ಪ್ರತಿಷ್ಠಿತ ಮೈಸೂರು(Mysore) ವಿಶ್ವವಿದ್ಯಾನಿಲಯದ(University) 104ನೇ ವಾರ್ಷಿಕ(Annual) ಘಟಿಕೋತ್ಸವದ(Convocation) ಅಂಗವಾಗಿ ಮಾಜಿ ಮುಖ್ಯಮಂತ್ರಿ ಪದ್ಮವಿಭೂಷಣ ಎಸ್.ಎಂ. ಕೃಷ್ಣ(SM Krishna), ನಾಡೋಜ ಪ್ರೊ.ಡಾ ಭಾಷ್ಯ ಸ್ವಾಮೀಜಿ ಹಾಗೂ ಹಿರಿಯ ರಾಜಕೀಯ ಮುತ್ಸದ್ದಿ ಹಾಗೂ ಶಿಕ್ಷಣ ತಜ್ಞ ಎಂ.ಆರ್. ಸೀತಾರಾಮ್(MR Seetharam) ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಗುತ್ತಿದೆ.

ಘಟಿಕೋತ್ಸವ ಸಮಾರಂಭ ಮಾರ್ಚ್ 3ರಂದು ನಡೆಯಲಿದ್ದು, ಮೈಸೂರು ವಿವಿ ಕ್ರಾಫರ್ಡ್ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರ ಅಧ್ಯಕ್ಷತೆಯಲ್ಲಿ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಗುವುದು. ಈ ಬಾರಿಯ ಘಟಿಕೋತ್ಸವದಲ್ಲಿ 32249 ಅಭ್ಯರ್ಥಿಗಳಿಗೆ ವಿವಿಧ ಪದವಿಗಳು ನೀಡಲಾಗುತ್ತಿದ್ದು, ವಿವಿಧ ವಿಷಯಗಳಲ್ಲಿ 100 ಅಭ್ಯರ್ಥಿಗಳಿಗೆ PhD ಪದವಿ ಸೇರಿದಂತೆ 436 ಪದಕಗಳು ಮತ್ತು 266 ಬಹುಮಾನಗಳು 252 ಅಭ್ಯರ್ಥಿಗಳಿಗೆ ಪ್ರದಾನ ಮಾಡಲಾಗುತ್ತಿದೆ. 6144 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿಗಳು ಪ್ರದಾನ ಮಾಡಲಿದ್ದು, 26009 ಅಭ್ಯರ್ಥಿಗಳಿಗೆ ಸ್ನಾತಕ ಪದವಿಗಳು ನೀಡಲಾಗುವುದು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊಫೆಸರ್ ಎನ್.ಕೆ. ಲೋಕನಾಥ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
#Mysore #UoM #University #Convovation #UniversityofMysore