ಇತ್ತಿಚಿನ ವಾತವರಣವನ್ನು(Environment) ನಮಗೆ ಗೆಸ್ ಮಾಡೋದಕ್ಕೆ ಸಾಧ್ಯವಾಗ್ತಾಯಿಲ್ಲ,ತುಂಬಾನೆ ಬಿಸಿಲಿರುತ್ತದೆ,ಆದ್ರೆ ಇದ್ದಕ್ಕಿದ್ದಂತೆ ಮಳೆ ಶುರುವಾಗುತ್ತದೆ. ಈ ವೇದರ್‌ಗೆ (Weather) ನಮ್ಮ ದೇಹ ಅಡ್ಜಸ್ಟ್ ಆಗೋದಕ್ಕೆ ಸ್ವಲ್ಪ ಕಷ್ಟ ಆಗ್ತಾಯಿದೆ.. ಹಾಗಾಗಿ ಹೆಚ್ಚು ಜನಕ್ಕೆ ಶೀತ, ನೆಗಡಿ, ಕೆಮ್ಮು ಹೆಚ್ಚಾಗ್ತಾಯಿದೆ..ಇದೆಲ್ಲದರ ಜೊತೆಗೆ ತುಂಬ ಜನಕ್ಕ ಕಾಡ್ತಾ ಇರುವಂತ ಸಮಸ್ಯೆ ಅಂದ್ರೆ ಗಂಟಲ್ಲಿನಲ್ಲಿ(Throat) ಹುಣ್ಣುಗಳಾಗುತ್ತಿರುವುದು.ಬ್ಯಾಕ್ಟೀರಿಯಾ, ಶಿಲೀಂಧ್ರಗಳು(Fungus) ಅಥವಾ ವೈರಸ್‌ಗಳಂತಹ(Virus) ಸಾಂಕ್ರಾಮಿಕ ರೋಗಕಾರಕಗಳಿಂದ ಹುಣ್ಣಾಗುತ್ತದೆ.
ಹುಣ್ಣಾದ್ರೆ(Ulcer) ನಮಗೆ ಎನನ್ನು ನುಂಗುವುದಕ್ಕೆ ಕಷ್ಟವಾಗುತ್ತದೆ. ಆಹಾರವಂತು ಕೇಳುವುದೆ ಬೇಡ,ಇನ್ನೂ ನೀರು (Water) ಅಥವ ಏನೇ ಒಂದು ಲಿಕ್ವಿಡ್‌ನ(Liquid) ನುಂಗೊದಿಕ್ಕು ಪ್ರಾಣ ಸಂಕಟ ಅಷ್ಟರ ಮಟ್ಟಿಗೆ ನೋವಾಗುತ್ತದೆ..ಈ ಗಂಟಲಿನಲ್ಲಿ ಆಗುವಂತ ಹುಣ್ಣಿನ್ನ ಮನೆಯಲ್ಲಿಯೆ ಯಾವ ರೀತಿ ಶಮನ ಮಾಡ್ಬಹುದು ಅನ್ನೋದರ ಮಾಹಿತಿ ಹೀಗಿದೆ.
ಜೇನುತುಪ್ಪ(Honey)
ಜೇನುತುಪ್ಪದಲ್ಲಿ(Honey) ಸಾಕಷ್ಟು ಔಷಧಿ ಅಂಶಗಳಿವೆ,ಹುಣ್ಣಿನಿಂದಾಗುವ ಗಂಟಲು ನೋವನ್ನು ಕಡಿಮೆ ಮಾಡಲು ದಿನಕ್ಕೆ ಎರಡರಿಮದ ಮೂರು ಬಾರಿ,ಒಂದೊಂದು ಟಿ.ಸ್ಪೂನ್(T Spoon) ನಷ್ಟು ಜೇನುತುಪ್ಪವನ್ನು ಸೇವನೆ ಮಾಡ್ಬೇಕು.ಇದು ಗಂಟಲು ನೋವು,ಕಿರಿಕಿರಿಯನ್ನು(Irritation) ನಿವಾರಣೆ ಮಾಡುತ್ತದೆ.ಮತ್ತು ಕೆಮ್ಮು(Cough) ಹೆಚ್ಚಿದ್ದರು ಕೂಡಾ ರಾತ್ರಿ(Night) ಹೊತ್ತು ಜೇನುತುಪ್ಪವನ್ನು ಸೇವಿಸುವುದು ಉತ್ತಮ.
ಬೆಳ್ಳುಳ್ಳಿ(Garlic)
ಬೆಳ್ಳುಳ್ಳಿಯಲ್ಲಿ ಅಲಿಸಿನ್(Allicin) ಎಂಬ ನೈಸರ್ಗಿಕ(Natural) ಅಂಶವನ್ನು ಹೊಂದಿದೆ, ಇದು ಸೋಂಕುಗಳ(Infection) ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಆ್ಯಂಟಿಬ್ಯಾಕ್ಟೀರಿಯಲ್(Anti bacteria) ಕೂಡ ಸಮೃದ್ಧವಾಗಿದೆ. ಹಾಗಾಗಿ ಗಂಟಲು ನೋವು ಅಥವ ಹುಣ್ಣುಗಳಾದಾಗ ಬೆಳ್ಳುಳ್ಳಿಯನ್ನ(Garlic) ಸೇವಿಸುವುದರಿಂದ ಬೇಗನೆ ನಿವಾರಣೆಯಾಗುತ್ತದೆ.
ಮಿಂಟ್ (Peppermint)
ಉರಿಯೂತದ ಗುಣಲಕ್ಷಣಗಳನ್ನು ಮತ್ತು ಕೆಲವು ಆಂಟಿಬ್ಯಾಕ್ಟೀರಿಯಲ್(Anti Bacterial) ಮತ್ತು ಆಂಟಿವೈರಲ್(Anti Viral) ಗುಣಗಳನ್ನು ಹೊಂದಿದೆ.ಪುದೀನವು ನಿಮ್ಮ ಗಂಟಲನ್ನು(Throat) ಸ್ವಲ್ಪಮಟ್ಟಿಗೆ ನಿಶ್ಚೇಷ್ಟಿತಗೊಳಿಸುತ್ತದೆ, ಇದರಿಂದಾಗಿ ನೋವು ನಿವಾರಣೆಯಾಗುತ್ತದೆ. ದಿನಕ್ಕೆ ಎರಡರಿಂದ ಮೂರು ಬಾರಿ ಹಲವು ಪುದಿನ ಎಲೆಗಳನ್ನ(Peppermint Leaf) ಸೇವಿಸುವುದು ಉತ್ತಮ.
ತೆಂಗಿನ ಎಣ್ಣೆ(Coconut Oil)
ತೆಂಗಿನ ಎಣ್ಣೆಯು ಆಂಟಿಮೈಕ್ರೊಬಿಯಲ್ (Anti Microbial) ಆಗಿದೆ ಮತ್ತು ಬಾಯಿಯಲ್ಲಿರುವ ಬ್ಯಾಕ್ಟೀರಿಯಾದ(Bacteria) ಕೆಲವು ಹಾನಿಕಾರಕ ತಳಿಗಳ ವಿರುದ್ಧ ಹೋರಾಡುತ್ತದೆ. ದಿನಕ್ಕೆ ಎರಡು ಬಾರಿ ಅಲ್ಸರ್(Ulcer) ಆದಾ ಜಾಗಕ್ಕೆ ತೆಂಗಿನ ಎಣ್ಣೆಯನ್ನ(Coconut Oil) ಹಚ್ಚುವುದರಿಂದ ನೋವು ಬೇಗನೆ ಕಡಿಮೆಯಾಗುತ್ತದೆ(Decreases).