ಬೈಕ್ನಲ್ಲಿ ಲಿಫ್ಟ್ ಕೊಡುವ ನೆಪದಲ್ಲಿ ಅಪ್ರಾಪ್ತ ಬಾಲಕನಿಗೆ ಬಿಜೆಪಿ ಕಾರ್ಯಕರ್ತನೋರ್ವ ಲೈಂಗಿಕ ಕಿರುಕುಳ (sexually harassed) ನೀಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇದೀಗ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ 47 ವರ್ಷದ ಬಾಲಚಂದ್ರನ್ ಎಂಬ ಬಿಜೆಪಿ ಕಾರ್ಯಕರ್ತನನ್ನು (BJP worker) ತಮಿಳುನಾಡಿನ (Tamil Nadu) ವಿಲ್ಲಿವಕ್ಕಂ ಜಿಲ್ಲೆಯಲ್ಲಿ (Villivakkam) ಬಂಧಿಸಲಾಗಿದೆ. ಈತ ಅಪ್ರಾಪ್ತ ಬಾಲಕನಿಗೆ (minor boy) ಲಿಫ್ಟ್ ನೀಡಿ ಪರಾರಿಯಾಗಿದ್ದ ಎಂದು ಹೇಳಲಾಗ್ತಾ ಇದೆ.
ಬೈಕ್ನಲ್ಲಿ ಲಿಪ್ಟ್ ನೀಡುವುದಾಗಿ ಹೇಳಿ ಅಪ್ರಾಪ್ತ ಬಾಲಕನನ್ನ ಈತ ಬೈಕ್ನಲ್ಲಿ ಹತ್ತಿಸಿಕೊಂಡು ಹೋಗಿದ್ದಾನೆ. ಬಳಿಕ ಪಾಡಿ ಸೇತುವೆಯ ಕೆಳಗಿರುವ ಸ್ಥಳಕ್ಕೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಬೈಕ್ನಿಂದ ಕೆಳಗಿಳಿದ ಬಾಲಕ ಅಳುತ್ತಿದ್ದುದನ್ನು ವಿಲ್ಲಿವಕ್ಕಂನ ಸ್ಥಳೀಯರು ಗಮನಿಸಿದಾಗ ಬಾಲಕನನ್ನ ಸ್ಥಳೀಯರು ವಿಚಾರಿಸಿದ್ದಾರೆ.
ಯಾಕೆ ಅಳುತ್ತಿದ್ದೀಯ ಎಂದು ಬಾಲಕನನ್ನ ಸ್ಥಳೀಯರು ವಿಚಾರಿಸಿದಾಗ, ತಾನು ಬಾಲಚಂದ್ರನ್ ಬಳಿ ಲಿಫ್ಟ್ ಕೇಳಿದ್ದಾಗಿ ಬಳಿಕ ಆತ ತನ್ನನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಕಿರುಕುಳ ನೀಡಿದ್ದಾನೆ ಎಂದು ಬಾಲಕ ಹೇಳಿದನು. ನಂತರ ಬಾಲಕನಿಗೆ ಕಿರುಕುಳ ನೀಡಿದ್ದಕ್ಕಾಗಿ ಆತನನ್ನು ಸಾರ್ವಜನಿಕರು ಹಿಡಿದಿದ್ದರು. ಈ ವೇಳೆ ಬಾಲಚಂದ್ರನ್ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದಾಗ ಸಾರ್ವಜನಿಕರು ಅವನನ್ನು ತಡೆದು ಹಿಡಿದರು.
ಈ ವೇಳೆ ಬಾಲಚಂದ್ರನ್ನನ್ನ ತಪಾಸಣೆ ನಡೆಸಿದಾಗ ಕೆಲವೊಂದು ಮಾಹಿತಿಗಳು ಸಿಕ್ಕಿದ್ವು ಬಳಿಕ ಆತನ ವಾಹನ ತಪಾಸಣೆ ನಡೆಸಿದಾಗ ಬಿಜೆಪಿ ಪಕ್ಷದ ಧ್ವಜ ಮತ್ತು ಗುರುತಿನ ಚೀಟಿ ಪತ್ತೆಯಾಗಿತ್ತು, ಹೀಗಾಗಿ ಆತ ಬಿಜೆಪಿ ಪಕ್ಷದ ಕಾರ್ಯಕರ್ತ ಹಾಗೂ ಅಂದು ಬಿಜೆಪಿ ಕಾರ್ಯಾಗಾರದಲ್ಲಿ ಆತ ಭಾಗವಹಿಸಿದ್ದ ಎಂಬುದನ್ನ ಸ್ಥಳೀಯರು ಪತ್ತೆ ಹಚ್ಚಿದ್ದಾರೆ. ಘಟನೆ ಬಳಿಕ ಬಿಜೆಪಿ ಕಾರ್ಯಕರ್ತ ಬಾಲಚಂದ್ರನ್ ನನ್ನು ಸ್ಥಳೀಯರು ಬಿಟ್ಟು ಕಳುಹಿಸಿದ್ದರು. ಆದ್ರೆ ಮಗುವಿನ ತಾಯಿ ನೀಡಿದ ದೂರಿನ ನಂತರ ವಿಲ್ಲಿವಕ್ಕಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಿ ವಿಚಾರಣೆಯನ್ನ ನಡೆಸುತ್ತಿದ್ದಾರೆ.