ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಕರ್ನಾಟಕದಲ್ಲಿ ಕ್ರಿಶ್ಚಿಯನ್ ಧರ್ಮದ (Christian religion) ಮತ ಪ್ರಚಾರಕರಾಗಿದ್ದಾರಾ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ. ಹಿಂದೂಗಳ ಪ್ರತಿಯೊಂದು ಜಾತಿಗಳಲ್ಲಿ “ಕ್ರಿಶ್ಚಿಯನ್ ಧರ್ಮ”ವನ್ನು ತುರುಕುವ ಟಾಸ್ಕ್ ಅನ್ನು ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೊಟ್ಟಿದೆಯೇ ? ಎಂದು ಜೆಡಿಎಸ್ ಪೋಸ್ಟ್ ಮಾಡಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವುದು ಜಾತಿಗಣತಿ ಸಮೀಕ್ಷೆ ಅಲ್ಲವೇ ಅಲ್ಲ. ಹಿಂದೂಗಳ ಜಾತಿಗಳಲ್ಲಿರುವ ಜನರನ್ನು ಕುರುಬ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್ , ನಾಯಕ ಕ್ರಿಶ್ಚಿಯನ್, ಜಂಗಮ ಕ್ರಿಶ್ಚಿಯನ್ , ವಾಲ್ಮೀಕಿ ಕ್ರಿಶ್ಚಿಯನ್ , ಈಡಿಗ ಕ್ರಿಶ್ಚಿಯನ್ , ಬ್ರಾಹ್ಮಣ ಕ್ರಿಶ್ಚಿಯನ್ ,ಹೀಗೆ “ಹಿಂದೂ ಧರ್ಮಿಯರನ್ನು” ಛಿದ್ರಗೊಳಿಸಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿರುವುದರ ಸಮೀಕ್ಷಾ ವರದಿ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

ಸರ್ಕಾರದ ದುಡ್ಡಲ್ಲಿ ಇಂತಹ ವರದಿಯನ್ನು ಸಿದ್ಧಪಡಿಸಿ ಇಟಲಿ ಮಾತೆ ಸೋನಿಯಾ ಗಾಂಧಿಗೆ ಒಪ್ಪಿಸಲಾಗುತ್ತಿದೆಯೇ ಎಂಬ ಅನುಮಾನ ರಾಜ್ಯದ ಜನರಲ್ಲಿ ಮೂಡುತ್ತಿದೆ ಎಂದು ಮರು ಜಾತಿ ಜನಗಣತಿ ಬಗ್ಗೆ ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿದೆ.