ದೆಹಲಿ : ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವ ನಡುವೆಯೇ ಕಾಂಗ್ರೆಸ್ ತನ್ನ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. 3ನೇ ಪಟ್ಟಿಯಲ್ಲಿ 43 ಅಭ್ಯರ್ಥಿಗಳ ಹೆಸರನ್ನು ಎಐಸಿಸಿ ಬಿಡುಗಡೆ ಮಾಡಿದೆ.

ಅಳೆದು ತೂಗಿ ಕಾಂಗ್ರೆಸ್ ತನ್ನ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಥಣಿಯಿಂದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಅರಸೀಕೆರೆಯಿಂದ ಶಿವಲಿಂಗೇಗೌಡ, ಮೂಡಿಗೆರೆ ನಯನಾ ಮೊಟಮ್ಮ,ಕೋಲಾರದಿಂದ ಕೊತ್ತೂರು ಜಿ. ಮಂಜುನಾಥ, ನವಲಗುಂದದಿಂದ ಎನ್ಹೆಚ್ ಕೋನರೆಡ್ಡಿ ಸೇರಿದಂತೆ ಒಟ್ಟು 43 ಕ್ಷೇತ್ರಗಳಿಗೆ ಪಟ್ಟಿ ಬಿಡುಗಡೆಯಾಗಿದೆ.

ಇನ್ನುಳಿದ 15 ಕ್ಷೇತ್ರಗಳಿಗೆ ನಾಲ್ಕನೇ ಪಟ್ಟಿಯನ್ನು ಶೀಘ್ರದಲ್ಲಿಯೇ ಕಾಂಗ್ರೆಸ್ ಬಿಡುಗಡೆ ಮಾಡಲಿದೆ. ಬಿಜೆಪಿ ಬಂಡಾಯ ನಾಯಕರ ನಡೆ ನೋಡಿಕೊಂಡು ಈ 15 ಕ್ಷೇತ್ರಗಳಿಗೆ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ.