ಹಿಜಾಬ್, ಜಟ್ಕಾ ಕಟ್, ಬೈಬಲ್, ಮಸೀದಿಯ ಧ್ವನಿವರ್ದಕಗಳಂತಹ ವಿಚಾರವನ್ನು ಮುಂದಿರಿಸಿ ದ್ವೇಷ ಸಂಘರ್ಷ ನಡೆಯುತ್ತಿರುವ ಇಂತಹ ಕಾಲಘಟ್ಟದಲ್ಲಿ ಸಾಮರಸ್ಯ ಬೆಸೆಯುವ, ಸೌಹಾರ್ದ ಸಹಬಾಳ್ವೆಯಿಂದ ಬದುಕುತ್ತಿರುವುದು ಕಾಣಸಿಗುತ್ತದೆ ಎಂದರೆ ನೀವು ನಂಬ್ತಿರಾ?.
ಹೌದು, ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಅಂತಹದ್ದೇ ಒಂದು ಸಹಭಾಳ್ವೆಯಿಂದ ಬದಕುತ್ತಿರುವುದನ್ನು ನೀವು ಕಾಣಬಹುದು. ದೇವಸ್ಥಾನ ಮತ್ತು ಮಸೀದಿ ಎರಡು ಪರಸ್ಪರ ಕೇವಲ 50 ಮೀಟರ್ ದೂರದಲ್ಲಿದ್ದರೂ ಸಹ ಎರಡು ಧರ್ಮದ ಜನರು ಪರಸ್ಪರ ಗೌರವಾಗಿ ನಡೆದುಕೊಳ್ಳುವ ಸೌಹಾರ್ದ ದೃಶ್ಯ ನಿಮಗೆ ಕಾಣಸಿಗುತ್ತದೆ.
ಪಾಟ್ನಾದಲ್ಲಿರುವ ಮಹಾವೀರ ಮಂದಿರದಲ್ಲಿ ಧ್ವನಿವರ್ಧಕಗಳು ಇಡೀ ದಿನ ಭಜನೆ ಕೀರ್ತನೆಯಲ್ಲಿ ಮುಳುಗಿದ್ದರೂ ಆಜಾನ್ ಸಮಯದಲ್ಲಿ ತನ್ನ ಭಜನೆ ಧ್ವನಿವರ್ಧಕಗಳನ್ನು ಆಫ್ ಮಾಡುತ್ತದೆ. ಮಸೀದಿಯು ಸಹ ದೇವಾಲಯದ ಭಕ್ತರನ್ನು ಪರಸ್ಪರ ಗೌರವದ ಸಂಕೇತವಾಗಿ ನೋಡಿಕೊಳ್ಳುತ್ತದೆ. ಪರಸ್ಪರ ಒಂದಾಣಿಕೆ, ಸೌಹಾರ್ದದಿಂದ ಬದುಕ್ಕುತ್ತಿರುವುದನ್ನು ನೀವಿಲ್ಲಿ ಕಾಣಬಹುದು.
ಮಾಧ್ಯಮಗಳೊಂದಿಗೆ ಮಾತನಾಡಿದ ಪಾಟ್ನಾದಲ್ಲಿರುವ ಮಹಾವೀರ ಮಂದಿರದ ಅಧ್ಯಕ್ಷ ಕಿಶೋರ್ ಕುನಾಲ್, “ನಮಗೆ ಕೂಗುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ ಅಥವಾ ಭಜನೆ-ಕೀರ್ತನೆ ಮಾಡಿದರೆ ಅವರಿಗೂ ಸಹ ಯಾವುದೇ ಸಮಸ್ಯೆ ಇಲ್ಲ. ನಾವು ನಮ್ಮ ನಡುವೆ ಸಹೋದರತ್ವವನ್ನು ಕಾಪಾಡಿಕೊಳ್ಳುತ್ತೇವೆ ಮತ್ತು ಆಗಾಗ್ಗೆ ಪರಸ್ಪರ ಸಹಾಯ ಮಾಡುತ್ತೇವೆ” ಎಂದು ಹೇಳಿದ್ದಾರೆ.
ಮತ್ತೊಂದೆಡೆ, ಮಸೀದಿ ಅಧ್ಯಕ್ಷ ಫೈಸಲ್ ಇಮಾಮ್, “ರಾಮ ನವಮಿಯಂದು ದೇವಸ್ಥಾನಕ್ಕೆ ಬರುವ ಭಕ್ತರು ಮಸೀದಿಯ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು ನಾವು ಅವರಿಗೆ ಶರ್ಬತ್ ನೀಡುವ ಮೂಲಕ ಹಬ್ಬವನ್ನು ಆಚರಿಸದ್ದೇವೆ” ಎಂದು ಹೇಳಿದರು.
ಮುಂದುವರೆದು, “ದೇಗುಲದಲ್ಲಿ ಧ್ವನಿವರ್ಧಕಗಳು ದಿನವಿಡೀ ಭಜನೆ-ಕೀರ್ತನೆಯನ್ನು ನುಡಿಸುತ್ತವೆ ಆದರೆ ಗೌರವದ ಸಂಕೇತವಾಗಿ ಆಜಾನ್ ಸಮಯದಲ್ಲಿ ಆಫ್ ಮಾಡಲಾಗುತ್ತದೆ. ನಮ್ಮಲ್ಲಿ ಸೌಹಾರ್ದತೆಯ ಭಾವವಿದೆ” ಎಂದು ಇಮಾಮ್ ಹೇಳಿದ್ದಾರೆ.