ಕರ್ನಾಟಕದಲ್ಲಿ ಇಳಿಕೆಯಾಗಿದ್ದ ಕೋವಿಡ್-19 ಸಂಖ್ಯೆ ಇಂದು ಒಂದೇ ದಿನ 1465 ಮಂದಿಗೆ ಕರೋನಾ ಸೋಂಕು ತಗುಲಿದೆ. ಇಬ್ಬರು ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ.
ಅದೇ ರೀತಿ 1295 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್ ಪಾಸಿಟಿವಿಟಿ ದರವು ಶೇ.5.96ರಷ್ಟಿದೆ. ಅದೇ ಒಂದು ವಾರದಲ್ಲಿ ವರದಿ ಆಗಿರುವ ಪ್ರಕರಣಗಳ ಆಧಾರದ ಮೇಲೆ ಪಾಸಿಟಿವಿಟಿ ದರವನ್ನು ನೋಡುವುದಾದರೆ ಅದು ಶೇ.5.35ರಷ್ಟಿದೆೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 8,586 ಜನರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 48 ಮಂದಿ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದರೆ, 9,680 ಸೋಂಕಿತರು ಗುಣಮುಖರಾಗಿದ್ದಾರೆ.







