ದೇವರು ಎಂದ ಮೇಲೆ ಎಲ್ಲರಿಗೂ ದೇವರು.. ಒಳ್ಳೆ ಕೆಲಸ ಕೆಟ್ಟ ಕೆಲಸ ಅಂತಾ ಇರಲ್ಲ. ದೇವರನ್ನು ಎಲ್ಲರೂ ಪೂಜಿಸುತ್ತಾರೆ. ಅದೇ ರೀತಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ದರ್ಶನ್‌ಗೆ ಒಳ್ಳೇದಾಗಲಿ ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೊಲ್ಲೂರು ಮೂಕಾಂಬಿಕೆ ಮೊರೆ ಹೋಗಿದ್ದಾರೆ. ನಿನ್ನೆ ಸಂಜೆಯೇ ಕೊಲ್ಲೂರಿಗೆ ಬಂದು ತಂಗಿದ್ದ ವಿಜಯಲಕ್ಷ್ಮೀ, ಶುಕ್ರವಾರ ಬೆಳಗ್ಗೆ ನಾಳೆ ನವಚಂಡಿಕಾ ಹೋಮದಲ್ಲಿ ಭಾಗಿಯಾಗಲಿದ್ದಾರೆ. ತನ್ನ ಆಪ್ತರ ಜೊತೆಗೆ ಬಂದಿರುವ ವಿಜಯಲಕ್ಷ್ಮಿ ದರ್ಶನ್, ಕೊಲೆ ಕೇಸ್‌ನಿಂದ ದರ್ಶನ್ ಪಾರು ಮಾಡಲು ಶಕ್ತಿ ದೇವತೆಯ ಮೊರೆ ಇಟ್ಟಿದ್ದಾರೆ.
ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ದರ್ಶನ್ ಪತ್ನಿ ಬಂದು ನಿನ್ನೆಯೇ ಪೂಜೆ ಸಲ್ಲಿಕೆ ಮಾಡಿ ದೇವಸ್ಥಾನ ಆಡಳಿತ ಮಂಡಳಿ ಜೊತೆಗೆ ಮಾತನಾಡಿ ರಶೀದಿ ಪಡೆದುಕೊಂಡಿದ್ದರು. ಅದರಂತೆ ಇಂದಿನ ಚಂಡಿಕಾ ಹೋಮದಲ್ಲಿ ದರ್ಶನ್ ಪತ್ನಿ ಪಾಲ್ಗೊಂಡಿದ್ದಾರೆ. ಮೂಕಾಂಬಿಕ ದೇವಿಗೆ ವಿಶೇಷ ಹರಕೆ ಹೊತ್ತಿರುವ ವಿಜಯಲಕ್ಷ್ಮಿ, ಎಲ್ಲವೂ ಒಳ್ಳೆಯದೇ ಆದರೆ ದರ್ಶನ್ ಜೊತೆಗೆ ಮತ್ತೊಮ್ಮೆ ಬಂದು ಪೂಜೆ ಸಲ್ಲಿಸುವುದಾಗಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸಂಕಲ್ಪ, ಪಾರಾಯಣದಲ್ಲೂ ವಿಜಯಲಕ್ಷ್ಮೀ ಭಾಗಿಯಾಗಿದ್ದಾರೆ.

ಉಡುಪಿ ಜಿಲ್ಲೆ ಬೈಂದೂರು ತಾಲೂಕಿನl್ಲಿರುವ ಕೊಲ್ಲೂರಿನ Kolluru ಮೂಕಾಂಬಿಕೆ Mookambika ದೇಗುಲದಲ್ಲಿ ತಾಯಿಯನ್ನು ನಿಷ್ಟೆಯಿಂದ ಬೇಡಿಕೊಂಡರೆ ಸಂಕಲ್ಪ ಸಿದ್ಧಿಯಾಗುತ್ತೆ ಎನ್ನುವ ನಂಬಿಕೆ ಇದೆ. ಹೀಗಾಗಿ ದೇವಿ ದರ್ಶನ ಪಡೆದು ಕೊಲ್ಲೂರಲ್ಲೇ ಉಳಿದುಕೊಂಡಿದ್ದ Vijayalakshmi ವಿಜಯಲಕ್ಷ್ಮಿ, ದರ್ಶನ್‌ಗಾಗಿ Darshan ವಿಶೇಷ ಪೂಜೆ, ಸಂಕಲ್ಪ ಕೈಕೊಂಡಿದ್ದಾರೆ. ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಮನೆಯೂಟದ ಅರ್ಜಿ ತಿರಸ್ಕಾರ ಆಗಿದೆ. ಹೈಕೋರ್ಟ್‌ನಲ್ಲಿ ಜುಲೈ 29ಕ್ಕೆ ಅರ್ಜಿ ವಿಚಾರಣೆಗೆ ಬರಲಿದ್ದು, ಮತ್ತೆ ಅವಕಾಶ ಸಿಗುತ್ತಾ ಅನ್ನೋ ನಿರೀಕ್ಷೆ ದರ್ಶನ್ ಅಭಿಮಾನಿಗಳು ಹಾಗು ಕುಟುಂಬಸ್ಥರಲ್ಲಿದೆ.
ಆಷಾಢ ಮಾಸದಲ್ಲಿ ಶಕ್ತಿ ದೇವತೆಯರನ್ನು ಪೂಜೆ ಮಾಡುವ ವಾಡಿಕೆ ನಡೆದುಕೊಂಡು ಬಂದಿದೆ. ಅದರಲ್ಲೂ ಆಷಾಢ ಮಾಸದ ಶುಕ್ರವಾರ ಶಕ್ತಿ ದೇವತೆಗಳನ್ನು ಪೂಜಿಸುವುದರಿಂದ ದೇವಿಯನ್ನು ಒಲಿಸಿಕೊಳ್ಳಬಹುದು. ಇಷ್ಟಾರ್ಥ ಪೂರೈಸಿಕೊಳ್ಳಬಹುದು ಅನ್ನೋ ಕಾರಣಕ್ಕೆ ಇಂದು ಎಲ್ಲಾ ಶಕ್ತಿ ದೇವತೆಗಳಿಗೆ ಭಕ್ತು ಸಾಲುಗಟ್ಟಿ ದರ್ಶನ ಪಡೆಯುತ್ತಾರೆ. ಅದೇ ದಿನ ಚಂಡಿಕಾ ಹೋಮಾ ಹವನ ಮಾಡುವುದರಿಂದ ಬೇಡಿಕೆಗಳನ್ನು ಆ ತಾಯಿ ಈಡೇರಿಸುತ್ತಾಳೆ ಅನ್ನೋದು ನಂಬಿಕೆ ಆಗಿದೆ
