ಮಕ್ಕಳು ಸ್ಮಾರ್ಟ್ಫೋನ್ಗಳಿಗೆ ಒಗ್ಗಿಕೊಳ್ಳುವುದರಿಂದ ಸಮಸ್ಯೆ ಹೆಚ್ಚಾಗುತ್ತದೆ ಪೋಷಕರು ಮೊದಲು ಮಕ್ಕಳಿಗೆ ತಮಾಷೆಯ ರೀತಿಯಲ್ಲಿ ಫೋನ್ ಗಳನ್ನು ನೀಡುತ್ತಾರೆ ಆದರೆ ಅದರ ನಂತರ, ಸ್ಮಾರ್ಟ್ಫೋನ್ಗಳು ಮಕ್ಕಳ ನೆಚ್ಚಿನ ಆಟಿಕೆಯಾಗುತ್ತದೆ. ಬರು ಬರುತ್ತಾ ಮಕ್ಕಳು ಮೊಬೈಲ್ ಚಟಕ್ಕೆ ದಾಸರಾಗುತ್ತಾರೆ.
ಉತ್ತರ ಪ್ರದೇಶದ ( Uttar Pradesh)ಶಿಕ್ಷಕರೊಬ್ಬರು ಈ ಸಮಸ್ಯೆಯನ್ನು ನಿವಾರಿಸಲು ಒಂದು ಟ್ರಿಕ್ಸ್ ಕಂಡುಹಿಡಿದಿದ್ದಾರೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ಉತ್ತರ ಪ್ರದೇಶದ ಬದೌನ್ ನ ಶಾಲೆಯೊಂದರ ಜಾಗೃತಿ Awareness ಯೋಜನೆಯ ವೀಡಿಯೊ ಈಗ ವೈರಲ್ ಆಗುತ್ತಿದೆ.ಮಕ್ಕಳನ್ನು ಮೊಬೈಲ್ ಫೋನ್ಗಳಿಂದ Children (mobile phones)ದೂರವಿರಿಸಲು ಜಾಗೃತಿ ಯೋಜನೆಯನ್ನು ರೂಪಿಸಲು ಬದೌನ್ನ ಎಚ್ಪಿ ಇಂಟರ್ನ್ಯಾಷನಲ್ ಶಾಲೆಯ ( HP International School )ಶಿಕ್ಷಕರು ಒಗ್ಗೂಡಿದ್ದಾರೆ.
ವೀಡಿಯೊದಲ್ಲಿ, ಶಿಕ್ಷಕಿಯೊಬ್ಬರು ಕರವಸ್ತ್ರ ಮುಚ್ಚಿಕೊಂಡು ಅಳುತ್ತಿರುವುದನ್ನು ಕಾಣಬಹುದು. ಇತರ ಶಿಕ್ಷಕರು ಭಯದಿಂದ ಅವರನ್ನು ಸುತ್ತುವರೆದು, “ಏನಾಯಿತು, ಮೇಡಂ, ಇದು ಹೇಗೆ ಸಂಭವಿಸಿತು?.? ಎಂದು ಕೇಳುತ್ತಾರೆ.ಅದಕ್ಕೆ ಶಿಕ್ಷಕಿ, “ನಾನು ಮೊಬೈಲ್ ಫೋನ್ ಹೆಚ್ಚಾಗಿ ಬಳಸಿದೆ, ಅದಕ್ಕಾಗಿಯೇ ಹೀಗಾಯಿತು ಎಂದು ಹೇಳುತ್ತಾರೆ.
बच्चों से मोबाइल की लत छुड़वानी है तो ये दिखा दें ये वीडियो..!
— Vikash Mohta (@VikashMohta_IND) September 11, 2024
यूपी के बदायूं के HP इंटरनेशनल स्कूल की टीचर्स ने बच्चों को मोबाइल से दूर करने के लिए एक अवेयरनेस प्लान बनाया है। वीडियो में एक टीचर आंखो पर पट्टी बांधकर रोती नज़र आती है। टीचर के पूछने पर कहती है कि ज्यादा मोबाइल… pic.twitter.com/4XrNZXWR2a
ತಮ್ಮ ಶಿಕ್ಷಕರ ಪರಿಸ್ಥಿತಿಯನ್ನು ನೋಡಿ, ಮಕ್ಕಳು ಫೋನ್ ನೋಡಿ ದೂರ ಹೋಗುತ್ತಾರೆ. ಒಬ್ಬ ಶಿಕ್ಷಕನು ಎಲ್ಲಾ ಮಕ್ಕಳಿಗೆ ಫೋನ್ ಗಳನ್ನು ನೀಡಲು ಪ್ರಯತ್ನಿಸುತ್ತಿದ್ದನು. ಆದರೆ ಯಾರೂ ಮುಂದೆ ಬರಲಿಲ್ಲ. ಅನೇಕ ಮಕ್ಕಳು ಮತ್ತೆ ಫೋನ್ ಬಳಸುವುದಿಲ್ಲ ಎಂದು ಅಳುತ್ತಿದ್ದಾರೆ. ಈ ವಿಡಿಯೋ ಇದುವರೆಗೆ 6 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸಾವಿರಾರು ಲೈಕ್ಗಳನ್ನು ಗಳಿಸಿದೆ.