ಹಿರಿಯ ನಟಿ ಲೀಲಾವತಿ ವಿಧಿವಶರಾಗಿದ್ದಾರೆ. ಏಕೈಕ ಪುತ್ರ ವಿನೋದ್ ರಾಜ್ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಭಕ್ತ ಪ್ರಹ್ಲಾದ ಸಿನಿಮಾದ ಮೂಲಕ ಸಿನಿಮಾ ರಂಗ ಪ್ರವೇಶಿಸಿದ್ದ ಲೀಲಾವತಿ ಅವರು ತಮ್ಮ ಮಗನ ಸಿನಿಮಾದಲ್ಲಿ ಕೊನೆಯಾದಗಿ ನಟಿಸಿದ್ದರು.
೨೦೦೯ರಲ್ಲಿ ವಿನೋದ್ ರಾಜ್ ಅವರು ನಟಿಸಿದ್ದ ‘ಯಾರದು’ ಸಿನಿಮಾದಲ್ಲಿ ಲೀಲಾವತಿ ಮೇರಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮತ್ತೊಂದು ವಿಶೇಷ ಅಂದ್ರೆ, ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು ಕೂಡಾ ಲೀಲಾವತಿ ಅವರೇ.