ನವದೆಹಲಿ (New Delhi): RCB ಯ ಕೋಟ್ಯಾಂತರ ಅಭಿಮಾನಿಗಳ ಬಹುವರ್ಷಗಳ ಕಪ್ ದಾಹವನ್ನು ವನಿತೆಯರು ನೀಗಿಸಿದಾರೆ.
ಮಹಿಳೆಯರ ಪ್ರೀಮಿಯರ್ ಲೀಗ್ 2024 (WPL) ನಲ್ಲಿ RCB ಚೊಚ್ಚಲ ಟ್ರೋಫಿ ಗೆದ್ದಿದೆ. ಚಾಂಪಿಯನ್ ಟೋಫ್ರಿ ಎತ್ತಿ ಹಿಡಿದಿರುವ ಸ್ಮೃತಿ ಮಂದಾನ (Smriti Mandhana) ಅವರು RCB ಕಟ್ಟಾ ಅಭಿಮಾನಿಗಳೇ ‘ಈ ಸಲ ಕಪ್ ನಮ್ದೆ ಅಲ್ಲ, ಈ ಸಲ ಕಪ್ ನಮ್ದುʼ (E Sala Cup Namdu) ಎಂದು ಹೇಳುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಜೊತೆಗೆ ಅವರ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ.

WPL ಕಪ್ ಗೆದ್ದಿರುವ RCB ವನಿತೆಯರ ತಂಡಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು, ಕೋಟ್ಯಾಂತರ ಅಭಿಮಾನಿಗಳ ಕನಸು ನನಸು ಮಾಡಿದ RCB ತಂಡದ ಅದೃಷ್ಟ ಲಕ್ಷ್ಮೀಯರು ಎಂದು ಕೊಂಡಾಡುತ್ತಿದ್ದಾರೆ. ಒಟ್ಟಿನಲ್ಲಿ RCB ಅಭಿಮಾನಿಗಳು ಹಬ್ಬ ಆಚರಿಸುತ್ತಿದ್ದಾರೆ.

ಈ ಪಂದ್ಯದಲ್ಲಿ ಸ್ಮೃತಿ ಮಂದಾನ ಅವರು 31 ರನ್ ಗಳನ್ನು ಬಾರಿಸುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿದ್ದರು. ನಂತರ ಸೋಫಿ ಡಿವೈನ್ 32 ರನ್ ಬಾರಿಸಿ ಔಟಾದರು. ಈ ವೇಳೆ ಬಂದ ಎಲ್ಲಿಸ್ ಪೇರಿ ಮತ್ತು ರಿಚ್ಚ ಘೋಷ್ ಅತ್ಯುತ್ತಮ ಬ್ಯಾಟಿಂಗ್ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಂತಿಮವಾಗಿ ಆರ್ ಸಿಬಿ ಮೂರು ಎಸೆತಗಳು ಬಾಕಿ ಇರುವಂತೆ 115 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
#wpl #wpl2024 #cricket #rcb #rcbwomensteam #SmritiMandhana #esalacupnamdu