ರಷ್ಯಾ (Russia) ಮತ್ತು ಉಕ್ರೇನ್ (Ukraine) ನಡುವಿನ ಯುದ್ಧ ವರ್ಷಗಳಿಂದಲೂ ಮುಂದುವರೆಯುತ್ತಿದ್ದು ಇದೀಗ ಅದು ಮತ್ತಷ್ಟು ಉಗ್ರ ರೂಪ ಪಡೆದಿದೆ. ರಷ್ಯಾ ಮೇಲೆ ಭಯಾನಕ ಡ್ರೋನ್ ಅಟ್ಯಾಕ್ (Drone attack) ನಡೆಸಿರುವ ಉಕ್ರೇನ್ ವಿಧ್ವಂಸ ಸೃಷ್ಟಿಸಿದೆ. ಈ ದಾಳಿಯಿಂದ ರಷ್ಯಾ ಭಾರೀ ದೊಡ್ಡ ಹೊಡೆತ ಅನುಭವಿಸಿದೆ. ರಷ್ಯಾದ ಬರೋಬ್ಬರಿ 40 ಏರ್ ಕ್ರಾಫ್ಟ್ ಗಳು ಹಾನಿಗೊಳಗಾಗಿದೆ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ, ಒಂದೂವರೆ ವರ್ಷಗಳ ಕಾಲ ಪ್ಲ್ಯಾನ್ ಮಾಡಿ ರಷ್ಯಾದ ಮೇಲೆ ಈ ದಾಳಿ ಮಾಡಿದ್ದೇವೆ ಎಂದಿದ್ದಾರೆ.ಬರೋಬ್ಬರಿ 117 ಡ್ರೋನ್ ಬಳಸಿ ಪುಟ್ಟ ರಾಷ್ಟ್ರ ಉಕ್ರೇನ್ ರಷ್ಯಾ ಮೇಲೆ ಈ ಭೀಕರ ದಾಳಿ ನಡೆಸಿದೆ. ಆ ಮೂಲಕ ರಷ್ಯಾದ 40 ಯುದ್ದ ವಿಮಾನಗಳಿಗೆ ಉಕ್ರೇನ್ ಡ್ಯಾಮೇಜ್ ಮಾಡಿದೆ.

ಇದರ ಜೊತೆಗೆ ಈ ದಾಳಿಯಲ್ಲಿ ರಷ್ಯಾದ ಮಿಸೈಲ್ ಕ್ಯಾರಿಯರ್ ಗಳಿಗೂ ಭಾರಿ ಡ್ಯಾಮೇಜ್ ಆಗಿದೆ ಎನ್ನಲಾಗುತ್ತಿದೆ. ಆ ಮೂಲಕ ರಷ್ಯಾದ ಶೇ.34 ರಷ್ಟು ಮಿಸೈಲ್ ಕ್ಯಾರಿಯರ್ ಗಳಿಗೆ ಡ್ಯಾಮೇಜ್ ಆಗಿದೆ ಎಂಬ ವರದಿಯಿದೆ.ಇದೊಂದು ಬ್ರಿಲಿಯಂಟ್ ಆಪರೇಷನ್ ಎಂದು ಉಕ್ರೇನ್ ಅಧ್ಯಕ್ಷ ವಾಡ್ಲಿಮಿರ್ ಜೆಲೆನ್ ಸ್ಕೀ ಬಣ್ಣಿಸಿದ್ದಾರೆ.