ಬೆಂಗಳೂರು : ಕಾಂಗ್ರೆಸ್ ಪಕ್ಷವೇ ಈ ಬಾರಿ ಅಧಿಕಾರದ ಗದ್ದುಗೆ ಏರಲಿದೆ ಎಂದು ಕಾಂಗ್ರೆಸ್ ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಚುನಾವಣೆ ಫಲಿತಾಂಶದ ಬಗ್ಗೆ ಜಾಸ್ತಿ ಚರ್ಚೆ ಮಾಡುವ ಅಗತ್ಯವೇ ಇಲ್ಲ. ಈ ಬಾರಿ ಕಾಂಗ್ರೆಸ್ ಸರ್ಕಾರ ಪಕ್ಕಾ ಎಂದಿದ್ದಾರೆ.
ಈ ಸಲ ಕಪ್ ನಮ್ಮದೇ ಎಂದಿದ್ದ ಸಚಿವ ಆರ್. ಅಶೋಕ್ ಹೇಳಿಕಗೂ ಇದೇ ವೇಳೆ ತಿರುಗೇಟು ನೀಡಿದ ಅವರು, ಅಧರ್ಮದ ಸರ್ಕಾರ ರಚನೆ ಮಾಡೋದ್ರಲ್ಲಿ ಬಿಜೆಪಿಗರು ನಿಸ್ಸೀಮರು. ಆದರೆ ಈ ಬಾರಿ ನಮಗೆ ಆಪರೇಷನ್ ಭಯವಿಲ್ಲ. ನಮ್ಮ ಬಳಿ ಖರ್ಗೆ, ಸುರ್ಜೇವಾಲಾ ಇದ್ದಾರೆ ಎಂದು ಹೇಳಿದರು.
ಬಿಜೆಪಿ ಹಾಗೂ ಜೆಡಿಎಸ್ ತಾವೇ ಬಹುಮತದಲ್ಲಿ ಗೆಲ್ಲುತ್ತೇವೆ ಎಂದು ಹೇಳ್ತಿದ್ದಾರೆ. ಆದರೆ ಜನರು ಈ ಬಾರಿ ಉತ್ತಮ ಸರ್ಕಾರಕ್ಕೆ ಬೆಂಬಲ ನೀಡಲಿದ್ದಾರೆ. ಬಿಜೆಪಿ ವಿರುದ್ಧ ಜನರು ಸಿಡಿದೇಳುತ್ತಾರೆ ಎಂದು ಹೇಳಿದರು.






