ಇತ್ತೀಚಿನ ದಿನಗಳಲ್ಲಿ ಜನ ಹೆಚ್ಚಾಗಿ ಬೆಲ್ಲವನ್ನು ಉಪಯೋಗಿಸುತ್ತಾರೆ, ಮುಂಚೆ ಸಕ್ಕರೆಯನ್ನ ಬಳಸುತ್ತಿದ್ದರು, ಆದರೆ ಸಕ್ಕರೆಯಲ್ಲಿ ಕೊಲೆಸ್ಟ್ರಾಲ್ ಅಂಶ ಜಾಸ್ತಿ ಇರುತ್ತದೆ ಬದಲಿಗೆ ಬೆಲ್ಲವನ್ನ ಬಳಸುವುದರಿಂದ ದೇಹದ ಆರೋಗ್ಯ ಉತ್ತಮವಾಗಿರುತ್ತದೇ.. ಇನ್ನು ಬೆಲ್ಲವನ್ನ ಬಳಸುವುದರಿಂದ ಬ್ಲಡ್ ನ ಪ್ಯೂರಿಫ್ ಮಾಡುತ್ತದೆ, ಇಂಪ್ರೂವಾಗುತ್ತದೆ ,ಕಾನ್ಸ್ಟಿಪೇಶನ್ ನಿವಾರಣೆ ಆಗುತ್ತದೆ ಹಾಗೂ ಡಯಾಬಿಟಿಸಿದ್ದವರಿಗೆ ಒಳ್ಳೆಯದು.. ಇದೆಲ್ಲದರ ಜೊತೆಗೆ ಬೆಲ್ಲವನ್ನ ನಾವು ಮಳೆಗಾಲದಲ್ಲಿ ಶೇಖರಣೆ ಮಾಡುವುದು ಸ್ವಲ್ಪ ಕಷ್ಟಕರ ವಿಷಯ. ಬೆಲ್ಲವನ್ನು ಹಾಗೆ ಇಡುವುದರಿಂದ ಜಿನಗಿ ಅಥವಾ ಕರಗಿ ಹೋಗಬಹುದು.. ಹಾಗಾದ್ರೆ ಹೇಗೆ ಶೇಖರಣೆ ಮಾಡಬಹುದು ಅನ್ನೋದರ ಟಿಪ್ಸ್ ಇಲ್ಲಿದೆ.

ಫ್ರಿಡ್ಜ್
ಬೆಲ್ಲವನ್ನ ಒಂದು ಬಾಕ್ಸ್ ಅಥವಾ ಕಂಟೇನರ್ ಅಲ್ಲಿ ಹಾಕಿ ಫ್ರಿಡ್ಜ್ ನಲ್ಲಿ ಇಡುವುದರಿಂದ ಬೆಲ್ಲ ಹಾಳಾಗುವುದಿಲ್ಲ ಜೊತೆಗೆ ಕರಗುವುದಿಲ್ಲ ಹಾಗೂ ಎಷ್ಟು ದಿನದ ವರೆಗೂ ಕೂಡ ಬೇಕಾದರೂ ಇಡಬಹುದು.

ಮಣ್ಣಿನ ಮಡಿಕೆ
ಹಿಂದೆಲ್ಲಾ ಫ್ರಿಡ್ಜ್. ಇರ್ಲಿಲ್ಲ ಇಂಥ ಸಂದರ್ಭದಲ್ಲಿ ಜನ ಮಣ್ಣಿನ ಮಡಿಕೆಯಲ್ಲಿ ಪದಾರ್ಥವನ್ನು ಶೇಖರಣೆ ಮಾಡಿ ಇಡ್ತಾ ಇದ್ರು..ಬೆಲ್ಲವನ್ನು ಮಣ್ಣಿನ ಮಡಿಕೆಯಲ್ಲಿ ಇಡುವುದರಿಂದ ತುಂಬಾನೇ ತಂಪಾಗಿರುತ್ತದೆ ಹಾಗೂ ಮಡಿಕೆ ಯಾವುದನ್ನು ಕೂಡ ಹೀರಿಕೊಳ್ಳುವುದಿಲ್ಲ..

ಕಂಟೇನರ್
ಜನ ಒಂದು ಬಾಕ್ಸ್ ಅಥವಾ ಕಂಟೇನರಲ್ಲಿ ಬೆಲ್ಲವನ್ನು ಹಾಕಿಡಬೇಕು.. ಆದರೆ ಇದಕ್ಕೆ ಯಾವುದೇ ರೀತಿಯ ಗಾಳಿ ಹೋಗ್ಬಾರ್ದು. ಅದ್ರಲ್ಲೂ ಕೂಡ ಪ್ಲಾಸ್ಟಿಕ್ ಬದಲು ಸ್ಟೀಲ್ ಕಂಟೇನರ್ ಅನ್ನು ಬಳಸುವುದು ಉತ್ತಮ. ಪ್ಲಾಸ್ಟಿಕ್ ಕಂಟೇನರ್ ಬಳಸುವುದರಿಂದ ಬಣ್ಣ ಬದಲಾಗಬಹುದು.
ಬಿರಿಯಾನಿ ಎಲೆ
ಬೆಲ್ಲವನ್ನು ಹಾಕಿಡುವ ಡಬ್ಬದಲ್ಲಿ ಒಂದು ಬಿರಿಯಾನಿ ಎಲೆಯನ್ನ ಹಾಕಿ ಮುಚ್ಚಿ ಇಡುವುದರಿಂದ ಬೆಲ್ಲ ಕರಗುವುದಿಲ್ಲ ಮತ್ತು ಹಾಳಾಗುವುದಿಲ್ಲ.ಬಿರಿಯಾನಿಯಲ್ಲಿ ಆಂಟಿ ಫಂಗಲ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಅಂಶಗಳು ಹೆಚ್ಚಿರುತ್ತದೆ.

ಅಕ್ಕಿ ಡಬ್ಬ
ಬೆಲ್ಲವನ್ನು ಒಂದು ಗವರ್ನಲ್ಲಿ ಹಾಕಿ ಟೈಟಾಗಿ ಕಟ್ಟಿ ನಂತರ ಅಕ್ಕಿ ಡಬ್ಬ ಅಥವಾ ಗೋಧಿ ಡಬ್ಬದೊಳಗೆ ಹಾಕಿ ಇಡುವುದರಿಂದ ಬೆಲ್ಲ ಕರಗುವುದಿಲ್ಲ ಮತ್ತು ಹಾಳಾಗುವುದಿಲ್ಲ.