
ರಾಯಚೂರು; ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ( ಸಿಎಲ್‌ಪಿ ) ಯಲ್ಲಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಹಾಗೂ ಸಚಿವ ಎನ್.ಎಸ್ ಬೋಸರಾಜು ನಡುವೆ ಮಾತಿನ ಚಕಮಕಿ ನಡೆದು, ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು ಎನ್ನಲಾಗಿತ್ತು. ಗಲಾಟೆ ಬಗ್ಗೆ ಮಾಧ್ಯಮಗಳಲ್ಲಿ ದೊಡ್ಡ ಚರ್ಚೆ ನಡೆದ ಬಳಿ ಇಂದು ರಾಯಚೂರಿನಲ್ಲಿ ಸಚಿವ ಬೋಸರಾಜು ಪ್ರತಿಕ್ರಿಯೆ ನೀಡಿದ್ದಾರೆ. ರಾಯಚೂರಿನ ಮಾನ್ವಿಯಲ್ಲಿ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ಏನು ಗಲಾಟೆಯಾಗಿಲ್ಲ, ಎಲ್ಲಾ ಒಟ್ಟಿಗೆ ಮಾತಾಡ್ತಿವಿ, ಏನೂ ಆಗಿಲ್ಲ ಎಂದು ತೇಪೆ ಹಚ್ಚಿದ್ದಾರೆ.

ಶಾಸಕಾಂಗ ಪಕ್ಷದ ಸಭೆಯಲ್ಲಿ ನಡೆದಿದ್ದನ್ನು ಹೊರಗಡೆ ಮಾಧ್ಯಮದವರೇ ದೊಡ್ಡ ಸುದ್ದಿ ಮಾಡಿದ್ದು, ಸುಮ್ನೆ ಹೊರಗೆ ಬಂದು ಮಾತನಾಡಿದ್ರೆ..! ಒಳಗಿರುವುದು ನಿಮಗೆ ಹೇಗೆ ಗೊತ್ತಾಯ್ತು..? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಒಳ್ಳೆಯರು ಯಾರು ಹೇಳಿಲ್ಲ , ಕಳ್ಳರು ಯಾರೋ ಹೇಳಿರಬೇಕು ನಿಮಗೆ.. ಎನ್ನುವ ಮೂಲಕ ಗಲಾಟೆ ನಡೆದ ವಿಚಾರ ಮಾಧ್ಯಮಗಳಿಗೆ ಗೊತ್ತಾಗಿರುವ ಬಗ್ಗೆ ಕಿಡಿಕಾರಿದ್ದಾರೆ. ಆ ರೀತಿಯ ಘಟನೆ ಯಾವುದು ನಡೆದಿಲ್ಲ ಅಂತ ಮುಖ್ಯಮಂತ್ರಿಗಳೇ ಸ್ಪಷ್ಟನೆ ಕೊಟ್ಟಿದ್ದಾರೆ.. ಮಾಧ್ಯಮದವರಿಗೆ ಈ ವಿಚಾರ ಯಾರು ಹೇಳಿದ್ದಾರೋ ಅವರೇ ಕಳ್ಳರು ಎಂದು ಸಿಡಿಮಿಡಿಗೊಂಡಿದ್ದಾರೆ.

ಎಲ್ಲಾ ಶಾಸಕರು ಹಾಗೂ ಮಂತ್ರಿಗಳ ಬಗ್ಗೆ ಸಾಮಾನ್ಯವಾಗಿ ಚರ್ಚೆ ನಡೆಯಿತು.. ಸುಮ್ನೆ ಯಾರೋ ಕಳ್ಳತನ ಮಾಡುವವರು, ಕಳ್ಳತನದಿಂದ ಹೇಳುವವರು ಇರ್ತಾರೆ.. ಅದೇನೇ ಇರಲಿ ಸಭೆ ಬಳಿಕ ವಕ್ತಾರರು, ಸಿಎಂ, ಡಿಸಿಎಂ ಮಾತನಾಡುತ್ತಾರೆ.. ಟ್ರಾನ್ಸಫರ್ ವಿಚಾರದಲ್ಲಿ ನಾವೇನು ತಲೆಕೆಡಿಕೊಂಡಿಲ್ಲ.. ಯಾವುದೇ ವರ್ಗಾವಣೆ ಇಲ್ಲಾ, ವರ್ಗಾವಣೆಯಿಲ್ಲ ಎಂದಿದ್ದಾರೆ. ಸೇಡಂನಲ್ಲಿ ಕಾರ್ಯಕ್ರಮಗಳು ಮೊದಲೆ ಫಿಕ್ಸ್ ಆಗಿದ್ದಕ್ಕೆ ಇಂದು ಮಾನ್ವಿಗೆ ಬಂದಿಲ್ಲ.. ಮಾನ್ವಿ ಆರೋಗ್ಯ ಮೇಳ ಕಾರ್ಯಕ್ರಮಕ್ಕೆ ಸಚಿವ ಶರಣಪ್ರಕಾಶ ಪಾಟೀಲ್ ಗೈರಾಗಿರುವ ಬಗ್ಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ..
