ಸಾದಾ ಯಡಿಯೂರಪ್ಪ (Yediyurappa) ಟೀಮ್ ನಲ್ಲೇ ಗುರುತಿಸಿಕೊಳ್ಳುತ್ತಿದ್ದ ಎಂಪಿ ರೇಣುಕಾಚಾರ್ಯಗೆ(amp renukacharya ) ಇದೀಗ ಸ್ವತಃ BSY ಪಕ್ಷದಿಂದ ಹೊರಹಾಕೋ ವಾರ್ನಿಂಗ್ (warning) ಕೊಟ್ಟಿದ್ದಾರೆ. ಹೌದು ರೇಣುಕಾಚಾರ್ಯಗೆ ದೂರವಾಣಿ ಕರೆ ಮಾಡಿರುವ ಯಡಿಯೂರಪ್ಪ ಪಕ್ಷಕ್ಕೆ ಕೆಲಸ ಮಾಡೋದಿದ್ರೆ ಮಾಡು , ಇಲ್ಲವಾದ್ರೆ ಪಕ್ಷದಿಂದ ಹೊರಹಾಕ್ತಿನಿ ಅಂತ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಇದಕ್ಕೆ ಕಾರಣ ರೇಣುಕಾಚಾರ್ಯ ಹಾರಿಸಿದ್ದ ಬಂಡಾಯದ ಬಾವುಟ. ದಾವಣಗೆರೆಯಲ್ಲಿ ಸಿದ್ದೇಶ್ವರ್ (siddeshwar) ಪತ್ನಿ ಗಾಯತ್ರಿ (Gayatri) ಅವರಿಗೆ ಟಿಕೆಟ್ ನೀಡಿದ್ದನ್ನ ವಿರೋಧಿಸಿ ರೇಣುಕಾಚಾರ್ಯ ಅಂಡ್ ಟೀಮ್ ಬಂಡಾಯದ ಕಹಳೆ ಮೊಳಗಿಸಿದ್ದು.
ದಾವಣಗೆರೆ (Davanagere) ಕ್ಷೇತ್ರಕ್ಕೆ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕೂಡ ಬಿಜೆಪಿಯ (BJP) ಟಿಕೆಟ್ ಆಕಾಂಕ್ಷಿಯಾಗಿದ್ರು. ಆದ್ರೆ ಈ ಬಾರಿಯೂ ಟಿಕೆಟ್ ಜಿ.ಎಂ.ಸಿದೇಶ್ವರ್ (G.m.siddeshwar) ಕುಟುಂಬದ ಪಾಲಾಗಿದೆ. ಇದಕ್ಕೆ ರೇಣುಕಾಚಾರ್ಯ ಸೇರಿದಂತೆ ಜಿಲ್ಲೆಯ ಬಹುತೇಕ ಬಿಜೆಪಿ ನಾಯಕರು ಬಹಿರಂಗವಾಗೆ ಅಸಮಾಧಾನ ಹೊರಹಾಕಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ (MLA election) ಅಭ್ಯರ್ಥಿಗಳ ಪ್ರಚಾರಕ್ಕೂ ಸಿದ್ದೇಶ್ವರ್ ಬಂದಿಲ್ಲ. ಸಾದಾ ಸ್ವಪಕ್ಷದವರನ್ನೇ ತುಳಿಯುವ ಕೆಲಸ ನಿರಂತರವಾಗಿ ಅವರಿಂದ ಆಗಿದೆ. ಕಾರ್ಯಕರ್ತರನ್ನು ಗೌರವದಿಂದ ನಡೆಸಿಕೊಳ್ಳುವುದಿಲ್ಲ. ಇಂಥ ಅಭ್ಯರ್ಥಿಗಾಗಿ ಕೆಲ್ಸ ಮಾಡಲು ನಮಗೆ ಮನಸ್ಸಿಲ್ಲ.. ಗೆಲುವು ಬೇಕಿದ್ದಲ್ಲಿ ಅಭ್ಯರ್ಥಿ ಬದಲಾವಣೆ ಮಾಡಿ ಅಂತ ಉಳಿದ ನಾಯಕರು ಪಟ್ಟು ಹಿಡಿದಿದ್ದರು.
ಇದೇ ವಿಚಾರವಾಗಿ ಹೈಕಮಾಂಡ್ ಗೆ (Highcommand) ರೇಣುಕಾಚಾರ್ಯ ನೇತೃತ್ವದ ಬಿಜೆಪಿ ನಾಯಕರು ಡೆಡ್ ಲೈನ್ (Deadline) ವಿಧಿಸಿ , 3 ದಿನದ ಒಳಗೆ ಅಭ್ಯರ್ಥಿ ಬದಲಾಯಿಸುವ ನಿರ್ಧಾರ ಘೋಷಿಸದಿದ್ದರೆ , ನಾವು ನಮ್ಮ ನಿರ್ಧಾರ ಪ್ರಕಟ ಮಾಡಲಿದ್ದೇವೆ ಎಂದು ಸಂದೇಶ ರವಾನಿಸಿದ್ದರು. ಆದ್ರೆ ಸರ್ವೆ ರಿಪೋರ್ಟ್ (survey report) ಆಧರಿಸಿಯೇ ಪಕ್ಷ ಟಿಕೆಟ್ ನೀಡಿದ್ದು , ಈಗ ವಿರೋಧಿಸೋದು ಸರಿಯಲ್ಲ. ಬೇಕಿದ್ದರೆ ಪಕ್ಷದಲ್ಲಿ ಇರಿ, ಇಲ್ಲವಾದ್ರೆ ಜಾಗ ಖಾಲಿ ಮಾಡಿ ಎಂಬ ಸಂದೇಶವನ್ನ BSY ರವಾನಿಸಿದ್ದು, ಸದ್ಯ ನಾಯಕರು ತಣ್ಣಗಾಗಿದ್ದಾರೆ.