KVN ನಿರ್ಮಾಣ, ಗೀತು ಮೋಹನ್ ದಾಸ್ ನಿರ್ದೇಶನ ಹಾಗೂ ರಾಕಿಂಗ್ ಸ್ಟಾರ್ ಯಶ್ (Rocking star Yash) ನಟನೆಯಲ್ಲಿ ಮೂಡಿ ಬರುತ್ತಿರುವ ಟಾಕ್ಸಿಕ್ ಸಿನಿಮಾ ತಂಡಕ್ಕೆ ಹೈ ಕೋರ್ಟ್ ನಿಂದ ರಿಲೀಫ್ ಸಿಕ್ಕಿದೆ.

ಸಿನಿಮಾದ ಶೂಟಿಂಗ್ ಗಾಗಿ ಸೆಟ್ ನಿರ್ಮಾಣ ಮಾಡಲು ಅರಣ್ಯ ಇಲಾಖೆಗೆ ಸೇರಿದ ಭೂಮಿಯಲ್ಲಿ ಅನುಮತಿಯಿಲ್ಲದೆ ನೂರಾರು ಮರಗಳನ್ನು ಅಕ್ರಮವಾಗಿ ಕಡಿದಿರುವ ಆರೋಪ ಚಿತ್ರತಂಡದ ಮೇಲೆ ಕೇಳಿಬಂದಿತ್ತು. ಈ ಬಗ್ಗೆ ದೂರು ನೀಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ (Eshwar khandre) ಇಲಾಖೆಗೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಈ ಬಗ್ಗೆ ಸರ್ಕಾರದ ಕೇಸ್ ದಾಖಲಿಸುವ ಕ್ರಮವನ್ನು ಪ್ರಶ್ನಿಸಿ ತಮ್ಮ ವಿರುದ್ಧ FIR ದಾಖಲಿಸದಂತೆ ಟಾಕ್ಸಿಕ್ ಸಿನಿಮಾದ ನಿರ್ಮಾಪಕರು ಹೈಕೋರ್ಟ್ ಮೊರೆ ಹೋಗಿದ್ದರು. ಹೀಗಾಗಿ ಹೈಕೋರ್ಟ್ ಸಿನಿಮಾ ನಿರ್ಮಾಪಕರ ವಿರುದ್ಧ FIR ದಾಖಲಿಸದಂತೆ ಮಧ್ಯಂತರ ತಡೆಯಾಜ್ಞೆ ನೀಡಿ ಇಂದು ಆದೇಶ ನೀಡಿದೆ.






