ಜನವರಿ 30, 2026 ರಂದು ಅಮೆರಿಕದ ನ್ಯಾಯಾಂಗ ಇಲಾಖೆಯು ಬಿಡುಗಡೆ ಮಾಡಿದ ಸುಮಾರು 30 ಲಕ್ಷ ಪುಟಗಳ ಎಪ್ಸ್ಟೀನ್ ಫೈಲ್ ನಲ್ಲಿ ಬಿಲ್ ಗೇಟ್ಸ್ ಕುರಿತು ಕೆಲವು ಗಂಭೀರ ಆರೋಪಗಳು ಕೇಳಿಬರುತ್ತಿವೆ. 2,000 ವಿಡಿಯೋಗಳು ಮತ್ತು 1.8 ಲಕ್ಷ ಚಿತ್ರಗಳನ್ನು ಒಳಗೊಂಡ ದಾಖಲೆಗಳನ್ನು ಬಿಡುಗಡೆ ಮಾಡಿದೆ.
2017ರ ಸುಮಾರಿಗೆ ಬಿಲ್ ಗೇಟ್ಸ್ ಮತ್ತು ಎಪ್ಸ್ಟೀನ್ “Strain pandemic simulation” ( ಕೊವಿಡ್ ನಂತಹ ಸಾಕ್ರಾಂಮಿಕ ರೋಗ) ಬಗ್ಗೆ ಚರ್ಚಿಸಿದ್ದರು ಎಂಬ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸಂಶೋಧನಾ ಸಂಸ್ಥೆಯಾದ SOMO ವರದಿಯ ಪ್ರಕಾರ, ಬಿಲ್ ಗೆಟ್ ನಿಂದ ಔಷಧ ಕಂಪನಿಗಳು ಕೋವಿಡ್ ಸಮಯದಲ್ಲಿ ಭಾರಿ ಲಾಭ ಮಾಡಿಕೊಂಡಿವೆ ಎನ್ನಲಾಗುತ್ತಿದೆ. ಬಿಲ್ ಗೇಟ್ಸ್ ಮತ್ತು ಎಪ್ಸ್ಟೀನ್ ನಡುವೆ ಜಾಗತಿಕ ಆರೋಗ್ಯ ಮತ್ತು ಲಸಿಕೆ ಕುರಿತು ಚರ್ಚೆಗಳು ನಡೆದಿದ್ದರು.

2021 ಮತ್ತು 2022 ರ ಅವಧಿಯಲ್ಲಿ ಕೊವಿಡ್ ಲಸಿಕೆಯಲ್ಲಿ ಒಂದಾದ ಫೈಜರ್ (Pfizer), ಬಯೋಎನ್‌ಟೆಕ್ (BioNTech), ಮಾಡರ್ನಾ (Moderna) ಮತ್ತು ಸಿನೋವಾಕ್ (Sinovac) ಕಂಪನಿಗಳು ಒಟ್ಟಾಗಿ ಕೊವಿಡ್ ಲಸಿಕೆಗಳಿಂದ ಸುಮಾರು $90 ಬಿಲಿಯನ್ ನಿವ್ವಳ ಲಾಭ ಗಳಿಸಿವೆ ಎನ್ನಲಾಗುತ್ತಿದೆ.

ಯಾರಿಗೆ ಎಷ್ಟು ಲಾಭ?:
ಫೈಜರ್: ಸುಮಾರು $35 ಬಿಲಿಯನ್.
ಬಯೋಎನ್‌ಟೆಕ್ ಮತ್ತು ಮಾಡರ್ನಾ: ತಲಾ ಅಂದಾಜು $20 ಬಿಲಿಯನ್.
ಸಿನೋವಾಕ್: ಸುಮಾರು $15 ಬಿಲಿಯನ್.
ಈ ಕಂಪನಿಗಳು ಶೇ. 49 ರಿಂದ 77 ರಷ್ಟು ಲಾಭದ ಪ್ರಮಾಣವನ್ನು ಹೊಂದಿದೆ ಎನ್ನಲಾಗುತ್ತಿದೆ. ಇದು ಸಾಮಾನ್ಯ ಫಾರ್ಮಾ ವಲಯದ ಶೇ. 15-35 ರ ಸರಾಸರಿಗಿಂತ ಬಹಳ ಹೆಚ್ಚಾಗಿದೆ. ಈ ಆರೋಪಗಳನ್ನು ಬಿಲ್ ಗೇಟ್ಸ್ ಅವರ ವಕೀಲರಿ ಇದು “ಸಂಪೂರ್ಣ ಸುಳ್ಳು” ಎಂದು ತಳ್ಳಿಹಾಕಿದ್ದಾರೆ.






