ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಕೇಂದ್ರ ಸಚಿವರಾಗಿರುವ ಹಿನ್ನೆಲೆ ಜೆಡಿಎಸ್ (JDS) ಶಾಸಕಾಂಗ ಪಕ್ಷದ ನಾಯಕನಿಗಾಗಿ ಮಾಜಿ ಪ್ರಧಾನಿ ದೇವೇಗೌಡರು (HD Devegowda) ಹುಡುಕಾಟ ನಡೆಸ್ತಿದ್ದಾರೆ. 18 ಶಾಸಕರಲ್ಲಿ ಯಾರಿಗೆ ಜೆಡಿಎಸ್ ಶಾಸಕಾಂಗ ಪಕ್ಷ ನಾಯಕ ಸ್ಥಾನ ನೀಡಬೇಕೆಂದು ಆಪ್ತರ ಬಳಿ ಹೆಚ್‌ಡಿಡಿ ಚರ್ಚಿಸಿದ್ದಾರೆ.
ಈಗಾಗಲೇ ರೇಸ್ ನಲ್ಲಿ ಮೂವರು ಪ್ರಮುಖರ ಹೆಸರು ಕೇಳಿಬರ್ತಿದೆ. ಬಲ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ (GT Devegowda), ಎಸ್ಟಿ ಸಮುದಾಯಕ್ಕೆ ಸೇರಿರುವ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದ ಪೂರ್ಯನಾಯ್ಕ ಹಾಗೂ ಕುರುಬ ಸಮುದಾಯಕ್ಕೆ ಸೇರಿರುವ ಶಾಸಕ ಸುರೇಶ್‌ಬಾಬು (Suresh babu) ಹೆಸರು ಮುಂಚೂಣಿಯಲ್ಲಿದೆ.
ವಿಧಾನಸಭೆಯಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು.ಜೊತೆಗೆ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ, ಪಕ್ಷ ಸಂಘಟನೆಗೆ ಒತ್ತು ನೀಡುವ ನಾಯಕನನ್ನ ಆಯ್ಕೆ ಮಾಡಲು ಹೆಚ್‌ಡಿ ದೇವೇಗೌಡರು ಚಿಂತನೆ ನಡೆಸಿದ್ದಾರೆ.