ಪ್ರತಿಯೊಬ್ಬರಿಗೂ ಒಂದು ಏಜ್ ಬಂದ ಮೇಲೆ ಮೊಡವೆ ಮೂಡುವುದು ಸಹಜ.. ಮುಖದಲ್ಲಿ ಒಂದೆರಡು ಮೊಡವೆ ಆದ್ರೆ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ತಿವಿ, ಅದನ್ನು ಹೇಗೋ ಶಮನ ಮಾಡಲು ಸಾಕಷ್ಟು ಪ್ರಯತ್ನವನ್ನು ಮಾಡ್ತೀವಿ.ಹಾಗೇ ಮಾರ್ಕ್ ಉಳಿಯದಂತೆ ಕಾಳಜಿ ವಹಿಸುತ್ತಿವಿ.. ಆದ್ರೆ ಕೆಲವರಿಗೆ ಮುಖದ ತುಂಬೆಲ್ಲ ಪಿಂಪಲ್ಸ್ ಆಗಿರುತ್ತದೆ.. ಒಂದೇಡೆ ಈ ಮೊಡವೆಗಳು ಮುಖದ ಅಂದವನ್ನು ಕೆಡಿಸುತ್ತದೆ. ಹಾಗೂ ಅದರಿಂದಾಗುವ ನೋವು ಅಬ್ಬಬ್ಬಾ ..ಮೊಡವೆಗಳಾದಗ ಅದನ್ನ ನೀವಾರಿಸಿಕೊಳ್ಳುವುದಕ್ಕೆ ಸಾಕಷ್ಟು ಕ್ರೀಮ್‌ಗಳನ್ನು ಬಳಸುತ್ತೀವಿ,ಮನೆಮದ್ದಿನ ಪ್ರಯೋಗ ಹೆಚ್ಚಿರುವತ್ತದೆ..ಇದೆಲ್ಲದರ ಜೊತೆಗೆ ನಮ್ಮ ಆಹಾರದ ಮೇಲು ನಾವೂ ನಿಗವಹಿಸಬೇಕು.. ಸಿಕ್ಕಿದ್ದೆಲ್ಲ ತಿಂದ್ರೆ ಮೊಡವೆಗಳು ಹೆಚ್ಚಾಗೋದು ಕಂಡಿತಾ.. ಮೊಡವೆಗಳು ಹೆಚ್ಚಾದಾಗ ಈ ಪದಾರ್ಥಗಳನ್ನು ಸೆವಿಸದಿರುವುದು ಒಳ್ಳೆಯದು..ಇದರಿಂದ ಮೊಡವೆಗಳನ್ನು ನೀವೂ..ಶಮನ ಮಾಡಬಹುದು..

ಹಾಲು
ಹಾಲನ್ನು ಕುಡಿಯುವುದರಿಂದ ನಿಮ್ಮ ಮುಖದಲ್ಲಿರುವ ಮೊಡವೆಗಳನ್ನು ಹೆಚ್ಚು ಮಾಡುತ್ತದೆ. ಆದರೆ ಇದರಲ್ಲಿ ಕ್ಯಾಲ್ಸಿಯಂ ಹೆಚ್ಚಿರುವುದರಿಂದ ನಮ್ಮ ದೇಹಕ್ಕೆ ತುಂಬಾನೆ ಒಳ್ಳೆಯದು.ಹಾಲು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿದ್ದರೂ, ಇದು ಕೊಬ್ಬಿನ ಬೆಳವಣಿಗೆಯ ಹಾರ್ಮೋನ್‌ಗಳಲ್ಲಿ ಅಧಿಕವಾಗಿದೆ.ಇದರಿಂದ ಮೊಡವೆಗಳಾಗುವುದು ಸಹಜ.ಹಾಗೂ ಹಾಲಿನಿಂದ ಮಾಡಿದ ಯಾವುದೆ ಆಹರವನ್ನು ಅವಾಯ್ಡ್ ಮಾಡುವುದು ಉತ್ತಮ..

ಫಾಸ್ಟ್ ಫುಡ್
ಫಾಸ್ಟ್ ಫುಡ್ ಸಾಮಾನ್ಯವಾಗಿ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ, ಅಂದರೆ ಸಕ್ಕರೆ ಅಂಶವು ಹೆಚ್ಚು ಹಾಗೂ ಕ್ಯಾಲೋರಿಗಳು, ಕೊಬ್ಬು ಎಲ್ಲವು ಜಾಸ್ತಿ ಇರುವುದರಿಂದ ನಿಮ್ಮ ಚರ್ಮದ ಮೇಲೆ ಕೆಟ್ಟದಾಗಿ ಪರಿಣಾಮನ್ನು ಬೀರುತ್ತದೆ. ಇದರಿಂದಾಗಿ ಮೊಡವೆಗಳು ಹೆಚ್ಚಾಗುತ್ತದೆ..

ಕಾಫಿ
ಕಾಫಿಯಿಂದ ಕುಡಿಯುವುದರಿಂದ ಕೂಡಾ ಮೊಡವೆಗಳು ಹೆಚ್ಚಾಗುತ್ತದೆ.. ಆದ್ರೆ ಇದನ್ನು ಜನ ಹೆಚ್ಚಾಗಿ ನಂಬುವುದಿಲ್ಲಾ..ಕಾಫಿಯಿಂದ ಬಳಸಿದಂತ ಕೆಫೇನ್‌ನಿಂದ ಮೊಡವೆಗಳು ಹೆಚ್ಚಾಗುತ್ತದೆ.. ಹಾಗೂ ಕಾಫಿ ಅಲ್ಲಿ ಹಾಲು ಮತ್ತು ಸಕ್ಕರೆಯನ್ನು ಬಳಸಲಾಗುತ್ತದೆ ಇದೇರಡು ಕೂಡ ಮೊಡವೆಗಳನ್ನು ಹೆಚ್ಚು ಮಾಡುವ ಲಕ್ಷಣಗಳನ್ನು ಹೊದಿರುತ್ತದೆ.

ಇಷ್ಟು ಮಾತ್ರವಲ್ಲದೆ ಎಣ್ಣೆಯಲ್ಲಿ ಖರಿದ ಪದಾರ್ಥಗಳು.ಮುಖ್ಯವಾಗಿ ಪೊಟಾಟೊ ಚಿಪ್ಸ್, ಚಾಕ್‌ಲೇಟ್,ವೈಟ್‌ಬ್ರೆಡ್,ಸಕ್ಕರೆ ಇವೆಲ್ಲವನ್ನು ತಕ್ಕ ಮಟ್ಟಿಗೆ ಕಡಿಮೆ ಮಾಡಿದ್ರೆ ನಿಮ್ಮ ಮುಖದಲ್ಲಿರುವ ಮೊಡವೆಗಳನ್ನು ಶಮನ ಮಾಡುವುದಕ್ಕೆ ಸಹಾಯಕಾರಿ..











