ಕಸ್ಟಡಿ ಚಿತ್ರಹಿಂಸೆ ಮತ್ತು ಇತರ ಪೊಲೀಸ್ ದೌರ್ಜನ್ಯಗಳು ಸಮಾಜದಲ್ಲಿ ಇನ್ನೂ ಚಾಲ್ತಿಯಲ್ಲಿರುವ ಸಮಸ್ಯೆಗಳೆಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (NALSA) ಆಯೋಜಿಸಿದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. “ಪೊಲೀಸ್ ಠಾಣೆಗಳಲ್ಲಿ ಮಾನವ ಹಕ್ಕುಗಳಿಗೆ ಮತ್ತು ದೈಹಿಕ ಭದ್ರತೆಗೆ ಹೆಚ್ಚಿನ ಅಪಾಯವಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ ಅವರು ಮಾನವ ಹಕ್ಕುಗಳ ಮತ್ತು ಇವುಗಳ ಘನತೆ ಪವಿತ್ರವಾದುದು ಎಂದು ಹೇಳಿದ್ದಾರೆ.
ಸಾಂವಿಧಾನಿಕ ಘೋಷಣೆಗಳು ಮತ್ತು ಖಾತರಿಗಳ ಹೊರತಾಗಿಯೂ, ಪೊಲೀಸ್ ಠಾಣೆಗಳಲ್ಲಿ ಪರಿಣಾಮಕಾರಿ ಕಾನೂನು ಕೊರತೆಯಿಂದ ಬಂಧಿತ ವ್ಯಕ್ತಿಗಳಿಗೆ ದೊಡ್ಡ ಹಾನಿಯಾಗಿದೆ ಎಂದು ಸಿಜೆಐ ಹೇಳಿದ್ದಾರೆ.
ಈ ವೇಳೆ ಆರೋಪಿತರು ತೆಗೆದುಕೊಳ್ಳುವ ನಿರ್ಧಾರಗಳು ನಂತರ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ನಿರ್ಧರಿಸುತ್ತದೆ ಮತ್ತು ಇತ್ತೀಚಿನ ವರದಿಗಳ ಪ್ರಕಾರ ಸವಲತ್ತು ಪಡೆದಿರುವವರು ಕೂಡ Third DegreeTreatmentನಿಂದ ಪಾರಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಪೊಲೀಸರು ಮಿತಿಮೀರುವುದನ್ನು ನಿಯಂತ್ರಣದಲ್ಲಿಡಲು ಉಚಿತ ಕಾನೂನು ನೆರವು ಮತ್ತು ಸಾಂವಿಧಾನಿಕ ಸೇವೆಗಳ ಲಭ್ಯತೆಯ ಬಗ್ಗೆ ಮಾಹಿತಿ ಪ್ರಸರಣ ಅಗತ್ಯ ಈ ನಿಟ್ಟಿನಲ್ಲಿ ಪ್ರತಿ ಪೊಲೀಸ್ ಠಾಣೆ/ಕಾರಾಗೃಹದಲ್ಲಿ ಪ್ರದರ್ಶನ ಫಲಕಗಳು ಮತ್ತು ಹೋರ್ಡಿಂಗ್‌ಗಳನ್ನು ಅಳವಡಿಸುವುದು ಒಂದು ಹೆಜ್ಜೆಯಾಗಿದೆ, ರಾಷ್ಟ್ರವ್ಯಾಪಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳನ್ನು ಸಂವೇದನಾಶೀಲರನ್ನಾಗಿಸಲು ನಲ್ಸಾ(NALSA)ಗೆ ಸಿಜೆಐ ರಮಣ ಕರೆ ನೀಡಿದರು.
ಅಗತ್ಯವಿರುವವರಿಗೆ ಉಚಿತ ಕಾನೂನು ನೆರವು ನೀಡುವ ಪರಿಕಲ್ಪನೆಯು ಸ್ವಾತಂತ್ರ್ಯ ಚಳವಳಿ ಕಾಲದ ಬೇರುಗಳನ್ನು ಹೊಂದಿದೆ ಎಂದು ಅವರು ಹೇಳಿದರು ಆ ದಿನಗಳಲ್ಲಿ ಕಾನೂನು ತಜ್ಙರು ಬ್ರಿಟಿಷ್ ಆಡಳಿತಗಾರರ ಕೆಂಗಣ್ಣಿಗೆ ಗುರಿಯಾದ ಸ್ವಾತಂತ್ರ್ಯ ಹೋರಾಟಗಾರರ ಪರ ಸೇವೆಗಳನ್ನು ಸಲ್ಲಿಸಿದರು. ಈ ಸೇವಾ ಮನೋಭಾವವು ಸಂವಿಧಾನದಲ್ಲಿ ಪ್ರತಿಫಲವನ್ನು ಕಂಡುಕೊಂಡಿತು, ಅದೇ ಕಾನೂನು ತಜ್ಙರು ಸಂವಿಧಾನ ರಚನಾ ಸಭೆಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಅವರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಎಲ್ಲರಿಗೂ ಸಮಾನವಾಗಿ ನ್ಯಾಯವನ್ನು ದೊರಕಿಸಿಕೊಡುವ ಕೆಲಸ ಮಾಡುವ ಅಗತ್ಯವನ್ನು ಒತ್ತಿ ಹೇಳುವುದರಿಂದ ನಾವು ಕಾನೂನಿನ ನಿಯಮದಿಂದ ನಿಯಂತ್ರಿಸಲ್ಪಡುವ ಸಮಾಜದಲ್ಲಿ ಉಳಿಯುವುದನ್ನು ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಸಿಜೆಐ ರಮಣ ಹೇಳಿದ್ದಾರೆ.
ನಾವು ಕಾನೂನಿನ ನಿಯಮದಿಂದ ನಿಯಂತ್ರಿಸಲ್ಪಡುವ ಸಮಾಜವಾಗಿ ಉಳಿಯಲು ಬಯಸಿದರೆ, ನಮಗೆ ಹೆಚ್ಚಿನ ಸವಲತ್ತು ಮತ್ತು “Access To Justice” ಯೋಜನೆಯು ಅತ್ಯಗತ್ಯ ಎಂದು ಹೇಳಿದರು. ಮುಂಬರುವ ಎಲ್ಲಾ ಸಮಯಗಳಲ್ಲಿ, ನಮ್ಮ ರಾಷ್ಟ್ರದಲ್ಲಿ ಚಾಲ್ತಿಯಲ್ಲಿರುವ ಸಾಮಾಜಿಕ-ಆರ್ಥಿಕ ಹಕ್ಕುಗಳ ನಿರಾಕರಣೆಗೆ ಎಂದಿಗೂ ಕಾರಣವಾಗಿರಬಾರದು ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಅವರು ಹೇಳಿದರು.
ಭೂತಕಾಲದಲ್ಲಿ ನಿಮ್ಮ ಭವಿಷ್ಯವನ್ನು ನಿರ್ಧರಿಸಲು ಬಿಡಬೇಡಿ ಎಂದು ಹೇಳುತ್ತಾ, “Access To Justice” ಯೋಜನೆಯು ದೇಶಕ್ಕೆ ಒಂದು ಅಂತ್ಯವಿಲ್ಲದ ಗುರಿಯಾಗಿದೆ, ಇದರಿಂದ ಕಾನೂನು ಚಲನಶೀಲತೆಯು ಭವಿಷ್ಯದ ಮೇಲೆ ಸಮಾನತೆಯನ್ನು ವಾಸ್ತವತೆಯ ಆಧಾರದ ಮೇಲೆ ಭವಿಷ್ಯದ ಕನಸನ್ನು ಕಾಣಬಹುದು ಒಂದು ಸಂಸ್ಥೆಯಾಗಿ, ನ್ಯಾಯಾಂಗವು ನಾಗರಿಕರ ನಂಬಿಕೆಯನ್ನು ಪಡೆಯಲು ಬಯಸಿದರೆ ನಾವು ಅವರಿಗಾಗಿ ಅಸ್ತಿತ್ವದಲ್ಲಿದ್ದೇವೆ ಎಂದು ಎಲ್ಲರಲು ಭರವಸೆ ಮೂಡುವಂತೆ ಮಾಡಬೇಕು ದೀರ್ಘಕಾಲದಿಂದ, ದುರ್ಬಲ ಜನಸಂಖ್ಯೆಯು ನ್ಯಾಯ ವ್ಯವಸ್ಥೆಯಿಂದ ದೂರ ಉಳಿದಿದೆ ಎಂದು ಸಿಜೆಐ ಅಭಿಪ್ರಾಯಪಟ್ಟರು.
ಒಂದು ಸಂಸ್ಥೆಯಾಗಿ, ನಮ್ಮ ಮುಂದಿರುವ ಕಠಿಣ ಸವಾಲು ಎಂದರೆ ಮೊದಲು ಈ ಅಡೆತಡೆಗಳನ್ನು ಮುರಿಯುವುದು ಮತ್ತು ಭಾರತದಲ್ಲಿ ನ್ಯಾಯವನ್ನು ಪಡೆಯುವುದು ಕೇವಲ ಮಹತ್ವಾಕಾಂಕ್ಷೆಯ ಗುರಿಯಲ್ಲ ಎಂದು ಸ್ಪಷ್ಟಪಡಿಸುವುದು ಇದನ್ನು ಕಾರ್ಯರೂಪಕ್ಕೆ ತರಲು ನಾವು ಸರ್ಕಾರದ ವಿವಿಧ ವಿಭಾಗಗಳೊಂದಿಗೆ ಕೈಜೋಡಿಸಿ ಕೆಲಸ ಮಾಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.