• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, July 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿದೇಶ

ಪಾನಮತ್ತನಾಗಿದ್ದ ಆರ್ಯನ್ ಖಾನ್ ವಿಮಾನ ನಿಲ್ದಾಣದಲ್ಲಿ ಮೂತ್ರ ವಿಸರ್ಜಿಸಿದ್ದು ನಿಜವೇ? ಇಲ್ಲಿದೆ ಆ ಸತ್ಯ

Any Mind by Any Mind
January 5, 2022
in ವಿದೇಶ
0
ಪಾನಮತ್ತನಾಗಿದ್ದ ಆರ್ಯನ್ ಖಾನ್ ವಿಮಾನ ನಿಲ್ದಾಣದಲ್ಲಿ ಮೂತ್ರ ವಿಸರ್ಜಿಸಿದ್ದು ನಿಜವೇ? ಇಲ್ಲಿದೆ ಆ ಸತ್ಯ
Share on WhatsAppShare on FacebookShare on Telegram

ನಿಖರ ದಿನಾಂಕವಿಲ್ಲದ ವೀಡಿಯೊ ಒಂದು ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ಯುವಕನೊಬ್ಬ ವಿಮಾನ ನಿಲ್ದಾಣದಲ್ಲಿ ಮೂತ್ರ ವಿಸರ್ಜಿಸುತ್ತಿರುವುದನ್ನು ಕಾಣಬಹುದು. ಕೆಲವು ತಿಂಗಳ ಹಿಂದೆ ಮಾದಕವಸ್ತು ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಬಂಧನಕ್ಕೊಳಗಾದ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಈ ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಹೇಳಿಕೊಂಡಿವೆ.

ADVERTISEMENT

ಆದರೆ, OpIndia ವೀಡಿಯೊದಿಂದ ಸ್ಟಿಲ್‌ಗಳನ್ನು ತೆಗೆದುಕೊಳ್ಳುವ ಕೆಲವು ರಿವರ್ಸ್ ಇಮೇಜ್ ಸರ್ಚ್ ಮಾಡಿದೆ. ತೆಳ್ಳಗಿನ ಚರ್ಮದ, ದೊಡ್ಡ ಕೂದಲುಳ್ಳ ಯುವ ವ್ಯಕ್ತಿ ಶಾರುಖ್ ಖಾನ್‌ ಮಗನಂತೆ ಕಾಣಬಹುದಾದರೂ, ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಹೇಳಿಕೊಳ್ಳುವುದಕ್ಕಿಂತ ವಾಸ್ತವ ವಿಭಿನ್ನವಾಗಿದೆ.‌

ಈ ಘಟನೆಯು ಡಿಸೆಂಬರ್ 17, 2013 ರಂದು ಸಂಭವಿಸಿದ್ದು, ವಿಮಾನ ನಿಲ್ದಾಣದ ನೆಲದ ಮೇಲೆ ಮೂತ್ರ ವಿಸರ್ಜಿಸಿದ ವ್ಯಕ್ತಿ ಕೆನಡಾದ ನಟ ಬ್ರಾನ್ಸನ್ ಪೆಲೆಟಿಯರ್ ಆಗಿದ್ದು, ಅವರು ಚಲನಚಿತ್ರ ಫ್ರ್ಯಾಂಚೈಸ್ ‘ದಿ ಟ್ವಿಲೈಟ್ ಸಾಗಾ’ದಲ್ಲಿ ಆಕಾರವನ್ನು ಬದಲಾಯಿಸುವ ತೋಳದ ಪಾತ್ರಕ್ಕೆ ಹೆಸರುವಾಸಿಯಾಗಿದ್ದಾರೆ.

https://twitter.com/humlogindia/status/1477925136783265792?s=20

ಲಾಸ್ ಏಂಜಲೀಸ್‌ನ LAX ವಿಮಾನ ನಿಲ್ದಾಣದಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಮುಂದಿನ ವಿಮಾನಕ್ಕಾಗಿ ಕಾಯುವಂತೆ ಪಾನಮತ್ತನಾದ 35 ವರ್ಷದ ನಟನನ್ನು ಕೇಳಿಕೊಂಡಿದ್ದರು. ಆ ವೇಳೆ ಕುಡಿದ ಅಮಲಿನಲ್ಲಿದ್ದ ಪೆಲ್ಲೆಟಿಯರ್ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜಿಸಿದ್ದಾನೆ. ಅವನ ಪಕ್ಕದಲ್ಲಿ ನಿಂತಿದ್ದ ಅಧಿಕಾರಿ ಎಷ್ಟೇ ಮನವಿ ಮಾಡಿದರೂ ಆ ನಟ ಬೆಲೆ ಕೊಟ್ಟಿರುವುದಿಲ್ಲ.

ನಂತರ ಇಬ್ಬರು ಭದ್ರತಾ ಅಧಿಕಾರಿಗಳು ಅವನ ಕಡೆಗೆ ಧಾವಿಸಿ ನಟನನ್ನು ನೆಲಕ್ಕೆ ಹಾಕಿ ಕೈಕೋಳ ಹಾಕುವುದನ್ನು ವಿಡಿಯೋದಲ್ಲಿ ಕಾಣಬಹುದು. ಘಟನಾ ಸ್ಥಳದಲ್ಲಿ ನೆರೆದಿದ್ದ ಜನರು ಈ ದೃಶ್ಯವನ್ನು ನೋಡಿ ಬೆಚ್ಚಿಬಿದ್ದಿದ್ದು, ಯಾರೋ “ಓ ಮೈ ಗಾಡ್!” ಎಂದು ಹೇಳುತ್ತಿರುವುದು ಕೇಳಬಹುದು.

ಓಟ್ಟಾರೆ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುತ್ತಿರುವ ವ್ಯಕ್ತಿ ಎಸ್‌ಆರ್‌ಕೆ ಅವರ ಪುತ್ರ ಆರ್ಯನ್ ಖಾನ್ ಅಲ್ಲ. ಅದು ಕೆನಡಾದ ನಟ ಬ್ರಾನ್ಸನ್ ಪೆಲ್ಲೆಟಿಯರ್ ಎಂಬ ಸತ್ಯ ಗೊತ್ತಾಗಿದೆ.

Tags: ಆರ್ಯನ್ ಖಾನ್ಪಾನಮತಮೂತ್ರ ವಿಸರ್ಜನೆ
Previous Post

ʼವರದʼ ಹಾಡು ಬಿಡುಗಡೆ ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್; ವಿನೋದ್ ಪ್ರಭಾಕರ್ ಅಭಿನಯದ ಚಿತ್ರ ಜನವರಿ 28ಕ್ಕೆ ತೆರೆಗೆ

Next Post

ಶಿವಮೊಗ್ಗದಿಂದ ತಮಿಳುನಾಡಿನ ಓಂ ಶಕ್ತಿ ದೇಗುಲಕ್ಕೆ ತೆರಳಿದ್ದ ಭಕ್ತರಿಂದ ಕೋವಿಡ್ ಭೀತಿ

Related Posts

ನಿಂಗಿದು ಬೇಕಿತ್ತಾ..! ಗಗನಚುಂಬಿ ಕಟ್ಟಡದ ಮೇಲೆ ಡಿಫರೆಂಟ್‌ ಪ್ರಪೋಸ್‌..ಪ್ರೇಮಿಗಳು ಅರೆಸ್ಟ್‌..!
Top Story

ನಿಂಗಿದು ಬೇಕಿತ್ತಾ..! ಗಗನಚುಂಬಿ ಕಟ್ಟಡದ ಮೇಲೆ ಡಿಫರೆಂಟ್‌ ಪ್ರಪೋಸ್‌..ಪ್ರೇಮಿಗಳು ಅರೆಸ್ಟ್‌..!

by ಪ್ರತಿಧ್ವನಿ
July 2, 2026
0

ನ್ಯೂಯಾರ್ಕ್: ಏನೋ ಮಾಡಲು ಹೋಗಿ ಏನು ಮಾಡಿದೆ ನೀನು ಎನ್ನುತ್ತರಲ್ಲಾ ಹಾಗಾಯ್ತು ಇಲ್ಲೋಬ್ಬ ಪ್ರೇಮಿಯ ಕಥೆ.. ಪ್ರಿಯತಮೆಗೆ ವಿಭಿನ್ನವಾಗಿ ಪ್ರೇಮ ನಿವೇದನೆ ಮಾಡಿಕೊಳ್ಳಬೇಕು ಎಂದು ಡಿಫರೆಂಟ್‌ ಪ್ಲಾನ್‌...

Read moreDetails
ವೆನೆಜುವೆಲಾದಲ್ಲಿ ಪ್ರಬಲ ಅವಳಿ ಭೂಕಂಪ: ಅವಶೇಷಗಳಡಿಯಲ್ಲಿ ಮಗು ಜನನ

ವೆನೆಜುವೆಲಾದಲ್ಲಿ ಪ್ರಬಲ ಅವಳಿ ಭೂಕಂಪ: ಅವಶೇಷಗಳಡಿಯಲ್ಲಿ ಮಗು ಜನನ

June 27, 2026
ಅನಿವಾಸಿ ಕನ್ನಡಿಗರ ಸಚಿವಾಲಯ ರಚನೆಗೆ ಜಾಗತಿಕ ಅಭಿಯಾನ ಆರಂಭ

ಅನಿವಾಸಿ ಕನ್ನಡಿಗರ ಸಚಿವಾಲಯ ರಚನೆಗೆ ಜಾಗತಿಕ ಅಭಿಯಾನ ಆರಂಭ

June 26, 2026
ಖಮೇನಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಮೋದಿಗೆ ಇರಾನ್​ ಆಹ್ವಾನ

ಖಮೇನಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಮೋದಿಗೆ ಇರಾನ್​ ಆಹ್ವಾನ

June 24, 2026
ತಾಯಿಯನ್ನು ಉಳಿಸಲು ಹೋದ ಮಗ ನ್ಯೂಯಾರ್ಕ್ ಪ್ರವಾಸದಲ್ಲಿ ದುರಂತ ಅಂತ್ಯ

ತಾಯಿಯನ್ನು ಉಳಿಸಲು ಹೋದ ಮಗ ನ್ಯೂಯಾರ್ಕ್ ಪ್ರವಾಸದಲ್ಲಿ ದುರಂತ ಅಂತ್ಯ

June 19, 2026
Next Post
ಶಿವಮೊಗ್ಗದಿಂದ ತಮಿಳುನಾಡಿನ ಓಂ ಶಕ್ತಿ ದೇಗುಲಕ್ಕೆ ತೆರಳಿದ್ದ ಭಕ್ತರಿಂದ ಕೋವಿಡ್ ಭೀತಿ

ಶಿವಮೊಗ್ಗದಿಂದ ತಮಿಳುನಾಡಿನ ಓಂ ಶಕ್ತಿ ದೇಗುಲಕ್ಕೆ ತೆರಳಿದ್ದ ಭಕ್ತರಿಂದ ಕೋವಿಡ್ ಭೀತಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada