ನಿಖರ ದಿನಾಂಕವಿಲ್ಲದ ವೀಡಿಯೊ ಒಂದು ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ಯುವಕನೊಬ್ಬ ವಿಮಾನ ನಿಲ್ದಾಣದಲ್ಲಿ ಮೂತ್ರ ವಿಸರ್ಜಿಸುತ್ತಿರುವುದನ್ನು ಕಾಣಬಹುದು. ಕೆಲವು ತಿಂಗಳ ಹಿಂದೆ ಮಾದಕವಸ್ತು ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಬಂಧನಕ್ಕೊಳಗಾದ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಈ ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಹೇಳಿಕೊಂಡಿವೆ.
ಆದರೆ, OpIndia ವೀಡಿಯೊದಿಂದ ಸ್ಟಿಲ್‌ಗಳನ್ನು ತೆಗೆದುಕೊಳ್ಳುವ ಕೆಲವು ರಿವರ್ಸ್ ಇಮೇಜ್ ಸರ್ಚ್ ಮಾಡಿದೆ. ತೆಳ್ಳಗಿನ ಚರ್ಮದ, ದೊಡ್ಡ ಕೂದಲುಳ್ಳ ಯುವ ವ್ಯಕ್ತಿ ಶಾರುಖ್ ಖಾನ್ ಮಗನಂತೆ ಕಾಣಬಹುದಾದರೂ, ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಹೇಳಿಕೊಳ್ಳುವುದಕ್ಕಿಂತ ವಾಸ್ತವ ವಿಭಿನ್ನವಾಗಿದೆ.
ಈ ಘಟನೆಯು ಡಿಸೆಂಬರ್ 17, 2013 ರಂದು ಸಂಭವಿಸಿದ್ದು, ವಿಮಾನ ನಿಲ್ದಾಣದ ನೆಲದ ಮೇಲೆ ಮೂತ್ರ ವಿಸರ್ಜಿಸಿದ ವ್ಯಕ್ತಿ ಕೆನಡಾದ ನಟ ಬ್ರಾನ್ಸನ್ ಪೆಲೆಟಿಯರ್ ಆಗಿದ್ದು, ಅವರು ಚಲನಚಿತ್ರ ಫ್ರ್ಯಾಂಚೈಸ್ ‘ದಿ ಟ್ವಿಲೈಟ್ ಸಾಗಾ’ದಲ್ಲಿ ಆಕಾರವನ್ನು ಬದಲಾಯಿಸುವ ತೋಳದ ಪಾತ್ರಕ್ಕೆ ಹೆಸರುವಾಸಿಯಾಗಿದ್ದಾರೆ.
ಲಾಸ್ ಏಂಜಲೀಸ್‌ನ LAX ವಿಮಾನ ನಿಲ್ದಾಣದಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಮುಂದಿನ ವಿಮಾನಕ್ಕಾಗಿ ಕಾಯುವಂತೆ ಪಾನಮತ್ತನಾದ 35 ವರ್ಷದ ನಟನನ್ನು ಕೇಳಿಕೊಂಡಿದ್ದರು. ಆ ವೇಳೆ ಕುಡಿದ ಅಮಲಿನಲ್ಲಿದ್ದ ಪೆಲ್ಲೆಟಿಯರ್ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜಿಸಿದ್ದಾನೆ. ಅವನ ಪಕ್ಕದಲ್ಲಿ ನಿಂತಿದ್ದ ಅಧಿಕಾರಿ ಎಷ್ಟೇ ಮನವಿ ಮಾಡಿದರೂ ಆ ನಟ ಬೆಲೆ ಕೊಟ್ಟಿರುವುದಿಲ್ಲ.
ನಂತರ ಇಬ್ಬರು ಭದ್ರತಾ ಅಧಿಕಾರಿಗಳು ಅವನ ಕಡೆಗೆ ಧಾವಿಸಿ ನಟನನ್ನು ನೆಲಕ್ಕೆ ಹಾಕಿ ಕೈಕೋಳ ಹಾಕುವುದನ್ನು ವಿಡಿಯೋದಲ್ಲಿ ಕಾಣಬಹುದು. ಘಟನಾ ಸ್ಥಳದಲ್ಲಿ ನೆರೆದಿದ್ದ ಜನರು ಈ ದೃಶ್ಯವನ್ನು ನೋಡಿ ಬೆಚ್ಚಿಬಿದ್ದಿದ್ದು, ಯಾರೋ “ಓ ಮೈ ಗಾಡ್!” ಎಂದು ಹೇಳುತ್ತಿರುವುದು ಕೇಳಬಹುದು.
ಓಟ್ಟಾರೆ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುತ್ತಿರುವ ವ್ಯಕ್ತಿ ಎಸ್‌ಆರ್‌ಕೆ ಅವರ ಪುತ್ರ ಆರ್ಯನ್ ಖಾನ್ ಅಲ್ಲ. ಅದು ಕೆನಡಾದ ನಟ ಬ್ರಾನ್ಸನ್ ಪೆಲ್ಲೆಟಿಯರ್ ಎಂಬ ಸತ್ಯ ಗೊತ್ತಾಗಿದೆ.

