ಎಂದು ಅಗಲಿದ ಮಾಜಿ ಮುಖ್ಯಮಂತ್ರಿಗಳಿಗೆ ಸದನದಲ್ಲಿ ಗೌರವ ಸಲ್ಲಿಸಿದ್ದಾರೆ.