ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಅಂತರಸಂತೆ ವನ್ಯಜೀವಿ ವಲಯದ ತಾರಕ ಶಾಖೆಯ ದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿ ತಾಯಿಯಿಂದ ಬೇರ್ಪಟ್ಟ ಮೂರು ಹುಲಿಮರಿಗಳ ಪೈಕಿ ಒಂದು ಗಂಡು ಮರಿ ಮೃತಪಟ್ಟಿದೆ.
10-11 ತಿಂಗಳು ಪ್ರಾಯದ ಗಂಡು ಹುಲಿ ಮರಿಯ ದೇಹದ ಕುತ್ತಿಗೆ, ಭುಜದ ಬಳಿ ತೀವ್ರವಾದ ಗಾಯ, ಮುಂಗಾಲಿನ ಮೂಳೆ ಮುರಿದು ಮರಿ ಹುಲಿ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
ಬೇರೆ ಹುಲಿ ಜತೆ ಕಾದಾಟ ನಡೆಸಿ ಮರಿ ಹುಲಿ ಮೃತಪಟ್ಟಿರುವ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಶಂಕಿಸಿದ್ದಾರೆ.