ಟಾಲಿವುಡ್‌ನ ಸ್ಟಾರ್ ನಟ ರಾಮ್‌ಚರಣ್ ಹಾಗೂ ಉಪಾಸನಾ ಮದುವೆಯಾಗಿ ಹತ್ತು ವರ್ಷಗಳಾಗಿವೆ. ಇದೀಗ ದಂಪತಿಗಳಿಬ್ಬರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 2012ರಲ್ಲಿ ರಾಮ್‌ಚರಣ್ ಹಾಗೂ ಉಪಾಸನಾ ವಿವಾಹವಾದಾಗ ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದರಂತೆ.
ತಮ್ಮ ಮದುವೆ ಸಂದರ್ಭದಲ್ಲಿ ತಾವು ಎದುರಿಸಿದ ಟೀಕೆಗಳ ಬಗ್ಗೆ, ಉಪಸನಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಉಪಾಸನಾ ಆಂಧ್ರ ಮೂಲದ ಶ್ರೀಮಂತ ಕುಟುಂಬದ ಮಗಳು. ರಾಷ್ಟ್ರದ ಹಲವು ನಗರಗಳಲ್ಲಿರೋ ಅಪೋಲೊ ಹಾಸ್ಪಿಟಲ್ ಅವರ ಒಡೆತನದಲ್ಲಿದೆ. ಇನ್ನು ರಾಮ್ ಚರಣ್ ಕೂಡ ದಕ್ಷಿಣ ಭಾರತದ ಟಾಪ್ ನಟರಲ್ಲಿ ಒಬ್ಬರು. ಪ್ರೀತಿಸಿ ಮದುವೆಯಾದ ಈ ಜೋಡಿ ಬಗ್ಗೆ ಪ್ರಾರಂಭದಲ್ಲಿ ಅನೇಕರು ಟೀಕೆ ಮಾಡಿದ್ದರಂತೆ.
ʻನಾನು ಹಾಗೂ ರಾಮ್‌ಚರಣ್ ಕಾಮನ್ ಫ್ರೆಂಡ್ ಒಬ್ಬರಿಂದ ಭೇಟಿ ಆದ್ವಿ. ಪರಿಚಯ ಪ್ರೇಮಕ್ಕೆ ತಿರುಗಿ ಇಬ್ಬರು ಮದುವೆಯಾದ್ವಿ. ನಮ್ಮಿಬ್ಬರ ಬ್ಯಾಗ್ರೌಂಡ್ ಬೇರೆ ಬೇರೆ ಆಗಿದ್ರೂ ಕೂಡ ಪರಸ್ಪರರ ಮೇಲಿರುವ ಪ್ರೀತಿ, ಗೌರವ ಮತ್ತು ನಂಬಿಕೆಗಳಿಂದಾಗಿ ನಾವು ಮದುವೆಯಾಗಲು ನಿಶ್ಚಯಿಸಿದೆವು. ನಮ್ಮ ಮದುವೆಯಲ್ಲಿ ನಮ್ಮ ಆಂಟಿ ಹಾಗೂ ಕಸಿನ್ ತುಂಬಾ ಸಪೋರ್ಟ್ ಮಾಡಿದ್ರು.
ಮದುವೆಯಾದ ಹೊಸತರಲ್ಲಿ ನಾನು ಬಹಳಷ್ಟು ಅಪಮಾನಗಳನ್ನ ಎದುರಿಸಬೇಕಾಯ್ತು. ಅನೇಕರು ನನ್ನ ಬಾಡಿಶೇಮಿಂಗ್ ಮಾಡಿದ್ದರು. ದಪ್ಪಗಿದ್ದಾಳೆ, ಸುಂದರವಾಗಿಲ್ಲ ಅಂತ ಹೇಳಿದ್ರು. ಅಷ್ಟೇ ಅಲ್ಲ.. ರಾಮ್‌ಚರಣ್ ದುಡ್ಡಿಗೋಸ್ಕರ ನನ್ನನ್ನ ಮದುವೆ ಆಗಿದ್ದಾರೆ ಅಂದಿದ್ರು. ಆದ್ರೆ ಅದೆಲ್ಲವನ್ನ ನಾವು ಸಹಿಸಿಕೊಂಡ್ವಿ. ಆಗ ನಮ್ಮನ ಟೀಕಿಸಿದವ ಅಭಿಪ್ರಾಯ ಈಗ ಬದಲಾಗಿದೆ. ಆ ಟೈಮ್‌ನಲ್ಲಿ ಎಲ್ಲವನ್ನ ಸಹಿಸಿಕೊಂಡು ಮುಂದೆ ನಡೆದಿದ್ದಕ್ಕೆ ನನ್ನ ಬಗ್ಗೆ ನನಗೆ ಹೆಮ್ಮೆ ಇದೆʼ ಅಂತ ಉಪಾಸನಾ ಸಂದರ್ಶನದಲ್ಲಿ ಮಾತನಾಡಿದ್ದಾರೆ..