2025-26ನೇ ಸಾಲಿನ ಬಜೆಟ್‌ನಲ್ಲಿ ಎಲ್ಲ ಸಮುದಾಯಗಳಿಗೆ ಪೂರಕವಾದ ಬಜೆಟ್ ನೀಡಿದ್ದೇವೆ. ಹಿಂದುಳಿದವರು, ದಲಿತರಿಗೆ ಕೊಟ್ಟಿದ್ದೇವೆ. ಮುಸ್ಲಿಂ ಬಜೆಟ್ ಎನ್ನುವವರ ಕಣ್ಣು ಹಳದಿಯಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ (MB Patil) ಹೇಳಿದರು.

ವಿಜಯಪುರ: ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿಮಗೆ ಮುಸ್ಲಿಮರಿಗೆ ನೀಡಿದ್ದು ಮಾತ್ರ ಯಾಕೆ ಕಾಣುತ್ತದೆ? ಬಿಜೆಪಿಯವರು ನಾಲ್ಕು ವರ್ಷ ಏನು ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಪ್ರಿಯಾಂಕ್ ಖರ್ಗೆ (Priyank Kharge) ಸರಿಯಾಗಿ ಹೇಳಿದ್ದಾರೆ ಎಂದರು.

ಹಲಾಲ್ ಬಜೆಟ್ ಎಂಬ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರೇ ಹಲಾಲ್ ತಿನ್ನುತ್ತಿರುತ್ತಾರೆ ಎಂದು ಟಾಂಗ್ ಕೊಟ್ಟರು.