ನಮ್ಮ ದೇಶದಲ್ಲಿ ಮದುವೆಯ ಬಳಿಕ ಹೆಣ್ಣುಮಕ್ಕಳು ಕಾಲಿಗೆ ಕಾಲುಂಗುರವನ್ನು ಧರಿಸುತ್ತಾರೆ. ಇದು ಹಿಂದೂ ಧರ್ಮದ ಒಂದು ಮುಖ್ಯ ಸಂಸ್ಕೃತಿಯಾಗಿದೆ. ಹೆಚ್ಚು ಜನ ಮಹಿಳೆಯರಿಗೆ ಮದುವೆಯಾಗಿದೆಯಾ ಇಲ್ವಾ ಎಂದು ತಿಳಿಯಲು ಕಾಲುಂಗರವನ್ನ ಮೊದಲು ನೋಡುತ್ತಾರೆ. ಇದೊಂದು ಸುಲಭ ಮಾರ್ಗ.
ಕೆಲವರು ಈ ಸಂಸ್ಕೃತಿಯನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ,ಇನ್ನು ಕೆಲ ಫ್ಯಾಷನ್ ಪ್ರಿಯರು ಇದಕ್ಕೆ ಹೆಚ್ಚು ಮಾನ್ಯತೆ ಕೊಡುವುದಿಲ್ಲ.. ಸದ್ಯ ಮಾರ್ಕೆಟ್ ನಲ್ಲಿ ವಿವಿಧ ರೀತಿಯ ಕಾಲುಂಗುರಗಳು ಟ್ರೆಂಡ್ ಕ್ರಿಯೇಟ್ ಮಾಡಿದೇ. ಕಾಲುಂಗುರವನ್ನು ಧರಿಸುವುದು ಹಿಂದೂ ಧರ್ಮದ ಸಂಸ್ಕೃತಿ ಮಾತ್ರವಲ್ಲ, ಆರೋಗ್ಯ ಹಿತ ದೃಷ್ಟಿ ಕೂಡ ಇದರ ಹಿಂದಿದೆ. ಕಾಲುಂಗುರವನ್ನು ಧರಿಸುವುದರಿಂದ ನಮ್ಮ ದೇಹಕ್ಕೆ ಏನೆಲ್ಲ ಪ್ರಯೋಜನಗಳಿವೆ ಅನ್ನೋದನ್ನ ಮಾಹಿತಿ ಇಲ್ಲಿದೆ..
ನೋವು ನಿವಾರಣೆ
ಎಲ್ಲಾ ಹೆಣ್ಣು ಮಕ್ಕಳಿಗೂ ಮುಟ್ಟಿನ ಸಂದರ್ಭದಲ್ಲಿ ಹೆಚ್ಚು ಹೊಟ್ಟೆ ನೋವು ಹಾಗೂ ಬೆನ್ನು ಎಳೆತವಿರುತ್ತದೆ. ಇಂಥ ಸಂದರ್ಭದಲ್ಲಿ ಕಾಲುಂಗುರವನ್ನು ಧರಿಸಿರುವ ಮಹಿಳೆಗೆ ಮುಟ್ಟಿನ ನೋವು ತಕ್ಕಮಟ್ಟಿಗೆ ಕಡಿಮೆಯಾಗುತ್ತದೆ. ಹಾಗೂ ಮಹಿಳೆಯರ ಋತುಚಕ್ರವನ್ನ ಸಮತೋಲನ ಗೊಳಿಸಲು ಇದು ತುಂಬಾನೇ ಸಹಾಯಕಾರಿ.
ಗರ್ಭಕೋಶಕ್ಕೆ ಉತ್ತಮ
ಹೆಣ್ಣು ಮಕ್ಕಳ ಗರ್ಭಕೋಶದ ಆರೋಗ್ಯಕ್ಕೆ ಕಾಲುಂಗುರವನ್ನು ಧರಿಸುವುದು ಉತ್ತಮ ,ಕಾಲಿನ ಎರಡನೇ ಬೆರಳಿನ ನರ ಗರ್ಭಕೋಶಕ್ಕೆ ನೇರ ಕನೆಕ್ಟ್ ಆಗಿರುತ್ತದೆ. ಕಾಲುಂಗುರವನ್ನು ಧರಿಸಿದಾಗ ಅದರ ಲೋಹ ಗರ್ಭಕೋಶದ ಆರೋಗ್ಯವನ್ನು ಕಾಪಾಡುತ್ತದೆ
ಶಾಂತ ಮನಸ್ಥಿತಿ
ಮದುವೆಯ ನಂತರ ಹೆಣ್ಣು ಮಕ್ಕಳು ತುಂಬಾನೇ ಸಮಾಧಾನದಿಂದ ಇರಬೇಕು ಎಂದು ಹಿರಿಯರು ಸಲಹೆ ನೀಡುತ್ತಾರೆ .ಹೆಣ್ಣು ಮಕ್ಕಳಿಗೆ ಹೆಚ್ಚು ಕೋಪ ಅಥವಾ ಮನಸಿಗೆ ಸಮಾಧಾನವಿಲ್ಲದಿದ್ದರೆ ಕಾಲುಂಗುರವನ್ನು ಧರಿಸಿದ ನಂತರ ಸಿಟ್ಟು ನಿಯಂತ್ರಣ ಗೊಳ್ಳುತ್ತದೆ.ಹಾಗೂ ಶಾಂತ ಮನಸ್ಥಿತಿ ತಮ್ಮದಾಗುತ್ತದೆ.
ಇದೆಲ್ಲದರ ಜೊತೆಗೆ ಕಾಲುಂಗುರವನ್ನು ಧರಿಸುವುದರಿಂದ ನೆಗೆಟಿವ್ ಎನರ್ಜಿ ನಮ್ಮ ದೇಹದಿಂದ ದೂರ ಉಳಿಯುತ್ತದೆ ಹಾಗೂ ಮುಖ್ಯವಾಗಿ ಡೈಜೆಶನ್ಗೆ ತುಂಬಾನೇ ಒಳ್ಳೆಯದು.