ಪ್ರಧಾನಿ ನರೇಂದ್ರ ಮೋದಿ (Pm narendra modi) ಹತ್ಯೆಗೆ ಸಂಚು ರೂಪಿಸಲಾಗಿದ್ಯಾ ಎಂಬ ಆತಂಕಕಾರಿ ವಿಚಾರ ಕೆಲ ಕಾಲ ಗೊಂದಲ ಸೃಷ್ಟಿಸಿತ್ತು. ಹೀಗೆ ಅನಾಮಿಕ ವ್ಯಕ್ತಿಯೊಬ್ಬರು ಮುಂಬೈ ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ (Mumbai police control room) ಮಾಡಿ ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೆ ಸಂಚು ರೂಪಿಸಲಾಗುತ್ತಿದೆ ಎಂದು ಹೇಳಿದ್ದ ಕಾರಣ ಆತಂಕ ಹಾಗೂ ಗೊಂದಲ ಮನೆ ಮಾಡಿತ್ತು.

ಈ ರೀತಿ ಕರೆ ಬಂದ ತಕ್ಷಣ ಸಹಜವಾಗಿಯೇ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಈ ಫೋನ್ ಕಾಲ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಕರೆ ಮಾಡಿದವರಿಗಾಗಿ ಹುಡುಕಾಟ ಈಗಾಗಲೇ ಆರಂಭಿಸಿದ್ದಾರೆ.
ಈ ರೀತಿಯ ಪ್ರಕರಣಗಳು ಇತ್ತೀಚೆಗೆ ಹೆಚಾಗಿದ್ದು, ಈ ಘಟನೆಗೂ ಮುನ್ನ ಮುಂಬೈನ ಟ್ರಾಫಿಕ್ ಕಂಟ್ರೋಲ್ ರೂಂ ಗೆ ಇದೇ ರೀತಿಯ ಕರೆ ಬಂದಿತ್ತು ಮತ್ತು ಸಲ್ಮಾನ್ ಖಾನ್‌ಗೆ (Salman khan) ಜೀವ ಬೆದರಿಕೆ ಹಾಕಲಾಗಿತ್ತು.









