ನಾರದಾ ಲಂಚ ಪ್ರಕರಣ- ಟಿಎಂಸಿ ಶಾಸಕ, ಸಚಿವರ ಬಂಧನ ವಿರೋಧಿಸಿ ಸಿಬಿಐ ಕಚೇರಿ ಮುಂದೆ ಟಿಎಂಸಿ ಬೆಂಬಲಿಗರಿಂದ ಪ್ರತಿಭಟನೆ

ನಾರದಾ ಲಂಚಪ್ರಕರಣದ ಆರೋಪದಡಿ ತೃಣಮೂಲ ಕಾಂಗ್ರೆಸ್ ಶಾಸಕರಾದ ಫಿರ್ಹಾದ್ ಹಕೀಮ್, ಸುಬ್ರತಾ ಮುಖರ್ಜಿ, ಮದನ್ ಮಿತ್ರ ಮತ್ತು ಮಾಜಿ ಸಚಿವ, ಕೋಲ್ಕತಾ ಮೇಯರ್ ಶೋವನ್ ಚಟರ್ಜಿಯನ್ನು ಕೇಂದ್ರ ತನಿಖಾ ದಳ (ಸಿಬಿಐ) ವು ಸೋಮುವಾರ ಬಂಧಿಸಿದೆ. ಬಂಧನ ವಿರೋಧಿಸಿ ಟಿಎಂಸಿ ಬೆಂಬಲಿಗರು ಕೋಲ್ಕತ್ತಾ ಸಿಬಿಐ ಕಚೇರಿಯ ಮುಂದೆ ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಪ್ರಕರಣ ಸಂಬಂಧ ಟಿಎಂಸಿ ಶಾಸಕರಾದ ಸುಬ್ರತಾ ಮುಖರ್ಜಿ, ಫಿರ್ಹಾದ್ ಹಕೀಮ್ ಮತ್ತು ಮದನ್ ಮಿತ್ರಾ ಮತ್ತು ಮಾಜಿ ಟಿಎಂಸಿ, ಬಿಜೆಪಿ ನಾಯಕ ಸೋವನ್ ಚಟರ್ಜಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಿಬಿಐ ಕೋರಿಕೆಯನ್ನು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಅನುಮೋದಿಸಿದ ಕೆಲವೇ ದಿನಗಳಲ್ಲಿ ಈ ಬಂಧನ ನಡೆದಿದೆ.

ಬಂಧನದ ವಿರುದ್ಧ ಮುಖ್ಯಮಂತ್ರಿ ಮಮತಾ ಕಿಡಿ

ಸಚಿವರು, ಶಾಸಕರ ಬಂಧನದ ವಿಷಯ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶಗೊಂಡಿದ್ದಾರೆ. ಇದೊಂದು ಅಕ್ರಮ ಬಂಧನವೆಂದು ವಿರೋಧಿಸಿದ ಅವರು ಸಿಬಿಐ ಕಚೇರಿಗೆ ತೆರಳಿದ್ದಾರೆ. ಮೊದಲು ನನ್ನನ್ನು ಬಂಧಿಸಲೆಂದು ಮಮತಾ ಸಿಬಿಐ ಗೆ ಸವಾಲು ಹಾಕಿದ್ದಾರೆಂದು ವಕೀಲ, ಟಿಎಂಸಿ ಮುಖಂಡ ಅನಿಂದ್ಯಾ ರೌತ್ ವರದಿಗಾರರಿಗೆ ತಿಳಿಸಿದ್ದಾರೆ

ಸಿಬಿಐ ಕಚೇರಿ ಮುಂದೆ ಟಿಎಂಸಿ ನಾಯಕರಿಂದ ಪ್ರತಿಭಟನೆ

ಶಾಸಕ, ಸಚಿವರ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಟಿಎಂಸಿ ಬೆಂಬಲಿಗರು, ಕಾರ್ಯಕರ್ತರು ಕೋಲ್ಕತ್ತಾದ ಸಿಬಿಐ ಕಚೇರಿ ಮುಂದೆ ಜಮಾಯಿಸಿ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

ಏನಿದು ನಾರದ ಲಂಚಪ್ರಕರಣ

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರು ಸೇರಿದಂತೆ ಹಲವು ಅಧಿಕಾರಿಗಳು ಲಂಚ ಪಡೆಯುತ್ತಿದ್ದುದನ್ನು ನಾರದಾ ನ್ಯೂಸ್ ಪೋರ್ಟಲ್ ಕುಟುಕು ಕಾರ್ಯಾಚರಣೆ ಮೂಲಕ ಬಯಲಿಗೆ ಎಳೆದಿತ್ತು.

ನಾರದಾ ನ್ಯೂಸ್ ಪೋರ್ಟಲ್ ಮುಖ್ಯಸ್ಥ ಮ್ಯಾಥ್ಯೂ ಸ್ಯಾಮುಯಲ್ ಅವರು ಉದ್ಯಮಿ ರೂಪದಲ್ಲಿ ಟಿಎಂಸಿ ನಾಯಕರ ಜತೆ ವ್ಯವಹಾರ ಕುದುರಿಸುವ ಕಾರ್ಯಾಚರಣೆಯಾಗಿದ್ದು, 2014ರಲ್ಲಿ ಈ ಕುಟುಕು ಕಾರ್ಯಾಚರಣೆ ನಡೆಸಲಾಗಿತ್ತಾದರೂ 2016ರ ಪ.ಬಂಗಾಳ ಚುನಾವಣೆಯಲ್ಲಿ ಸದ್ದು ಮಾಡಿತ್ತು. ವ್ಯಾಪಾರಿಯಂತೆ ನಟಿಸಿ ಟಿಎಂಸಿ ನಾಯಕರಿಗೆ ಹಣದ ಆಮಿಷಯೊಡ್ಡುವ ಕುಟುಕು ಕಾರ್ಯಾಚರಣೆ ಇದಾಗಿದ್ದು, ಈ ಹಗರಣದ ವಿಡಿಯೋ ದೃಶ್ಯಾವಳಿಗಳು 2016 ರಲ್ಲಿ ಬಯಲಿಗೆ ಬಂದಿತ್ತು. ಹಾಗು ಹಲವು ಚಾನಲ್ ಗಳಲ್ಲಿ ಪ್ರಸಾರವಾಗಿತ್ತು.

ಈಸ್ಟಿಂಗ್ ಆಪರೇಷನ್ನಲ್ಲಿ ಹಲವು ಸಂಸದರು, ಶಾಸಕರು, ಅಧಿಕಾರಿಗಳ ಲಂಚಗುಳಿತನ ಬೆಳಕಿಗೆ ಬಂದಿತ್ತು. 7 ಸಂಸದರು, 4 ಜನ ಸಚಿವರು, ಒಬ್ಬರು ಶಾಸಕರು ಹಾಗು ಒಬ್ಬ ಐಪಿಎಸ್ ಅಧಿಕಾರಿ ಕಾಣಿಸಿಕೊಂಡಿಕೊಂಡಿದ್ದರು. 2017ರ ಮಾರ್ಚ್ ತಿಂಗಳಲ್ಲಿ ಕೋಲ್ಕತ್ತಾ ಹೈಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಆದೇಶ ನೀಡಿತ್ತು.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...