ಬಸ್, ರೈಲು, ಮೆಟ್ರೋದಲ್ಲಿ ಸೀಟಿನ ವಿಚಾರವಾಗಿ ಪ್ರಯಾಣಿಕರ ನಡುವೆ ನಡೆಯುವ ರಂಪಾಟಗಳ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಇಲ್ಲೊಂದು ಕಡೆ ಅಂತಹದ್ದೇ ಘಟನೆ ನಡೆದಿದ್ದು, ಸೀಟಿನ ವಿಚಾರವಾಗಿ ಮಹಿಳೆಯರಿಬ್ಬರು ಮೆಟ್ರೋದಲ್ಲಿ ಜಗಳವಾಡಿದ್ದಾರೆ. ಹೌದು ಇವರಿಬ್ಬರ ನಡುವಿನ ವಾಗ್ವಾದ ಅತಿರೇಕಕ್ಕೆ ತಿರುಗಿ ಕೊನೆಗೆ ಜುಟ್ಟು ಎಳೆದಾಡಿ ದೊಡ್ಡ ರಂಪಾಟವನ್ನೇ ಮಾಡಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗುತ್ತಿದೆ.
ದೆಹಲಿ ಮೆಟ್ರೋ ಪ್ರಯಾಣಿಕರ ಕಿತಾಪತಿಗಳಿಂದಲೇ ಸುದ್ದಿಯಲ್ಲಿರುತ್ತದೆ. ಯುವತಿಯರು ಅರೆಬರೆ ತೊಟ್ಟು ರೀಲ್ಸ್ ಮಾಡಿದಂತಹ, ಮೆಟ್ರೋದಳಗೆ ಪ್ರೇಮಿಗಳು ರೊಮ್ಯಾನ್ಸ್ ಮಾಡಿದಂತಹ ಘಟನೆಗಳಿಗೆ ಸಂಬಂಧಪಟ್ಟ ವಿಡಿಯೋಗಳು ವೈರಲ್ ಆಗಿದ್ದವು.
ಈಗ ಅಂತಹದ್ದೇ ಘಟನೆ ನಡೆದಿದ್ದು, ಸೀಟಿನ ವಿಚಾರವಾಗಿ ಮಹಿಳೆಯರಿಬ್ಬರು ಜಗಳವಾಡಿದ್ದಾರೆ. ಇವರಿಬ್ಬರನ ನಡುವಿನ ವಾಗ್ವಾದ ಕೊನೆಗೆ ಜುಟ್ಟು ಎಳೆದಾಡಿ ದೊಡ್ಡ ರಂಪಾಟವನ್ನೇ ಮಾಡಿದ್ದಾರೆ. ದೆಹಲಿ ಮೆಟ್ರೋದಲ್ಲಿ ಸೀಟಿನ ವಿಚಾರವಾಗಿ ಪ್ರಯಾಣಿಕರ ಮಧ್ಯೆ ನಡೆಯುವ ಜಗಳಗಳು ಕೇಳಿಬರುತ್ತಿರುತ್ತವೆ.
Delhi.connection ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಸೀಟಿನಲ್ಲಿ ಕುಳಿತ ಹಾಗೂ ಆಕೆಯ ಪಕ್ಕ ನಿಂತ ಮಹಿಳೆಯ ನಡುವೆ ಮಾತಿನ ಚಕಮಕಿ ದೃಶ್ಯವನ್ನು ನೋಡಬಹುದು. ಮಹಿಳೆ ಸೀಟಿನಿಂದ ಎದ್ದು ನಿಂತು ಇನ್ನೊಬ್ಬ ಮಹಿಳೆಯ ಜುಟ್ಟು ಎಳೆದಾಡಿ ಜೋರು ಜೋರಾಗಿ ಜಗಳವಾಡಿದ್ದಾಳೆ. ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 4.2 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ.
https://www.instagram.com/reel/DEbwRDTyeMp/?igsh=dHpmd3gxMWRta3Q0