ಮೈಸೂರು (Mysuru): ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು (Loksabha Election) ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗೆ (Yaduveer Krishnadatta Chamaraja Wadiyar) ಬಿಜೆಪಿ (BJP) ಟಿಕೆಟ್ ಕೊಟ್ಟ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಲ್ಲಿ (Congress) ತಂತ್ರಗಾರಿಕೆ ಬದಲಾಗಿದೆ.
ಬಿಜೆಪಿ ಒಕ್ಕಲಿಗ ಮುಖಂಡನಿಗೆ ಕಾಂಗ್ರೆಸ್ ಗಾಳ ಹಾಕಿದೆ. ಮಾಜಿ ಶಾಸಕ ದಿವಗಂತ ವಾಸು (Vasu) ಪುತ್ರ ಕವೀಶ್ ಗೌಡನಿಗೆ (Kavish Gowda) ಕಾಂಗ್ರೆಸ್ ಗಾಳ ಹಾಕಿದೆ.

ಮೈಸೂರು-ಕೊಡಗು (Mysuru-Kodagu) ಕ್ಷೇತ್ರ ಅತಿ ಹೆಚ್ಚು ಒಕ್ಕಲಿಗ ಮತದಾರರನ್ನ ಹೊಂದಿರುವ ಕ್ಷೇತ್ರ. ಈ ಕಾರಣದಿಂದ ಒಕ್ಕಲಿಗರು ಹಾಗೂ ಅಹಿಂದ ಮತಗಳನ್ನ ಒಗ್ಗೂಡಿಸಿ ಬಿಜೆಪಿ ಟಕ್ಕರ್ ಕೊಡಲು ಪ್ಲಾನ್ ಮಾಡಿದೆ.
ಈಗಾಗಲೇ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಕವೀಶ್ ಗೌಡ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಕೆಲವು ದಿನಗಳ ಕಾಲ ಕ್ಷೇತ್ರ ಸಂಚಾರ ಮಾಡಿ 50 ಸಾವಿರಕ್ಕೂ ಹೆಚ್ಚು ಮತಗಳನ್ನ ಪಡೆದಿದ್ದರು.
ಇದೀಗ ಈ ಕಾರಣದಿಂದಾಗಿ ಕವೀಶ್ ಗೌಡ ಸೂಕ್ತ ಅಭ್ಯರ್ಥಿ ಎಂಬ ತೀರ್ಮಾನಕ್ಕೆ ಕಾಂಗ್ರೆಸ್ ಹಿರಿಯ ಮುಖಂಡರು ಬಂದಿದ್ದಾರೆ. ಜೊತೆಗೆ ಕವೀಶ್ ಕ್ಲೀನ್ ಇಮೇಜ್ ಹೊಂದಿದ್ದಾರೆ. ಚಾಮರಾಜ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸದಿಂದಲೇ ಕವೀಶ್ ತಂದೆ ಮಾಜಿ ಶಾಸಕ ದಿ. ವಾಸು ಅವರು ಸದ್ದು ಮಾಡಿದ್ದರು.
#karnataka #mysuru #loksabhaelection #congress #yaduveer #kavishgowda #bjp







