ವಿಶ್ವ ವಿಖ್ಯಾತ ಆಂಧ್ರಪ್ರದೇಶದ (Andrapradesh) ತಿರುಪತಿ ಲಡ್ಡು (Tirupati laddu) ಪ್ರಸಾದಕ್ಕೆ ಪ್ರಾಣಿಯ ಕೊಬ್ಬಿನಾಂಶ ಇದ್ದ ಕಲಬೆರಕೆ ತುಪ್ಪವನ್ನು ಸರಬರಾಜು ಮಾಡಲಾಗಿದೆ ಎಂಬ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿತ್ತು. ಹೀಗಾಗಿ ಇಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Cm chandra babu naidu) ಶುದ್ಧೀಕರಣದ ಕಾರ್ಯ ನೆರವೇರಿಸಿದ್ದಾರೆ.
ತಿರುಪತಿಯಲ್ಲಿ ಪಾವಿತ್ರ್ಯತೆ ನೆಲೆಸುವಂತೆ ಮಾಡಲು ಇಂದು ದೇವಸ್ಥಾನದಲ್ಲಿ ‘ಶುದ್ಧೀಕರಣ ಪೂಜೆ’ ನೆರವೇರಿಸಲಾಗಿದೆ. ಆಗಮ ಶಾಸ್ತ್ರ ಪಂಡಿತರ ಸಲಹೆ ಮೇರೆಗೆ ಈ ನಿರ್ಯಾಣ ಕೈಗೊಳ್ಳಲಾಯಿತು.
ಸೋಮವಾರ ಬೆಳಗ್ಗೆ 6 ರಿಂದ 10 ರವರೆಗೆ ದೇವಸ್ಥಾನದಲ್ಲಿ ಶಾಂತಿ ಹೋಮ, ಪಂಚಗವ್ಯಂ ಶುದ್ಧೀಕರಣ ಪ್ರಕ್ರಿಯೆ ನಡೆಸಲಾಗಿದೆ. ಬೆಳಗ್ಗೆ 6 ರಿಂದ 10 ರವರೆಗೆ ಶಾಂತಿ ಹೋಮ ಪಂಚಗವ್ಯ ಪ್ರೋಕ್ಷಣೆ ನೆರವೇರಿದೆ. ಈ ಮೂಲಕ ತಿರುಪತಿ ಕ್ಷೇತ್ರದ ಪಾವಿತ್ರ್ಯತೆ ಮರುಸ್ಥಾಪನೆಗೆ ಆಂಧ್ರ ಸರ್ಕಾರ ಮುಂದಾಗಿದೆ.