
ರಾಜ್ಯ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಹೊಂದಾಣಿಕೆಯಿಲ್ಲ ಅನ್ನೋದು ಮಲ್ಲಿಕಾರ್ಜುನ ಖರ್ಗೆ ಮಾತಿನಿಂದ ಸ್ಪಷ್ಟವಾಗಿದೆ ಎಂದಿದ್ದಾರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ. ಹುಬ್ಬಳ್ಳಿಯಲ್ಲಿ ಮಾತನಾಡಿದ ಜೋಶಿ, ಈ ಹಿಂದೆಯೂ ಹೊಂದಾಣಿಕೆ ಇರಲಿಲ್ಲ. ಮುಂದೆಯೂ ಹೊಂದಾಣಿಕೆ ಆಗಲ್ಲ ಎಂದಿದ್ದಾರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ಡಿ.ಕೆ ಶಿವಕುಮಾರ್ ಒಗ್ಗಟ್ಟಾಗಿ ಹೋಗಬೇಕು ಅಂತ ಖರ್ಗೆ ಹೇಳಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರು ಆ ಮಾತು ಹೇಳಿದ್ದಾರೆ ಅಂದ್ರೆ ಇವಾಗ ಒಗ್ಗಟ್ಟು ಇಲ್ಲ ಅಂತಾ ಅರ್ಥ. ನಾನು ಖರ್ಗೆ ಅವರ ವಿಡಿಯೋ ನೋಡಿದ್ದೇನೆ. ಅವರಲ್ಲಿ ಒಗ್ಗಟ್ಟಿಲ್ಲ ಎಂದು ರಾಷ್ಟ್ರೀಯ ನಾಯಕರು ಒಪ್ಪಿಕೊಂಡಿದ್ದಾರೆ. ನಮ್ಮ ತಂದೆ ಇನ್ನು ಮೂರು ಬಜೆಟ್ ಮಂಡನೆ ಮಾಡ್ತಾರೆ ಅಂತಾ ಸಿಎಂ ಪುತ್ರ ಹೇಳ್ತಾರೆ. ಮತ್ತೊಂದು ಕಡೆ ಡಿ.ಕೆ ಶಿವಕುಮಾರ್ ಬಜೆಟ್ ಮಂಡನೆ ಮಾಡ್ತಾರೆ ಅಂತಾ ಕೆಲವರು ಹೇಳ್ತಾರೆ. ಖರ್ಗೆ ಹಿಂದೆಯೂ ಇದರ ಬಗ್ಗೆ ಮಾತಾಡಿದ್ರು. ಖರ್ಗೆ ಅವರ ಮಾತಿಗೆ ಯಾರೂ ಬೆಲೆ ಕೊಡ್ತಿಲ್ಲ ಎಂದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರ ಮಾತಿನ ಅರ್ಥ ಹಿಂದೆಯೂ ಒಗ್ಗಟ್ಟಾಗಿ ಹೋಗಿಲ್ಲ, ಇವಾಗ ಒಗ್ಗಟ್ಟಾಗಿ ಹೋಗಲ್ಲ, ಮುಂದೆನೂ ಹೋಗಲ್ಲ ಎಂದು ಅಣಕವಾಡಿದ್ದಾರೆ ಪ್ರಹ್ಲಾದ್ ಜೋಶಿ. ಇನ್ನೂ ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ರಾಜಕಾರಣ ಮಾಡೋದು ಒಳ್ಳೆದಲ್ಲ, ನಾವೂ ಸಹ ದಕ್ಷಿಣ ಭಾರತದವರು. ಕರ್ನಾಟಕ, ತೆಲಂಗಾಣ, ಆಂಧ್ರದಲ್ಲಿ ನಾವ ದೊಡ್ಡ ಪ್ರಮಾಣದದ ಸಂಸದರಿದ್ದೇವೆ. ಕರ್ನಾಟಕದಲ್ಲಿ 1996 ರಿಂದ ನಾವೇ ಹೆಚ್ಚು ಸಂಸದರು ಇದ್ದೇವೆ. ಯಾವ ವ್ಯತ್ಯಾಸವೂ ಆಗಲ್ಲ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ.

ತೆಲಂಗಾಣದಲ್ಲಿ ಸಿಎಂ ಸಿದ್ದರಾಮಯ್ಯ ನಮ್ಮ ಬಳಿ ದುಡ್ಡು ಇಲ್ಲ ಅಂದಿದ್ದಾರೆ. ಕಾಂಗ್ರೆಸ್ ಸರ್ಕಾರ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಮಾತಾಡ್ತಿದ್ದಾರೆ. ಸ್ಟಾಲಿನ್ ಸರ್ಕಾರ ಕಡು ಭ್ರಷ್ಟ ಸರ್ಕಾರ. ಅವರಿಗೆ ಉದ್ಯೋಗ ಇಲ್ಲ. ಹೀಗಾಗಿ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಚರ್ಚೆ ಆಗಬೇಕಾಗಿರೋದು ಒನ್ ನೇಷನ್ ಒನ್ ಎಲೆಕ್ಷನ್ ಅಲ್ಲ.. ರಾಜ್ಯ ಸರ್ಕಾರದ ಗ್ಯಾರಂಟಿ ಬಗ್ಗೆ ಚರ್ಚೆ ಆಗಬೇಕು ಎಂದಿದ್ದಾರೆ.
