ಗೃಹ ಜೊತೆ ಉಚಿತ ವಿದ್ಯುತ್ ಯೋಜನೆಗೆ ಸಂಬಂಧಪಟ್ಟಂತೆ ಸಾಕಷ್ಟು ಸುದ್ದಿಗಳು ನಿನ್ನೆ ರಾತ್ರಿಯಿಂದ ಹರಿದಾಡುತ್ತವೆ ಅದರಲ್ಲೂ ಪ್ರಮುಖವಾಗಿ ಗೃಹ ಜೊತೆ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಇದುವರೆಗೂ ನಿಗದಿಯಾಗಿರಲಿಲ್ಲ ಆದರೆ ಈಗ ಗ್ರಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಕಡೆ ದಿನಾಂಕ ನಿಗದಿಯಾಗಿದೆ ಆದಷ್ಟು ಬೇಗ ಅರ್ಜಿ ಸಲ್ಲಿಸಬೇಕು ಅಂತ ಕೆಲ ಮಾಧ್ಯಮಗಳು ವರದಿಯನ್ನು ಪ್ರಕಟಿಸಿದ್ದವು
ಆದರೆ ಗೃಹಜೋತಿ ಯೋಜನೆಗೆ ಸಂಬಂಧಪಟ್ಟಂತೆ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ ಇದುವರೆಗೂ ಕೂಡ ಗೃಹಜೋತಿ ಯೋಜನೆಗೆ ಯಾವುದೇ ರೀತಿಯಾದ ಕಡೆಯ ದಿನಾಂಕವನ್ನು ಅಧಿಕೃತವಾಗಿ ನಿಗದಿ ಮಾಡಲಾಗಿಲ್ಲ ಇದು ಕೇವಲ ಸುಳ್ಳು ಸುದ್ದಿಯಾಗಿದ್ದು ಅಧಿಕೃತ ಮಾಹಿತಿ ಹಾಗೆ ಏನಾದರೂ ಇದ್ದರೆ ತಾವೇ ನೀಡುವುದಾಗಿ ಇಂಧನ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ

ಇನ್ನು ಗೃಹಜ್ಯೋತಿ ಯೋಜನೆಯ ಕಾಲಮಿತಿಯ ಬಗ್ಗೆ ಸ್ವತಃ ಇಂಧನ ಸಚಿವ ಕೆ.ಜೆ ಜಾರ್ಜ್ ಸ್ಪಷ್ಟ ಪಡಿಸಿದ್ದು, ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಕಾಲಮಿತಿ ಇಲ್ಲ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ.
ಈ ವಿಚಾರದ ಕುರಿತು ವಿಧಾನಸಭೆಯಲ್ಲಿ ಬುಧವಾರ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರಿಸಿದ ಅವರು, ಜುಲೈ ತಿಂಗಳ ಗೃಹಜ್ಯೋತಿ ಸೌಲಭ್ಯ ಪಡೆಯಲು ಇದೇ ತಿಂಗಳ 25 ಮತ್ತು 26ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ ಅಂತಹ ಅರ್ಜಿ ಸಲ್ಲಿಸಿದವರಿಗೆ ಆಗಸ್ಟ್ ಮೊದಲ ವಾರದಲ್ಲಿ ಬಿಲ್ ಶೂನ್ಯ ಬರಲಿದೆ ಎಂದರು.

ಗೃಹ ಜ್ಯೋತಿ ಯೋಜನೆಗಾಗಿ ಎರಡು ತಿಂಗಳ ಬಳಿಕ ಎಲ್ಲಾ ವಿದ್ಯುತ್ ಕಚೇರಿಗಳಲ್ಲಿ ಅದಾಲತ್ ಆಯೋಜಿಸಲಾಗುತ್ತದೆ. ಎಲ್ಲ ಅರ್ಹರಿಗೂ ಸೌಲಭ್ಯ ಕಲ್ಪಿಸಿಕೊಡುವಂತ ಕೆಲಸ ಮಾಡಲಾಗುವುದು ಎಂದು ಹೇಳಿದ್ದರು
ಹೀಗಿದ್ದರೂ ಕೂಡ ಕೆಲ ಕಿಡಿಗೇಡಿಗಳು ಗೃಹಜೋತಿ ಯೋಜನೆಯ ಕುರಿತಾಗಿ ನಿನ್ನೆ ರಾತ್ರಿಯಿಂದಲೂ ಸುಳ್ಳು ಸುದ್ದಿ ಹಬ್ಬಿಸುವ ಕೆಲಸವನ್ನು ಮಾಡುತ್ತಿದ್ದು ಇದರಿಂದ ಸಾಕಷ್ಟು ಜನ ತೊಂದರೆ ಅನುಭವಿಸುವಂತೆ ಮಾತ್ರ ಸುಳ್ಳಲ್ಲ











