ಫೋಕ್ಸೋ ಪ್ರಕರಣದಲ್ಲಿ (Pocso case) ಆರೋಪಿಯಾಗಿರುವ ಬಿಎಸ್ವೈ (BSY) ಭವಿಷ್ಯ ಇಂದು ನಿರ್ಧಾರವಾಗಲಿದೆ. ಇಂದು ಹೈಕೋರ್ಟ್ ನಲ್ಲಿ (Highcourt) ಜಾಮೀನು ಸಿಕ್ಕರೆ ಬಿಎಸ್ವೈ ಸೇಫ್ ಆಗಲಿದ್ದಾರೆ. ಇಲ್ಲವಾದಲ್ಲಿ ಬಿಎಸ್ವೈ ಬಂಧಿಸಸಲು ಸಿಐಡಿ ಸಿದ್ಧತೆ ನಡೆಸಿದ್ದಾರೆ.
ಯಡಿಯೂರಪ್ಪ ವಿರುದ್ಧ ಸದಾಶಿವನಗರ ಪೊಲೀಸ್ಠಾಣೆಯಲ್ಲಿ ದಾಖಲಾಗಿದ್ದ ಕೇಸ್ ಇದಾಗಿದ್ದು, ಈ ಪ್ರಕರಣದಲ್ಲಿ ನಿನ್ನೆ ಬಿಎಸ್ವೈ ವಿರುದ್ಧ NBW ಪಡೆದಿರುವ ಸಿಐಡಿ (CID) ಬಿಎಸ್ ವೈ ಬಂಧನಕ್ಕೆ ಸಿದ್ಧತೆ ನಡೆಸಿದೆ.
ಈ ಹಿನ್ನೆಲೆ ಹೈಕೋರ್ಟನಲ್ಲಿ 2 ಅರ್ಜಿ ಸಲ್ಲಿಸಿರುವ ಬಿಎಸ್ ಯಡಿಯೂರಪ್ಪ (BS Yediyurappa) ಪರ ವಕೀಲರು, ಬೇಲ್ ಪಡೆಯುವ ಪ್ರಯತ್ನ ನಡೆಸಲಿದ್ದಾರೆ.
ಮೊದಲ ಅರ್ಜಿ:
ಪೋಕ್ಸೋ ಕೇಸ್ FIR ರದ್ದುಕೋರಿ ಅರ್ಜಿ ಸಲ್ಲಿಕೆ
CRPC 482 ಅಡಿ ರದ್ದು ಕೋರಿರುವ ಬಿಎಸ್ವೈ
ಎರಡನೇ ಅರ್ಜಿ:
ಮತ್ತೊಂದೆಡೆ ನಿರೀಕ್ಷಣಾ ಜಾಮೀನು ಅರ್ಜಿ
ಇಂದು 2 ಅರ್ಜಿಯ ವಿಚಾರಣೆನ್ನು ಹೈಕೋರ್ಟ್ ಏಕಸದಸ್ಯ ಪೀಠ ನಡೆಸಲಿದೆ. ಇವತ್ತು ಯಡಿಯೂರಪ್ಪನವರಿಗೆ 2 ಸಾಧ್ಯತೆಗಳಿವೆ. ಒಂದು ಬೇಲ್ ರಿಜೆಕ್ಟ್ ಆಗಿ ಸಂಕಷ್ಟ ಎದುರಾಗುವ ಸಾಧ್ಯತೆ ಅಥವಾಬೇಲ್ ಸಿಕ್ಕಿ ಬಿಎಸ್ವೈ ಬಿಗ್ ರಿಲೀಫ್ ಸಿಗುವ ಸಾಧ್ಯತೆ. ಎಫ್ ಐರ್ ರದ್ದು ಕೋರಿರುವ ಪ್ರಕರಣದಲ್ಲಿ ಮಧ್ಯಂತರ ರಿಲೀಫ್ ಸಿಗುವ ಸಾಧ್ಯತೆ ಇದ್ದು, ಇಂದಿನ ವಿಚಾರಣೆ ಕುತೂಹಲಕ್ಕೆ ಕಾರಣವಾಗಿದೆ.