ಅದೃಷ್ಟ ಅನ್ನೋದು ಯಾರಿಗೆ ಯಾವಾಗ ಹೇಗೆ ಬರುತ್ತೆ ಅಂತ ಹೇಳೋಕೆ ಸಾಧ್ಯವಿಲ್ಲ ಒಮ್ಮೊಮ್ಮೆ ಕಷ್ಟದ ಕಾರಣಗಳಿಂದ ಬೇರೆ ಊರಿಗೆ ಹೋಗಿ ಬೇರೆ ದೇಶಗಳಿಗೆ ಹೋಗಿ ಬದುಕುವವರ ಸಂಖ್ಯೆ ಹೆಚ್ಚಿದೆ ಅದರಲ್ಲೂ ದಕ್ಷಿಣ ಭಾರತೀಯರು ದುಬೈ ಸೌದಿ ಅರೇಬಿಯಾ ಕೆನಡಾ ಮುಂತಾದ ದೇಶಗಳಿಗೆ ಹೋಗಿ ತಮ್ಮ ಬದುಕುಗಳನ್ನ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಾರೆ. ಹೀಗಿರುವವರಿಗೆ ಒಮ್ಮೆಲೇ ಅದೃಷ್ಟ ಹುಡುಕಿಕೊಂಡು ಬಂದರೆ ಹೇಗಿರುತ್ತೆ ಅಲ್ವಾ.?
ಹೌದು ಇಂತದ್ದೇ ಒಂದು ಅನುಭವ ನರ್ಸ್ ಒಬ್ಬರಿಗೆ ಆಗಿದೆ ಅಬುಧಾಬಿಯಲ್ಲಿ ಕೆಲಸ ಮಾಡುತ್ತಿರುವ ಕೇರಳದ ನರ್ಸ್ ಅಬುಧಾಬಿಯ ಬಿಗ್ ಟಿಕೆಟ್ ಡ್ರಾದಲ್ಲಿ 20 ಮಿಲಿಯನ್ ಯುಎಇ ದಿರ್ಹಮ್ ಅಂದ್ರೆ ಸುಮಾರು 45 ಕೋಟಿ ರೂಪಾಯಿ ಗೆದ್ದಿದ್ದಾರೆ.
ಅಬುದಾಬಿಯಲ್ಲಿ ವಿವಿಧ ರೀತಿಯ ಲಾಟರಿಗಳನ್ನ ಮಾರಾಟ ಮಾಡಲಾಗುತ್ತೆ ಇದೀಗ ಶನಿವಾರ ನಡೆದ ಬಿಗ್ ಟಿಕೆಟ್ ಡ್ರಾನಲ್ಲಿ ಲವ್ಲಿ ಮೋಲ್ ಅಚ್ಚಮ್ಮ 45 ಕೋಟಿ ರೂ. ಗೆದ್ದಿದ್ದಾರೆ. ಲವ್ಲಿ ಮೋಲ್ ಅವರು ತನ್ನ ಕುಟುಂಬದೊಂದಿಗೆ ಕಳೆದ 21 ವರ್ಷಗಳಿಂದ ಅಬುಧಾಬಿಯಲ್ಲಿ ನೆಲೆಸಿದ್ದಾರೆ. ಈ ಲಾಟರಿ ಮೂಲಕವಾಗಿ ಅವರ ಅದೃಷ್ಟ ಖುಲಾಯಿಸಿದೆ ಏಕಾಏಕಿ ಬೃಹತ್ ಜಾಕ್ ಪಾಟ್ ನಿಂದ ಅವರ ಬದುಕು ಬದಲಾಗಲಿದೆ ಅಂತಾನೆ ಹೇಳಬಹುದು.
ಇನ್ನು ಈ ಬಗ್ಗೆ ಕೆಲ ಮಾಧ್ಯಮಗಳೊಂದಿಗೆ ಸಂತಸವನ್ನ ಹಂಚಿಕೊಂಡಿರುವ ಲವ್ಲಿ ಮೋಲ್ ಅಚ್ಚಮ್ಮ, ನನ್ನ ಪತಿ ಪ್ರತಿ ತಿಂಗಳು ಅಬುಧಾಬಿ ಬಿಗ್ ಟಿಕೆಟ್ ಲಾಟರಿ ತೆಗೆದುಕೊಳ್ಳುತ್ತಿದ್ದರು. ಬಹುಮಾನದ ಮೊತ್ತದ ಒಂದು ಭಾಗವನ್ನು ತನ್ನ ಕುಟುಂಬದೊಂದಿಗೆ ಹಂಚಿಕೊಳ್ಳುತ್ತೇನೆ. ಬಾಕಿ ಹಣವನ್ನು ತನ್ನ ಮಕ್ಕಳ ಶಿಕ್ಷಣಕ್ಕೆ ವ್ಯಯಿಸಲಾಗುತ್ತೆ ಅಂತ ತಿಳಿಸಿದ್ದಾರೆ
ಒಟ್ಟಾರಿಯಾಗಿ ಇದೀಗ ಅಚ್ಚಮ್ಮ ಅವರ ನಿರ್ಧಾರಕ್ಕೆ ವ್ಯಾಪಕವಾದ ಮೆಚ್ಚುಗೆ ವ್ಯಕ್ತವಾಗ್ತಾ ಇದ್ದು ಅವರ ಜೀವನ ಇನ್ನಷ್ಟು ಸುಖಕರವಾಗಿ ಇರ್ಲಿ ಅಂತ ನೆಟ್ಟಿಗರು ಆಶಯವನ್ನು ವ್ಯಕ್ತಪಡಿಸುತ್ತಿದ್ದಾರೆ