
ಹುಡುಗಿಯರು (Girls) ಬೀದಿಯಲ್ಲಿ ಕಿತ್ತಾಡೋದನ್ನು ನೋಡೋದೇ ಚೆಂದ. ಜಡೆ ಜಡೆ ಹಿಡಿದು ಹೊಡೆದಾಡ್ತಿದ್ದರೆ ನೆರೆದವರು ನಿಂತು ನೋಡ್ತಾರೇ ವಿನಃ ಸಹವಾಸಕ್ಕೆ ಹೋಗಲ್ಲ. ಯಾಕೆಂದ್ರೆ ಇಬ್ಬರ ಮಧ್ಯೆ ಮೂರನೇಯವರು ಬಂದ್ರೆ ಬಂದವನೇ ವಿಲನ್ ಆಗೋಗ್ತಾನೆ. ಸೋಶಿಯಲ್ ಮೀಡಿಯಾ (social media) ದಲ್ಲಿ ಬೀದಿ ಬದಿ ಜಗಳಗಳ ಸಾಕಷ್ಟು ವಿಡಿಯೋ ವೈರಲ್ (video viral) ಆಗ್ತಾನೆ ಇರುತ್ತೆ.
ಗಂಡ ಹೆಂಡತಿ ಜಗಳ, ಹುಡುಗಿಯರ ಕಿತ್ತಾಟದ ಅನೇಕ ವಿಡಿಯೋಗಳು ಆಗಾಗ ಸದ್ದು ಮಾಡ್ತಿರುತ್ತವೆ. ಈಗ ಮತ್ತೊಂದು ವಿಡಿಯೋ ಪೋಸ್ಟ್ ಆಗಿದೆ. ಜಗಳ ಅಂದ್ರೆ ಇದು ಗುರು ಎನ್ನುತ್ತಿದ್ದಾರೆ ನೆಟ್ಟಿಗರು. ಪ್ಯಾಂಟ್ ಕಳಚಿಬಿದ್ರೂ ಕ್ಯಾರೇ ಎನ್ನದ ಹುಡುಗಿ, ಒಂದೇಟು ಹಾಕಿ ನಂತ್ರ ಪ್ಯಾಂಟ್ ಹಾಕಿಕೊಳ್ಳೋದನ್ನು ನೋಡಿ ಬಳಕೆದಾರರು ದಂಗಾಗಿದ್ದಾರೆ.
ಸೋಶಿಯಲ್ ಮೀಡಿಯಾ ಎಕ್ಸ್ ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ನಾಗಾಲ್ಯಾಂಡ್ ಹುಡುಗಿಯರು ಬೀದಿಯಲ್ಲಿ ಅಟ್ಟಾಡಿಸಿಕೊಂಡು ಹೊಡೆದಾಡಿದ್ದಾರೆ. ಗಲಾಟೆ ಎಷ್ಟು ಭಯಾನಕ ತಿರುವು ಪಡೀತು ಅಂದ್ರೆ ಒಬ್ಬ ಹುಡುಗಿ ಮೂರ್ಛೆ ಹೋದ್ಲು. ಆಕೆಯನ್ನು ರಕ್ಷಿಸಲು ನಿಂತಿದ್ದವರೆಲ್ಲ ಓಡಿ ಬಂದ್ರು. ಎಲ್ಲರೂ ಒಂದೇ ರೀತಿ ಡ್ರೆಸ್ ಹಾಕಿರೋದ್ರಿಂದ ಯಾವುದೋ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಇವರು ಎಂದು ಅಂದಾಜಿಸಲಾಗಿದೆ. ಆದ್ರೆ ಇದು ಸ್ಪಷ್ಟವಾಗಿಲ್ಲ.
ಈ ಹುಡುಗಿಯರು ಡಬ್ಲ್ಯೂ ಡಬ್ಲ್ಯೂ ಇ ನೋಡಿ, ಸಖತ್ತಾಗಿ ಪ್ರಾಕ್ಟೀಸ್ ಮಾಡಿದಂತಿದೆ. ಎಲ್ಲ ವೆರೈಟಿ ಫೈಟಿಂಗನ್ನು ನೀವು ಇಲ್ಲೇ ನೋಡ್ಬಹುದು. ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ಹುಡುಗಿಯರು ಇವರಾದ್ರೆ ಮೊದಲು ವಿವಿಯಿಂದ ಇವರನ್ನು ಹೊರಗೆ ಹಾಕಿ. ಇಂಥವರಿಂದ ವಾತಾವರಣ ಹದಗೆಡುತ್ತಿದೆ. ಹಾಗೆ ಬಿಟ್ರೆ ಮುಂದಿನ ದಿನಗಳಲ್ಲಿ ಇಂಥ ಘಟನೆ ಹೆಚ್ಚಾಗುತ್ತೆ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ.
Fainted after being beaten by a stick… #GirlsFight pic.twitter.com/JK7uLbPujG
— AndhBhakts Official (@a_bhaktOff) September 30, 2024
ಎರಡು ತಿಂಗಳ ಹಿಂದೆ ಹುಡುಗಿಯರ ಇಂಥದ್ದೇ ವಿಡಿಯೋ ಒಂದು ವೈರಲ್ ಆಗಿತ್ತು. ಲಕ್ನೋದ ಅಂಬೇಡ್ಕರ್ ಸ್ಮಾರಕ ಉದ್ಯಾನವನದಲ್ಲಿ ನಾಲ್ಕೈದು ಹುಡುಗಿಯರು ಕಿತ್ತಾಡಿಕೊಂಡಿದ್ದರು. ಇದನ್ನು ನೋಡಿದ ಬಳಕೆದಾರರು, ಬಿದ್ದು ಬಿದ್ದು ನಕ್ಕಿದ್ದರು. ಬೋಳು ತಲೆಯವರೇ ಸೇಫ್ ಅಂತ ಕಮೆಂಟ್ ಮಾಡಿದ್ರು.





