• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸೆ.19ಕ್ಕೆ ನಾದಬ್ರಹ್ಮ ಹಂಸಲೇಖ ಸಂಗೀತವಿರೋ ‘ಸೋಲ್​ಮೇಟ್ಸ್​’ ಚಿತ್ರದ ಟ್ರೈಲರ್ ರಿಲೀಸ್..

ಪ್ರತಿಧ್ವನಿ by ಪ್ರತಿಧ್ವನಿ
September 16, 2025
in Top Story, ಅಂಕಣ, ಇದೀಗ, ಕರ್ನಾಟಕ, ವಾಣಿಜ್ಯ, ವಿಶೇಷ, ಸಿನಿಮಾ
0
Share on WhatsAppShare on FacebookShare on Telegram

ನಾದಬ್ರಹ್ಮ ಹಂಸಲೇಖ ಸಂಗೀತ ನೀಡಿರುವ ಪಿ.ವಿ. ಶಂಕರ್ ನಿರ್ದೇಶನ ಮಾಡಿರುವ ‘ಸೋಲ್​ಮೇಟ್ಸ್​’ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನ ಉತ್ಸವ್ ಲೆಗಸಿಯಲ್ಲಿ ಅದ್ದೂರಿಯಾಗಿ ನೆರವೇರಿದೆ. ಇದಾಗಲೇ ‘ಕಿಲ ಕಿಲ..’ ಹಾಗೂ ಇತರೆ ಹಾಡು, ಟೀಸರ್ ನಿಂದ ಗಮನ ಸೆಳೆದಿರುವ ಚಿತ್ರಕ್ಕೆ ‘ಪರಿಸರ ಪ್ರೇಮಿ’ ಎಂಬ ಟ್ಯಾಗ್ ಲೈನ್ ಇದೆ. ಜಿ.ಆರ್. ಅರ್ಚನಾ ಹಾಗೂ ಶಂಕರ್ ಪಿ.ವಿ. ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ADVERTISEMENT


‘ರಂಗ್ ಬಿ ರಂಗ್’ ಖ್ಯಾತಿಯ ಶ್ರೀಜಿತ್ ಸೂರ್ಯ, ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಖ್ಯಾತಿಯ ಪ್ರಸನ್ನ ಶೆಟ್ಟಿ, ರಜನಿ, ಯಶ್ವಿಕಾ ನಿಷ್ಕಲ, ಅಲ್ಮಾಸ್, ಯಶ್ ಶೆಟ್ಟಿ, ಅರವಿಂದ್ ರಾವ್, ಶರತ್ ಲೋಹಿತಾಶ್ವ, ಅರುಣಾ ಬಾಲರಾಜ್, ಪ್ರಶಾಂತ್ ನಟನ, ಅರಸು ಮಹಾರಾಜ್, ಗೌತಮ್, ತಾರಕ್, ನವೀನ್ ಡಿ. ಪಡೀಲ್ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರ ಇದೇ ವಾರ ಎಂದರೆ ಸೆಪ್ಟೆಂಬರ್ 19ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.


ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಶಂಕರ್”ಈ ಚಿತ್ರ ಪರಿಸರ ಕಾಳಜಿಯ ಸಂದೇಶದೊಡನೆ ರೊಮ್ಯಾನ್ಸ್, ಆಕ್ಷನ್, ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆ. ನಾನು ಚಿಕ್ಕವನಿದ್ದಾಗ ಕ್ರಿಕೆಟ್ ಬ್ಯಾಟಿಗಾಗಿ ಒಂದು ಮರ ಕಡಿದಿದ್ದೆ. ಇದಕ್ಕಾಗಿ ನನಗೆ ಪಶ್ಚಾತ್ತಾಪ ಇತ್ತು. ಇದೇ ಈ ಚಿತ್ರದ ಕಥೆಗೆ ಸ್ಫೂರ್ತಿಯಾಗಿದೆ. ” ಎಂದರು ಅಲ್ಲದೆ “ಈ ಸಿನಿಮಾದಲ್ಲಿ ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ಅವರ ಕೋಟಿಗೊಬ್ಬ ಚಿತ್ರದ ಹಾಡೊಂದರ ದೃಶ್ಯಗಳನ್ನು ಸಹ ಬಳಸಿಕೊಳ್ಳಲಾಗಿದೆ. ಇದಕ್ಕಾಗಿ ಆ ಚಿತ್ರದ ನಿರ್ಮಾಪಕರಲ್ಲಿ ಅನುಮತಿ ಸಹ ಪಡೆದುಕೊಂಡಿದ್ದೇವೆ. ನಮ್ಮ ಚಿತ್ರಕ್ಕೆ ವಿಷ್ಣುವರ್ಧನ್ ಅವರ ಆಶೀರ್ವಾದ ಇದೆ.” ಎಂದರು. ” ಸಿನಿಮಾದಲ್ಲಿ ಹುಡುಗ-ಹುಡುಗಿ ಪರಿಸರವನ್ನು ಕಾಪಾಡಿಕೊಳ್ಳುವ ಕುರಿತಾಗಿ ಕಥೆ ಇದೆ. ಅದು ಈಗಿನ ಸಮಾಜಕ್ಕೆ ತುಂಬ ಅವಶ್ಯಕವಾಗಿದೆ.” ಎನ್ನುವುದಾಗಿ ನಿರ್ದೇಶಕರು ಹೇಳಿದ್ದಾರೆ.


ನಟ ಯಶ್ ಶೆಟ್ಟಿ ಮಾತನಾಡಿ “ಇದೊಂದು ಜಂಗಲ್ ಮಂಗಲ್ ನಂತಹಾ ಸಿನಿಮಾ ಇದರಲ್ಲಿ ನಾನು ಸುಪಾರಿ ಕಿಲ್ಲರ್ ಪಾತ್ರ ಮಾಡಿದ್ದೇನೆ. ಆದರೆ ಇದು ಕೇವಲ ವಿಲನ್ ಪಾತ್ರವಲ್ಲ. ಚಿತ್ರದ ಕ್ಲೈಮ್ಯಾಕ್ಸ್ ನಡೆಯುವುದೇ ವಿಲನ್ ಮೂಲಕ ಎನ್ನುವುದು ಇದರಲ್ಲಿನ ವಿಶೇಷವಾಗಿದೆ.” ಎಂದರು. ನಾಯಕ ಶ್ರೀಜಿತ್ ಶೆಟ್ಟಿ “ನಾನು ಸತ್ಯ ಎಂಬ ಪಾತ್ರವನ್ನು ಮಾಡಿದ್ದೇನೆ. ಹೆಸರಿಗೆ ತಕ್ಕಂತೆ ಆತ ಸತ್ಯವಂತನೇ ಅಲ್ಲದೆ ಮಹಾ ಪರಿಸರ ಪ್ರೇಮಿ. ಅಲ್ಲದೆ ʼಸೋಲ್‌ಮೇಟ್ಸ್ʼ ಅಂದರೆ ಪರಿಸರ ಮತ್ತು ಅವನ ಹುಡುಗಿ ಇಬ್ರು ಅವನ ಸೋಲ್‌ಮೇಟ್ಸ್‌ಗಳಾಗಿರಲಿದೆ.” ಎಂದರು.


ನಾಯಕಿ ಯಶ್ವಿಕಾ ನಿಷ್ಕಲ “ನಾನಿದರಲ್ಲಿ ತುಂಬ ಮೃದು ಮನಸಿನ ಹುಡುಗಿ ಭೂಮಿ ಎಂಬ ಪಾತ್ರವನ್ನು ನಿರ್ವಯಿಸಿದ್ದೇನೆ. ಚಿತ್ರ ಸುಂದರವಾಗಿ ಮೂಡಿ ಬಂದಿದೆ. ನಿಮ್ಮೆಲ್ಲರ ಸಹಕಾರ ಬೇಕು” ಎಂದು ಮನವಿ ಮಾಡಿದರು. ಸಿನಿಮಾದಲ್ಲಿ ಶ್ರೀಜಿತ್ ಶೆಟ್ಟಿ ಅವರು ಸತ್ಯ ಎಂಬ ಪಾತ್ರ ಮಾಡಿದ್ದಾರೆ. ಭೂಮಿ ಎಂಬ ಪಾತ್ರಕ್ಕೆ ನಿಷ್ಕಲಾ ಶೆಟ್ಟಿ ಅವರು ಬಣ್ಣ ಹಚ್ಚಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ನಟ ಪ್ರಸನ್ನ ಶೆಟ್ಟಿ ಅವರು ಗೋಪಿ ಎಂಬ ಮುಗ್ಧ ಹಳ್ಳಿ ಯುವಕನ ಪಾತ್ರವನ್ನು ನಿಭಾಯಿಸಿದ್ದಾರೆ
ಚಿತ್ರ ಇದೆ ಶುಕ್ರವಾರ ತೆರೆಗೆ ಬರಲಿದೆ.

Tags: AlmasArasu MaharajAravind RaoG R ArchanaGowthamKannada movieKarnatakaPrasanna ShettyRajanisandalwoodShankar PVSharath LohitashvaSolmateSrijithTarakTrailerYash ShettyYashvika Nishkala
Previous Post

CM Siddaramaiah: ಯುಟ್ಯೂಬ್ ಚಾನಲ್ ಗಳ ಆರಂಭಕ್ಕೆ ಪರವಾನಗಿ ನಿಗಧಿ ಮಾಡುವ ಬಗ್ಗೆ ಪರಿಶೀಲನೆ..!!

Next Post

Full Meals: ಕ್ಯಾಸೆಟ್ ನಲ್ಲಿ ಹಾಡು ಬಿಡುಗಡೆ ಮಾಡಿದ ಫುಲ್ ಮೀಲ್ಸ್ ಚಿತ್ರತಂಡ..

Related Posts

AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!
Top Story

AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

by ಪ್ರತಿಧ್ವನಿ
May 25, 2026
0

ಚೆನೈ : ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಬಳಿಕ ನೂತನವಾಗಿ ಅಧಿಕಾರಕ್ಕೆ...

Read moreDetails
BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

May 25, 2026
ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

May 25, 2026
ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

May 25, 2026
ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

May 25, 2026
Next Post

Full Meals: ಕ್ಯಾಸೆಟ್ ನಲ್ಲಿ ಹಾಡು ಬಿಡುಗಡೆ ಮಾಡಿದ ಫುಲ್ ಮೀಲ್ಸ್ ಚಿತ್ರತಂಡ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada