ಮೈಸೂರು: ಕಪಿಲಾ ನದಿ ಸಾಗುವ ನಂಜನಗೂಡಿನ ಹೆಜ್ಜಿಗೆ ಸೇತುವೆ ಬಳಿ ಸ್ನಾನಕ್ಕೆಂದು ನೀರಿಗಿಳಿದ ಮೂವರು ಅಯ್ಯಪ್ಪ ಮಾಲಾಧಾರಿಗಳು ತುಮಕೂರು ಮೂಲದವರಾಗಿದ್ದು, ಒಟ್ಟು ಐವರು ಸ್ನಾನ ಮಾಡಲು ಕಪಿಲಾ ನದಿಗೆ ಇಳಿದಿದ್ದರು. ಈ ವೇಳೆ ಮೂವರು ಅಯ್ಯಪ್ಪ ಮಾಲಾಧಾರಿಗಳು ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ.
ಅಯ್ಯಪ್ಪ ಭಕ್ತರ ಸಾವಿನಿಂದ ಮೈಸೂರು ಜಿಲ್ಲೆ ನಂಜನಗೂಡಿನ ಜನ ದಿಗ್ಭ್ರಮೆಗೆ ಒಳಗಾಗಿದ್ದಾರೆ.ನಂಜನಗೂಡಿನ ಹೆಜ್ಜಿಗೆ ಸೇತುವೆ ಬಳಿ ಈ ಘಟನೆ ನಡೆದಿದೆ. ಮೃತಪಟ್ಟ ಮೂವರು ತುಮಕೂರು ಮೂಲದವರು ಎನ್ನಲಾಗಿದೆ. ಐವರು ಸ್ನಾನ ಮಾಡಲು ಕಪಿಲಾ ನದಿಗೆ ಇಳಿದಿದ್ದರು. ಈ ವೇಳೆ ಮೂವರು ಅಯ್ಯಪ್ಪ ಮಾಲಾಧಾರಿಗಳು ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ.ಘಟನೆ ನಡೆದ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿದ್ದು ಕೊಚ್ಚಿ ಹೋದವರಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಸ್ನಾನ ಮಾಡಲು ಇಳಿದ ಕೇವಲ 10 ನಿಮಿಷದಲ್ಲಿ ಎಲ್ಲವೂ ನಡೆದುಹೋಗಿದೆ. ನದಿಗೆ ಇಳಿದಿದ್ದ ಐವರ ಪೈಕಿ ಮೂವರು ಸಾವನಪ್ಪಿದ್ದು , ಕಣ್ಮುಂದೆಯೇ ಸಾವನಪ್ಪಿದ್ದ ಸ್ನೇಹಿತರನ್ನ ನೋಡಿ ಉಳಿದಿಬ್ಬರು ಶಾಕ್ ಗೆ ಒಳಗಾಗಿದ್ದಾರೆ. ಮೃತ ಕುಟುಂಬಕ್ಕೆ ವಿಷಯ ಮುಟ್ಟಿಸಲಾಗಿದ್ದು , ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.