ಟೋಕಿಯೋ ಒಲಂಪಿಕ್ 2020 ರ ಮಹಿಳೆಯರ 49 ಕೆಜಿ ವಿಭಾಗದ ಭಾರ ಎತ್ತುವಿಕೆಯಲ್ಲಿ ಮೀರಾಬಾಯಿ ಚಾನು ಬೆಳ್ಳಿ ಜಯಿಸಿದ್ದಾರೆ. ಈ ಬಾರಿಯ ಒಲಿಂಪಿಕ್ಸ್ನಲ್ಲಿ ಇದು ಭಾರತದ ಚೊಚ್ಚಲ ಪದಕವಾಗಿದೆ.
ಮೀರಾಬಾಯಿ ಸ್ನ್ಯಾಚ್ ನಲ್ಲಿ 87 ಕೆಜಿ ಭಾರ ಎತ್ತಿದರೆ, ಕ್ಲೀನ್& ಜರ್ಕ್ ನಲ್ಲಿ 115 ಕೆಜಿ ಭಾರ ಎತ್ತಿದ್ದಾರೆ. ಕ್ಲೀನ್&ಜರ್ಕ್ ಹಾಗೂ ಸ್ನ್ಯಾಚ್ ಎರಡೂ ವಿಭಾಗದಲ್ಲಿ ಒಟ್ಟು 202 ಕೆಜಿ ಭಾರ ಎತ್ತಿದ್ದಾರೆ.

210 (94 & 116) ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಚೀನಾದ ಜುಹ್ನಿ ಪಾಲಾಯಿತು.





