ಹಿಂದಿ ಹೇರಿಕೆಯ ವಿಷಯ ಮತ್ತೊಮ್ಮೆ ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ಸಂಪುಟದ ಸಚಿವ ಸಂಜಯ್ ನಿಶಾದ್ ಅವರು “ಹಿಂದಿಯನ್ನು ಪ್ರೀತಿಸದ ಜನರನ್ನು ವಿದೇಶಿಯರು ಅಥವಾ ವಿದೇಶಿ ಶಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಭಾವಿಸಲಾಗುವುದು. ಈ ದೇಶವನ್ನು ಬಿಟ್ಟು ಬೇರೆಡೆಗೆ ಹೋಗಬೇಕು” ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ.
ರಾಷ್ಟ್ರ ಭಾಷೆ ಕುರಿರು ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ಕಿಚ್ಚ ಸುದೀಪ್ ನಡುವಿನ ಟ್ವಿಟ್ಟರ್ ವಾಗ್ವಾದದ ಬಳಿಕ ಮತ್ತೊಮ್ಮೆ ಪ್ರಾಮುಖ್ಯತೆ ಪಡೆದ ಭಾಷಾ ಚರ್ಚೆಯ ಕುರಿತು ಮಾಧ್ಯಮದ ಪ್ರಶ್ನೆಗೆ ಸಂಜಯ್ ಪ್ರತಿಕ್ರಿಯೆ ನೀಡಿದ್ದಾರೆ.
“ಭಾರತದಲ್ಲಿ ವಾಸಿಸಲು ಬಯಸುವವರು ಹಿಂದಿಯನ್ನು ಪ್ರೀತಿಸಬೇಕು. ನೀವು ಹಿಂದಿಯನ್ನು ಪ್ರೀತಿಸದಿದ್ದರೆ, ನೀವು ವಿದೇಶಿ ಅಥವಾ ವಿದೇಶಿ ಶಕ್ತಿಗಳೊಂದಿಗೆ ಸಂಬಂಧ ಹೊಂದಿದ್ದೀರಿ ಎಂದು ಭಾವಿಸಲಾಗುತ್ತದೆ. ನಾವು ಪ್ರಾದೇಶಿಕ ಭಾಷೆಗಳನ್ನು ಗೌರವಿಸುತ್ತೇವೆ, ಆದರೆ ಈ ದೇಶವು ಒಂದು, ಮತ್ತು ಭಾರತದ ಸಂವಿಧಾನವು ಭಾರತವು ‘ಹಿಂದೂಸ್ತಾನ್’ ಎಂದು ಹೇಳುತ್ತದೆ. ಅಂದರೆ ಹಿಂದಿ ಮಾತನಾಡುವವರಿಗೆ ಒಂದು ಸ್ಥಳವಾಗಿದೆ. ಹಿಂದುಸ್ತಾನ ಹಿಂದಿ ಮಾತನಾಡದವರಿಗೆ ಇರುವ ಸ್ಥಳವಲ್ಲ. ಅವರು ಈ ದೇಶವನ್ನು ಬಿಟ್ಟು ಬೇರೆಡೆಗೆ ಹೋಗಬೇಕು” ಎಂದು ಸಂಜಯ್ ಹೇಳಿರುವುದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ಹಿಂದಿಯು ಭಾರತದ ರಾಷ್ಟ್ರೀಯ ಭಾಷೆಯಲ್ಲ, ಆದರೆ ಸರ್ಕಾರಗಳು ಬಳಸಬಹುದಾದ ಅಧಿಕೃತ ಭಾಷೆ ಎಂಬುದು ಇತ್ಯರ್ಥವಾದ ವಿಷಯವಾಗಿದ್ದರೂ, ರಾಜಕಾರಣಿಗಳು ಇತರ ಭಾರತೀಯ ಭಾಷೆಗಳಿಗಿಂತ ಭಾಷೆಯ ಪ್ರಾಮುಖ್ಯತೆಗಾಗಿ ಆಗಾಗ್ಗೆ ವಾದಿಸುತ್ತಾರೆ. ಈ ತಿಂಗಳ ಆರಂಭದಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿವಿಧ ಭಾಷೆಗಳನ್ನು ಮಾತನಾಡುವ ನಾಗರಿಕರು ಪರಸ್ಪರ ಸಂವಹನ ನಡೆಸಲು ಹಿಂದಿಯನ್ನು ಬಲಸಬೇಕು ಎಂದು ಕರೆ ನೀಡಿದ್ದರು.
ಅವರ ಹೇಳಿಕೆಗೆ ಹಲವು ವಿರೋಧ ಪಕ್ಷದ ನಾಯಕರಿಂದ ಟೀಕೆ ವ್ಯಕ್ತವಾಗಿದೆ. ಹಿಂದಿ ಹೇರಿಕೆಯು ಭಾರತದ ‘ಸಮಗ್ರತೆ ಮತ್ತು ಬಹುತ್ವ’ಕ್ಕೆ ವಿರುದ್ಧವಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದರು. ಅವರ ಪಕ್ಷ ದ್ರಾವಿಡ ಮುನ್ನೇತ್ರ ಕಳಗಂ ಹಿಂದೆ ಹಿಂದಿ ವಿರೋಧಿ ಚಳವಳಿಗಳಲ್ಲಿ ಮುಂಚೂಣಿಯಲ್ಲಿತ್ತು.










