ವಾಲ್ಮೀಕಿ ಹಗರಣದಲ್ಲಿ ಸಿಎಂ ಬಂಧನಕ್ಕೆ ED ಸಿದ್ಧತೆ ಮಾಡಿಕೊಂಡಿದ್ಯಾ..?
ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಅಗ್ರಮದ ಬಗ್ಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಸೇರಿದಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಒಪ್ಪಿಕೊಂಡಿದ್ದಾರೆ. ಎಸ್‌ಐಟಿ ರಚನೆ ಮಾಡಿ ತನಿಖೆಯನ್ನೂ ಮಾಡಿಸಲಾಗ್ತಿದೆ. ಈ ನಡುವೆ ಮಾಜಿ ಸಚಿವ ನಾಗೇಂದ್ರ ಬಂಧನ ಮಾಡಿರುವ Enforcement Directorate ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಈ ನಡುವೆ CM Siddaramaiah ಅವರನ್ನು ಬಂಧನ ಮಾಡುವುದಕ್ಕೆ ED ಅಧಿಕಾರಿಗಳು ತಯಾರಿ ಮಾಡಿಕೊಳ್ತಿದ್ದಾರೆ ಅನ್ನೋ ಚರ್ಚೆಗಳು ನಡೆಯುತ್ತಿವೆ.
ವಾಲ್ಮೀಕಿ ನಿಗಮದ ಹಿಂದಿನ ಅಧಿಕಾರಿಗೆ ನಾಗೇಂದ್ರ ಹೆಸರು ಹೇಳುವಂತೆ ಒತ್ತಾಯ ಮಾಡಲಾಗಿತ್ತು ಅನ್ನೋ ಬಗ್ಗೆ ದೂರು ದಾಖಲಾಗಿದೆ. ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಕೇಸ್ ದಾಖಲಾಗ್ತಿದ್ದ ಹಾಗೆ ED ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲು ಹತ್ತಿ ತಡೆಯಾಜ್ಞೆ ತಂದಿದ್ದಾರೆ. ಈ ನಡುವೆ ED ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ ಶಿವಕುಮಾರ್‌ಗೆ ವಿಚಾರಣಾ ನೋಟಿಸ್ ನೀಡಲಿದ್ದಾರೆ ಎನ್ನುವ ಚರ್ಚೆ ವಿಧಾನಸೌಧದಲ್ಲೇ ನಡೆಯುತ್ತಿದೆ.
ಈ ಎಲ್ಲಾ ಚರ್ಚೆಗಳ ನಡುವೆ ಮಂಗಳವಾರ ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕರು ಪ್ರತಿಭಟನೆ ನಡೆಸಿದ್ರು. ಸಿಎಂ ಬಂಧನಕ್ಕೆ ED ಅಧಿಕಾರಿಗಳು ಪ್ರಯತ್ನ ಮಾಡ್ತಿದ್ದಾರೆ ಅನ್ನೋ ಬಗ್ಗೆ ಕಾಂಗ್ರೆಸ್ ನಾಯಕರು ಟೀಕೆ ವ್ಯಕ್ತಪಡಿಸಿದ್ರು. ಸಿಎಂ, ಡಿಸಿಎಂ ಸೇರಿದಂತೆ ನಾಗೇಂದ್ರ ಹೆಸರು ಹೇಳುವಂತೆ ED ಅಧಿಕಾರಿಗಳೇ ಹೇಳಿದ್ದಾರೆ ಎಂದು ಅಧಿಕಾರಿ ದೂರು ಕೊಟ್ಟಿದ್ದಾರೆ. ಇದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕಾ..? ಎಂದು ಇಂಧನ ಸಚಿವ ಕೆಜೆ ಜಾರ್ಜ್ ಪ್ರಶ್ನೆ ಮಾಡಿದ್ದಾರೆ.
ಕೇಂದ್ರ ಸಚಿವರು ED ಅಧಿಕಾರಿಗಳ ತನಿಖೆಯನ್ನು ಸಮರ್ಥಿಸಿಕೊಂಡಿರುವ ಬಗ್ಗೆ ಮಾತನಾಡಿ, ರಾಜ್ಯ ಸರ್ಕಾರ ಉಳಿಯಲ್ಲ ಅಂತಾ ಹೇಳೋ ಅವಶ್ಯಕತೆ ಇಲ್ಲ. ಒತ್ತಡದ ರಾಜಕೀಯ ಮಾಡಲಾಗ್ತಿದೆ. ED ತನಿಖೆ ದುರುದ್ದೇಶದಿಂದ ಕೂಡಿರುವ ಸಾಧ್ಯತೆಯಿದೆ. ಪೊಲೀಸ್ರು ತನಿಖೆ ಮಾಡ್ತಿದ್ದಾರೆ. ಸಿಎಂ, ಡಿಸಿಎಂ ರನ್ನು ಹಗರಣದಲ್ಲಿ ಸಂಕಷ್ಟಕ್ಕೆ ಸಿಲುಕಿಸುವುದು ಅಷ್ಟು ಸುಲಭ ಇಲ್ಲ. ನಮಗೆ ಕಾನೂನು, ನ್ಯಾಯಾಲಯದ ಮೇಲೆ ನಮಗೆ ನಂಬಿಕೆ ಇದೆ. ಸ್ವಾಯತ್ತ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ಬಳಸಿಕೊಳ್ಳೋದು ಬಿಡಬೇಕು ಎಂದು KJ ಜಾರ್ಜ್ ಒತ್ತಾಯ ಮಾಡಿದ್ದಾರೆ.
ವಾಲ್ಮೀಕಿ ಹಗರಣದ 10 ಕೋಟಿ ಹಣವನ್ನು ಲಿಕ್ಕರ್ ಖರೀದಿಗೆ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಇಡಿ ಅಧಿಕಾರಿಗಳು ಮಾಹಿತಿ ಬಿಡುಗಡೆ ಮಾಡಿ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದ್ದರು. ಇದೀಗ ತನಿಖಾ ನೆಪದಲ್ಲಿ ನೋಟಿಸ್ ಕೊಡುವ ಸಾಧ್ಯತೆಗಳು ದಟ್ಟವಾಗಿವೆ. ಸಿಎಂ ಸೇರಿದಂತೆ ಇನ್ನು ಯಾರೆಲ್ಲಾ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಇಡಿ ಅನುಮಾನ ವ್ಯಕ್ತಪಡಿಸುತ್ತೋ ಎಲ್ಲರ ವಿಚಾರಣೆಯೂ ನಡೆಯುವ ಸಾಧ್ಯತೆ ದಟ್ಟವಾಗಿದೆ.