ಚಿಕ್ಕಬಳ್ಳಾಪುರ ನಗರ ಹೊರವಲಯದ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ಸಾಕಿದ್ದ ಮೀನುಗಳು ಸತ್ತುಬಿದ್ದು ನೀರಿನಲ್ಲಿ ತೇಲಾಡುತ್ತಿವೆ, ಹೆಬ್ಬಾಳ ನಾಗವಾರ ಸಂಸ್ಕರಿತ ತ್ಯಾಜ್ಯ ನೀರನ್ನ ಕೆರೆಗೆ ಹರಿಬಿಟ್ಟಿದ್ದು, ತ್ಯಾಜ್ಯ ನೀರಿನಿಂದ ಕೆರೆ ತುಂಬಿ ತುಳುಕುತ್ತಿದೆ.
ಇದೇ ಕೆರೆಯಲ್ಲಿ ಮೀನುಗಾರಿಕೆ ಮಾಡಲು ಮೀನುಗಾರಿಕೆ ಇಲಾಖೆ ಅನುಮತಿ ನೀಡಿದೆ.. ಆದ್ರೆ ಇಂದು ಕೆರೆಯ ಅಂಚಿನಲ್ಲಿ ಇದ್ದಕ್ಕಿದ್ದ ಹಾಗೆ ಮೀನುಗಳು ಸತ್ತು ತೇಲಾಡುತ್ತಿವೆ..
ಹೆಚ್ ಎನ್ ವ್ಯಾಲಿ ನೀರು ವಿಷಪೂರಿತವಾಯ್ತಾ..? ಗೊತ್ತಿಲ್ಲ , ಬೆಳ್ಳಂದೂರು ಮತ್ತು ವರ್ತೂರು ಕೆರೆಗಳಲ್ಲಿ ಬೆಳೆದಿರುವಂತೆ ದಟ್ಟವಾದ ಹಸಿರು ಕಳೆ ಬೆಳೆದಿರುವುದು ಕೆರೆಯ ನೀರು ಕಲುಷಿತವಾಗಿರುವುದನ್ನು ದೃಢಪಡಿಸುತ್ತಿದೆ. ಕೆಲವು ಕಡೆ ಗಿಡಗಂಟೆಗಳು ಸುಟ್ಟಿರುವುದು ರಾಸಾಯನಿಕಗಳು ಕೆರೆಯ ನೀರಿಗೆ ಸೇರುತ್ತಿರುವುದನ್ನು ಖಾತ್ರಿಪಡಿಸುತ್ತಿವೆ.
ಕೆರೆ ನೀರಿನಲ್ಲಿ ಸಾಕಾಣಿಕೆ ಮಾಡಿದ್ದ ಮೀನುಗಳು ಸತ್ತಿರುವ ಕಾರಣ ಹತ್ತು ಹಲವು ಅನುಮಾನಕ್ಕೆ ಕಾರಣವಾಗಿದೆ.. ಮೆತ್ತೊಂದೆಡೆ ಕೆರೆಯಲ್ಲಿ ಮೀನು ಸಾಕಾಣಿಕೆಗೆ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಎರಡು ಮೂರು ದಿನಗಳಿಂದ ಇದೇ ಕೆರೆಯ ಮೀನು ಹಿಡಿದು ಯುಗಾದಿಯ ಹೊಸತೊಡಕುಗಾಗಿ ಚಿಕ್ಕಬಳ್ಳಾಪುರ ಜಿಲ್ಲೆ, ಬೆಂಗಳೂರು ಸೇರಿದಂತೆ ಹಲವೆಡೆ ಬರ್ಜರಿಯಾಗಿ ಮಾರಾಟ ಮಾಡಿದ್ದಾರೆ.. ಇದ್ರಿಂದ ಮೀನು ಕೊಂಡವರ ಎದೆಯಲ್ಲಿ ಢವ ಢವ! ಶುರುವಾಗಿದೆ.
ಇನ್ನು ಅಮಾನಿ ಗೋಪಾಲಕೃಷ್ಣ ಕೆರೆಯ ಅಂಗಳದಲ್ಲಿ ಕುಡಿಯುವ ನೀರು ಪೂರೈಸುವ ಕೊಳವೆಬಾವಿಗಳಿದ್ದು ಆತಂಕದಲ್ಲಿದ್ದೇವೆ ಎನ್ನುತ್ತಿದ್ದಾರೆ ಸ್ಥಳೀಯರು..!!