ಕೆಲವರ ಪಾದಗಳಲ್ಲಿ ಇದ್ದಕ್ಕಿದ್ದ ಹಾಗೆ ಊತ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇದನ್ನ ಹೆಚ್ಚಾಗಿ 40ಕ್ಕಿಂತ ಹೆಚ್ಚು ವಯಸ್ಸಾದವರಲ್ಲಿ ನಾವು ಈ ಸಮಸ್ಯೆಯನ್ನು ನೋಡ್ತೀವಿ. ಈ ಊತ ಕಾಣಿಸಿಕೊಳ್ಳುವುದು ತುಂಬಾ ಸಮಯ ಕೂತಿರುವುದರಿಂದ ಅಥವಾ ದೀರ್ಘಕಾಲದವರೆಗೂ ನಿಂತು ಕೊಂಡಿರುವುದಿಂದ, ಕೆಲವರಿಗೆ ಹೆಚ್ಚಿನ ಹೊತ್ತು ಟ್ರಾವೆಲ್ ಮಾಡುವುದರಿಂದ ಜಾಸ್ತಿ ವಾಕ್ ನಿಂದ ಕೂಡ ಪದ ಸ್ವೆಲ್ ಆಗುತ್ತದೆ..ಆದ್ರೆ ಇದರ ಬಗ್ಗೆ ಹೆಚ್ಚು ಯೋಚಿಸುವುದು ಬೇಡ..ಬದಲಿಗೆ ಈ ಮದ್ದನ್ನ ಮಾಡಿದ್ರೆ ಪಾದದ ಊತ ಬೇಗನೆ ನಿವಾರಣೆ ಆಗುತ್ತದೆ..
ಆಪಲ್ ಸೈಡರ್ ವಿನಿಗರ್
ಇದನ್ನ ಮಾಜಿಕಲ್ ಇಂಗ್ರಿಡೆಂಟ್ ಅಂತನು ಹೇಳ್ತಾರೆ. ಆಪಲ್ ಸೈಡರ್ ವಿನಿಗರ್ ಅಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಿರುವುದರಿಂದ ಸ್ವೆಲ್ಲಿಂಗ್ ನಿವಾರಿಸೋದಕ್ಕೆ ಸಹಾಯ ಮಾಡುತ್ತೆ. ಇದನ್ನ ಬಳಸುವ ರೀತಿ ಒಂದು ಬಕೆಟ್ ಅಲ್ಲಿ 3 ಟೇಬಲ್ ಸ್ಪೂನ್ ಅಷ್ಟು ಆಪಲ್ ಸೈಡರ್ ವಿನಿಗರ್ ಅನ್ನು ಹಾಕಿ ಅದಕ್ಕೆ ಬಿಸಿ ನೀರನ್ನ ಹಾಕಿ ನಿಮ್ಮ ಪಾದಗಳನ್ನ ಆ ನೀರಿನಲ್ಲಿ ಇಟ್ಟು ಇಪ್ಪತ್ತು ನಿಮಿಷಗಳ ಕಾಲ ಬಿಟ್ಟು ತೆಗೆಯುವುದರಿಂದ ನಿಮ್ಮ ಪಾದಗಳ ಊತವನ್ನು ಕಡಿಮೆ ಮಾಡುವುದಕ್ಕೆ ತುಂಬಾನೇ ಉಪಕಾರಿ.
ಸಾಸಿವೆ ಎಣ್ಣೆ
ಕಾಲುಗಳು ಹೆಚ್ಚು ಸ್ವೇಲ್ ಆದಾಗ ಸ್ವಲ್ಪ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ನಿಮ್ಮ ಪಾದಗಳಿಗೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ. ಅರ್ಧ ಗಂಟೆ ಬಿಟ್ಟು ಬೆಚ್ಚಗಿನ ನೀರನ್ನ ಕಾಲು ಮೇಲೆ ಹಾಕಿಕೊಳ್ಳುವುದರಿಂದ ಪಾದಗಳ ಊತ ಬೇಗನೆ ನಿವಾರಣೆ ಆಗುತ್ತದೆ ಇದನ್ನ ತಪ್ಪದೆ ಪ್ರತಿದಿನ ನೀವು ಪಾಲಿಸಬೇಕು.
ಕಲ್ಲುಪ್ಪು
ಬಿಸಿ ನೀರಿಗೆ ಕಲ್ಲುಪ್ಪನ್ನ ಸೇರಿಸಿ ನಂತರ ನಿಮ್ಮ ಪಾದಗಳನ್ನ ಅದರಲ್ಲಿ ನೆನೆಸಿ ಅರ್ಧ ಗಂಟೆ ಬಿಟ್ಟು ತೆಗೆಯಿರಿ. ಪ್ರತಿದಿನ ಇದನ್ನು ಮಾಡುವುದರಿಂದ ಕಾಲಿನ ಊತ ಬೇಗನೆ ಕಡಿಮೆ ಆಗುತ್ತೆದೇ.. ಇಲ್ಲವಾದರೆ ಕಲ್ಲುಪ್ಪನ್ನ ಬಿಸಿ ಮಾಡಿ ಒಂದು ಬಟ್ಟೆಯಲ್ಲಿ ಕಟ್ಟಿ ಶಾಖವನ್ನು ನಿಮ್ಮ ಪಾದಗಳಿಗೆ ಕೊಡುವುದರಿಂದ ಬೇಗನೆ ಊತ ನಿವಾರಣೆಯಾಗುತ್ತದೆ..
ಇದೆಲ್ಲದರ ಜೊತೆಗೆ ಹೆಚ್ಚಿನ ಮಟ್ಟದಲ್ಲಿ ನೀರನ್ನ ಕುಡಿಯಿರಿ, ಮಸಾಜ್ ಮಾಡಿ, ವ್ಯಾಯಾಮ ಮಾಡಿ ಪೌಷ್ಠಿಕ ಆಹಾರವನ್ನು ತಿನ್ನಿ ಆರೋಗ್ಯವಾಗಿರಿ..